ದೇವರ ಕಂಡುಕೊಳ್ಳಲಿಕ್ಕೆ ಶರಣ ಸಂಸ್ಕೃತಿ ಉತ್ಸವ ಒಂದು ಮಾರ್ಗ: ಹೊಸಮಠ ಶ್ರೀಗಳು

| Published : Mar 15 2024, 01:18 AM IST

ದೇವರ ಕಂಡುಕೊಳ್ಳಲಿಕ್ಕೆ ಶರಣ ಸಂಸ್ಕೃತಿ ಉತ್ಸವ ಒಂದು ಮಾರ್ಗ: ಹೊಸಮಠ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯದೇವರನ್ನು ಕಂಡುಕೊಳ್ಳಲಿಕ್ಕೆ ಅನೇಕ ಮಾರ್ಗಗಳಿವೆ. ಅದರಲ್ಲಿ ಶರಣ ಸಂಸ್ಕೃತಿ ಉತ್ಸವ ಒಂದು ಎಂದು ಹಾವೇರಿ ಹೊಸಮಠ ಬಸವ ಶಾಂತಲಿಂಗ ಶ್ರೀಗಳು ಹೇಳಿದರು.

ಶಿಗ್ಗಾಂವಿ: ಮನುಷ್ಯದೇವರನ್ನು ಕಂಡುಕೊಳ್ಳಲಿಕ್ಕೆ ಅನೇಕ ಮಾರ್ಗಗಳಿವೆ. ಅದರಲ್ಲಿ ಶರಣ ಸಂಸ್ಕೃತಿ ಉತ್ಸವ ಒಂದು ಎಂದು ಹಾವೇರಿ ಹೊಸಮಠ ಬಸವ ಶಾಂತಲಿಂಗ ಶ್ರೀಗಳು ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ನಡೆದ ೩೧ನೇ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ನೈಜತೆಯ ಬದುಕಿನ ಜೊತೆಗೆ ಜೀವನ ನಿರ್ವಹಣೆ ಮಾಡಲು ನಿಸಕ್ಮಲಶವಾದ ತತ್ವವೇ ವಚನ ಸಾಹಿತ್ಯ ಹಾಗೂ ಮಾನವೀಯ ಮೌಲ್ಯಗಳಿಂದ ಕೂಡಿದ ಮತ್ತು ಮಾನವೀಯ ತಳಹದಿಯ ಮೇಲೆ ಶರಣ ಸಂಸ್ಕೃತಿ ನಿಂತಿದೆ. ಅಲ್ಲದೇ ಪ್ರತಿಯೊಬ್ಬರ ಭಾವನೆಗಳ ಹೃದಯದಿಂದ, ಪ್ರೀತಿಯಿಂದ, ವಾತ್ಸಲ್ಯದಿಂದಕಟ್ಟಿದ ಸಂಸ್ಕೃತಿ ಶರಣ ಸಂಸ್ಕೃತಿ ಆಗಿದೆ ಎಂದರು. ಗುರುಮಟ್ಕಲ್ ಶಾಂತವೀರ ಮುರುಘರಾಜೇಂದ್ರ ಶ್ರೀಗಳು ಮಾತನಾಡಿ, ಸಂಗನಬಸವ ಶ್ರೀಗಳು ತಾಲೂಕಿನಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಪಸರಿಸಿದ್ದಾರೆ. ಅದರ ಫಲಿತಾಂಶವೇ ಶರಣ ಸಂಸ್ಕೃತಿಯಲ್ಲಿ ಇಷ್ಟು ಜನ ಸದ್ಭಕ್ತರು ಪಾಲ್ಗೊಂಡಿರುವುದೇ ಸಾಕ್ಷಿಯಾಗಿದೆ ಎಂದರು. ಹೊಳೆ ಇಟಗಿ ಮಡಿವಾಳ ಶ್ರೀಗಳು ಮಾತನಾಡಿ, ಜನನ ಮತ್ತು ಮರಣದ ನಡುವೇ ಇರುವ ಪರಿಕಲ್ಪನೆಯ ತಳಹದಿಯೇ ಶರಣ ಸಂಸ್ಕೃತಿ ಎಂದರು. ಬ್ಯಾಡಗಿ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ನಮ್ಮ ಹಿಂದಿನ ಪರಮ ಪೂಜ್ಯರು ಹಾಕಿಕೊಟ್ಟ ಪರಂಪರೆಯನ್ನು ಉಳಿಸಿಕೊಂಡು ಗುರು-ಲಿಂಗ-ಜಂಗಮದ ಪರಿಕಲ್ಪನೆಯಲ್ಲಿ ತನು ಮನ ಧನದ ಜೊತೆಗೆ ಸ್ಮರಣೋತ್ಸವಕಾರ್ಯಕ್ರಮ ನಿರಂತರವಾಗಿ ಮಾಡುವುದೇ ಶರಣ ಸಂಸ್ಕೃತಿ ಎಂದರು. ದಿವ್ಯಸಾನಿದ್ಯವಹಿಸಿ ಸಂಗನಬಸವ ಶ್ರೀಗಳು ಮಾತನಾಡಿ, ಕಳೆದ ೩೦ ವರ್ಷಗಳಿಂದ ಶರಣ ಸಂಸ್ಕೃತಿ ಉತ್ಸವ ಯಶಸ್ವಿಯಾಗಲು ತಾಲೂಕಿನ ಸದ್ಭಕ್ತರು ಹಾಗೂ ವಿವಿಧ ಮಠಾಧೀಶರು ಕಾರಣ ಅಲ್ಲದೇ ಶರಣ ಸಂಸ್ಕೃತಿಯ ಮೂಲಕ ಪರಿವರ್ತನೆಯಾಗಿದೆ ಮತ್ತು ಅರ್ಥವಾಗುವ ಹಾಗೆ ಕೆಲಸ ಮಾಡುವುದೇ ಗುರು ಮಠ ಎಂದರು.

ಸ.ಸ. ಡಾ.ಎ.ಸಿ. ವಾಲಿ ಮಹಾರಾಜರು ಅನುಪಮ ಚರಿತರ ಅಲಾಮಗಳನ್ನು ತಿಳಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಸೇರಿದಂತೆ ವಿವಿಧ ಮಠಗಳಿಂದ ಆಗಮಿಸಿದ ಶ್ರೀಗಳು ಮಾತನಾಡಿದರು. ಸಂಗೀತ ಸೇವೆ ಗದಿಗೆಯ್ಯ ಹಿರೇಮಠ, ತಬಲಾ ಸೇವೆ ಬಸವರಾಜ ಹೂಗಾರ ನಿರ್ವಹಿಸಿದರು. ಸ.ಸ. ಡಾ.ಎ.ಸಿ. ವಾಲಿ ಮಹಾರಾಜರು ಮತ್ತು ದಂಪತಿಯನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ತಾಲೂಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಪ್ಪ ಬೆಂತೂರ, ಶಿಕ್ಷಕ ನಾಯಿಕೊಡಿ ಅವರಿಂದ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಠದ ಭಕ್ತರು ಹಾಗೂ ಸಮಿತಿಯ ಸದಸ್ಯರು ಹಾಗೂ ಧರ್ಮಕಾರ್ಯದ ದಾನಿಗಳು, ಪ್ರಸಾದ ಸೇವೆ ಸಲ್ಲಿಸಿದ ಸದ್ಭಕ್ತರು ಉಪಸ್ಥಿತರಿದ್ದರು.