ಕರಾಟೆಯಲ್ಲಿ ಶರತ್‌, ಹರ್ಷಿಕಾ ಚಾಂಪಿಯನ್‌

| Published : Jul 25 2024, 01:23 AM IST

ಸಾರಾಂಶ

ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಹರ್ಷಿಕಾ ಅವರು ಚಾಂಪಿಯನ್‌ಶಿಪ್ ಕರಾಟೆ ಪಂದ್ಯಾವಳಿಯಲ್ಲಿ ಗೆಲುವನ್ನು ಪಡೆದು ಟ್ರೋಫಿ ಹಾಗೂ ನಗದು ಬಹುಮಾನ ಪಡೆದರು. ಆಯೋಜಕರಾದ ಜೇನ್ ಸ್ಪೋರ್ಟ್ಸ್‌ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವು ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಕರಾಟೆ ಕಲಿಯುವ ಆಸಕ್ತಿ ಹೊಂದಿದ್ದು, ಉತ್ತಮವಾಗಿ ತರಬೇತಿ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲು ಅರ್ಹರಾಗಿರುತ್ತಾರೆ,

ಕನ್ನಡಪ್ರಭ ವಾರ್ತೆ ಮಳವಳ್ಳಿ

ಜೇನ್ ಸ್ಪೋರ್ಟ್ಸ್‌ ಮಾರ್ಷಲ್ ಆರ್ಟ್ಸ್‌ ಅಕಾಡೆಮಿ ವತಿಯಿಂದ ಮೂರನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿ ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಕರಾಟೆ ಶಿಕ್ಷಕ ಶಿವು ಅವರ ನೇತೃತ್ವದಲ್ಲಿ ನಡೆಯಿತು.

ಕನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿ ವಿವಿಧ ಭಾಗಗಳಿಂದ ಸುಮಾರು 700ಕ್ಕೂ ಹೆಚ್ಚಿನ ಕರಾಟೆಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕರಾಟೆ ಪಂದ್ಯಾವಳಿಯಲ್ಲಿ ಓಪನ್‌ಶಿಪ್ ಬಾಲಕರ ವಿಭಾಗದಲ್ಲಿ ಜಂಗೋ ಕಾಮನ್ ವೆಲ್ತ್ ಚಾಂಪಿಯನ್ ಏಷಿಯನ್ ಗೇಮ್ ಅಥ್ಲೆಟಿಕ್ಸ್ ಫೌಂಡರ್ ಆಫ್ ಆಲೈಟ್ ಮಾರ್ಷಲ್‌ ಆರ್ಟ್ಸ್‌ ಅಕಾಡೆಮಿಯ ಶರತ್ ಪ್ರಥಮ ಸ್ಥಾನ ಗಳಿಸಿ ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಮೈಸೂರಿನ ಹರ್ಷಿಕಾ ಅವರು ಚಾಂಪಿಯನ್‌ಶಿಪ್ ಕರಾಟೆ ಪಂದ್ಯಾವಳಿಯಲ್ಲಿ ಗೆಲುವನ್ನು ಪಡೆದು ಟ್ರೋಫಿ ಹಾಗೂ ನಗದು ಬಹುಮಾನ ಪಡೆದರು. ಆಯೋಜಕರಾದ ಜೇನ್ ಸ್ಪೋರ್ಟ್ಸ್‌ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಶಿವು ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೂ ಕರಾಟೆ ಕಲಿಯುವ ಆಸಕ್ತಿ ಹೊಂದಿದ್ದು, ಉತ್ತಮವಾಗಿ ತರಬೇತಿ ನೀಡಿದರೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯಲು ಅರ್ಹರಾಗಿರುತ್ತಾರೆ, ಮಳವಳ್ಳಿಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸಿ ಬಹುಮಾನ ಪಡೆದಿದ್ದಾರೆಂದು ಹೇಳಿದರು.

ವಿದ್ಯಾರ್ಥಿನಿಯರ ಆತ್ಮರಕ್ಷಣೆಗೆ ಕರಾಟೆ ಅತ್ಯವಶ್ಯಕವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಕರಾಟೆ ಅಭ್ಯಾಸ ಮಾಡಲು ಅವಕಾಶ ಮಾಡಿಕೊಡಬೇಕು, ಪಂದ್ಯಾವಳಿ ಯಶಸ್ವಿಗೆ ಸಹಕರಿಸಿದ ಕ್ರೀಡಾಪಟುಗಳು, ತರಬೇತುದಾರರು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.