ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಖಚಿತ ಮಾಹಿತಿ ಹಿನ್ನೆಲೆಯಲ್ಲಿ ನಗರದ ಕೆ.ಆರ್ ಪುರಂನಲ್ಲಿರುವ ಬಟ್ಟೆ ಸಂಗ್ರಹದ ಗೋದಾಮಿನಲ್ಲಿ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಕೋಟ್ಯಾಂತರ ರು. ಮೌಲ್ಯದ ಸೀರೆಗಳ ವಶಪಡಿಸಿಕೊಂಡಿದ್ದು, ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.ಶಿವಮೊಗ್ಗದ ಕೆ.ಆರ್ ಪುರಂನಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್ ಎಂಬ ಹೆಸರಿನ ಗೋದಾಮಿನ ಮೇಲೆ ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸೂಕ್ತ ದಾಖಲಾತಿಗಳ ಮಾಲೀಕರು ಹಾಜರುಪಡಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಕೋಟಿ 10 ಲಕ್ಷ ರು. ಮೌಲ್ಯದ ಸೀರೆಗಳ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಗುರುವಾರ ಈ ದಾಳಿ ನಡೆದಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಎಸ್ಐ ವಸಂತ್ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಖಲೆ ಇಲ್ಲದ ₹೨ಲಕ್ಷ ರೂ. ನಗದು ವಶ
ಸಾಗರ: ತಾಲೂಕಿನ ತಾಳಗುಪ್ಪದ ಚೂರಿಕಟ್ಟೆ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ತೆಗೆದುಕೊಂಡು ಹೋಗುತ್ತಿದ್ದ ₹೨ಲಕ್ಷ ನಗದನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ. ಚೂರಿಕಟ್ಟೆ ಚೆಕ್ ಪೋಸ್ಟ್‌ನಲ್ಲಿ ಗುರುವಾರ ಸಂಜೆ ಮಹೀಂದ್ರಾ ಎಕ್ಸ್ ಯುವಿ ಕಾರಿನಲ್ಲಿ ದಾಖಲೆ ಇಲ್ಲದೆ ೨ಲಕ್ಷ ರು. ಸಾಗಿಸುತ್ತಿರುವುದು ತಪಾಸಣೆ ವೇಳೆ ಪತ್ತೆಯಾಗಿದೆ. ತಕ್ಷಣ ಅಧಿಕಾರಿಗಳು ಹಣ ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ. ನೀತಿ ಸಂಹಿತೆ ಘೋಷಣೆ ನಂತರ ತಾಲೂಕಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಪತ್ತೆಯಾಗಿರವುದು ಮೊದಲ ಪ್ರಕರಣವಾಗಿದೆ. ನೋಡಲ್ ಅಧಿಕಾರಿ ನಾಗೇಶ್ ಬ್ಯಾಲದ್, ಮಹ್ಮದ್ ಹನೀಫ್, ಮಾಲಿನಿ, ವಿನಾಯಕ್, ಹೊಳೆಬಸಪ್ಪ ಎಚ್. ಇನ್ನಿತರರಿದ್ದರು.