ದರಸಗುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಸರಿತಾ ಶಿವರಾಮು ಆಯ್ಕೆ

| Published : Dec 17 2024, 12:46 AM IST

ದರಸಗುಪ್ಪೆ ಗ್ರಾಪಂ ಅಧ್ಯಕ್ಷರಾಗಿ ಸರಿತಾ ಶಿವರಾಮು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಕಟ ಪೂರ್ವ ಅಧ್ಯಕ್ಷೆ ರಜಿನಿ ವಿಶ್ವನಾಥ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಪಂಚಾಯ್ತಿ ವ್ಯಾಪ್ತಿಯ 7 ಗ್ರಾಮಗಳ 14 ಸದಸ್ಯರ ಪೈಕಿ ಸರಿತಾ ಶಿವರಾಮು ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ದರಸಗುಪ್ಪೆ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ದೊಡ್ಡೇಗೌಡನ ಕೊಪ್ಪಲು ಸರಿತಾ ಶಿವರಾಮು ಅವಿರೋಧವಾಗಿ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷೆ ರಜಿನಿ ವಿಶ್ವನಾಥ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಪಂಚಾಯ್ತಿ ವ್ಯಾಪ್ತಿಯ 7 ಗ್ರಾಮಗಳ 14 ಸದಸ್ಯರ ಪೈಕಿ ಸರಿತಾ ಶಿವರಾಮು ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.

ನರೇಗಾ ಸಹಾಯಕ ನಿರ್ದೇಶಕರು ನಾಗೇಂದ್ರ ಚುನಾವಣಾ ಕಾರ್ಯ ನಡೆಸಿದರು. ಪಿಡಿಒ ಕೃಷ್ಣಗೌಡ ಹಾಗೂ ಕಾರ್ಯದರ್ಶಿ ಸಹಾಯಕರಾಗಿದ್ದರು. ಪಂಚಾಯ್ತಿ ಉಪಾಧ್ಯಕ್ಷ ರಾಂಪುರ ಮುರುಳಿ, ಸದಸ್ಯರಾದ ಶಿವಕುಮಾರ್, ಶ್ರೀಧರ್, ಕೆ.ಸಿ.ಮಾದೇಶ್, ಸುಜಯ್, ಶಿವಮ್ಮ, ರಾಧಾ, ಸರಿತಾ, ಮುರಳಿ, ದ್ರಾಕ್ಷಾಯಿಣಿ, ರಂಜಿನಿ, ರಾಮಚಂದ್ರು, ಕುಮಾರ್ ಉಪಸ್ಥಿತರಿದ್ದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ರವೀಂದ್ರ, ನಾರಾಯಣಪ್ಪ, ಪಾಂಡು, ವೆಂಕಟೇಶ್ ಮೂರ್ತಿ, ಗುರುಪ್ರಸಾದ್, ಪ್ರಾಣೇಶ್, ರಜಿನಿ, ವಿಜೇಂದ್ರ (ಪುಟ್ಟು), ದೇವರಾಜು, ಚಂದ್ರು, ಮಹೇಶ್, ನಾಗೇಂದ್ರ, ಶಿವು, ಶಿವರಾಮು ಇತರರು ಸೇರಿ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ತೊರೆಕಾಡನಹಳ್ಳಿ ಗ್ರಾಪಂ ಕೆ.ಎಂ.ಗೀತಾ ಪ್ರಭಾರ ಅಧ್ಯಕ್ಷೆ

ಹಲಗೂರು:

ಸಮೀಪದ ತೊರೆಕಾಡನಹಳ್ಳಿ ಗ್ರಾಮ ಪಂಚಾಯ್ತಿ ಪ್ರಭಾರ ಅಧ್ಯಕ್ಷರಾಗಿ ಕೆ.ಎಂ.ಗೀತಾ ಅಧಿಕಾರ ಸ್ವೀಕರಿಸಿದರು.

ಹಿಂದಿನ ಅಧ್ಯಕ್ಷ ತೇಜು ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ರಾಜೀನಾಮೆ ಪತ್ರ ಅಂಗಿಕಾರವಾಗಿದ್ದು, ಉಪಾಧ್ಯಕ್ಷರಾಗಿರುವ ಕೆ.ಎಂ.ಗೀತಾ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಈ ವೇಳೆ ಗ್ರಾಪಂ ಪಿಡಿಒ ಪ್ರಸಾದ್, ದ್ವೀತಿಯ ದರ್ಜೆ ಸಹಾಯಕ ಲಕ್ಷ್ಮೇಗೌಡ, ಶೋಭಾ ಮುಖಂಡರಾದ ಸ್ವಾಮಿ, ಸಿದ್ದರಾಜು, ಮನೋಹರ ಸೇರಿದಂತೆ ಹಲವರು ಭಾಗವಹಿಸಿದ್ದರು.