ಪೇರಡ್ಕ ಗೂನಡ್ಕ ಮಖಾಂ ಉರೂಸಿನ ಭಾಗವಾಗಿ ತೆಕ್ಕಿಲ್ ಮೊಹಮದ್ ಹಾಜಿ ವೇದಿಕೆಯಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನ

ಮಡಿಕೇರಿ: ನವ ತಲೆಮಾರಿಗೆ ಈ ದೇಶದ ನೈಜ ಇತಿಹಾಸ ತಿಳಿಯುವ ವಾತಾವರಣ ಇಂದು ದೊರಕುತ್ತಿಲ್ಲ. ಸಾಮರಸ್ಯ ಮತ್ತು ಸೌಹಾರ್ದತೆಯ ಚರಿತ್ರೆಯಿರುವ ನಾಡು ನಮ್ಮದು. ಆದರೆ ಇಂದು ಅಂತಹ ಚರಿತ್ರೆಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿವೆ. ಅದನ್ನು ನಾವು ಎದುರಿಸಬೇಕು. ಸಣ್ಣ ಪುಟ್ಟ ತಪ್ಪುಗಳ ವೈಭವೀಕರಣ ನಡೆಸುವುದನ್ನು ಬಿಟ್ಟು ಒಳಿತುಗಳನ್ನು ಪ್ರಚುರಪಡಿಸುವ ಕಾರ್ಯ ನಡೆದರೆ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಪೇರಡ್ಕ ಜಮಾಅತ್ ಅಧ್ಯಕ್ಷ, ಕರ್ನಾಟಕ ರಾಜ್ಯ ಕಾರ್ಮಿಕ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಮಂಡಳಿ ಸಚಿವ ದರ್ಜೆ ಅಧ್ಯಕ್ಷ ಜನಾಬ್ ಟಿ ಎಂ ಶಹೀದ್ ತೆಕ್ಕಿಲ್ ಕರೆ ನೀಡಿದರು.‌ ಇತಿಹಾಸ ಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸಿನ ಭಾಗವಾಗಿ ತೆಕ್ಕಿಲ್ ಮೊಹಮದ್ ಹಾಜಿ ವೇದಿಕೆಯಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೇರಡ್ಕ ಗೂನಡ್ಕ ಮತ್ತು ಸಮೀಪ ಪ್ರದೇಶಗಳಲ್ಲಿ ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಲು ತೆಕ್ಕಿಲ್ ಮುಹಮ್ಮದ್ ಹಾಜಿ ಸೇರಿದಂತೆ ತಮ್ಮ ಪೂರ್ವಿಕರ ಕೊಡುಗೆಯನ್ನು ಸ್ಮರಿಸಿಕೊಂಡರು.

ಪೇರಡ್ಕ ಖತೀಬರಾದ ಅಹ್ಮದ್ ನ‌ಈಂ ಮ‌ಅಬರಿ ಫೈಝಿ ಸೌಹಾರ್ದ ಸಂದೇಶ ನೀಡಿದರು.

ಕಲ್ಲುಗುಂಡಿ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಕ್ರಾಸ್ತಾ, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮರ್ ಬೀಜದಕಟ್ಟೆ, ಸುಡಾ ಅಧ್ಯಕ್ಷ ಕೆ.ಎಂ ಮುಸ್ತಫಾ ಸುಳ್ಯ, ಅರಂತೋಡು ಖತೀಬ್ ಇಸ್ಮಾಯಿಲ್ ಫೈಝಿ ಗಟ್ಟಮನೆ, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್ ಕೆ ಹನೀಫ ಸಂಪಾಜೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರಾಧಾಕೃಷ್ಣ ಬೊಳ್ಳೂರು, ತೊಡಿಕಾನ ದೇವಸ್ಥಾನ ಸಮಿತಿಯ ತೀರ್ಥರಾಮ ಗೌಡ ಪರ್ನೋಜಿ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ವರ್ತಕರ ಸಂಘದ ಅಧ್ಯಕ್ಷರಾದ ಚಕ್ರಪಾಣಿ ಯು.ಬಿ ಮುಂತಾದವರು ಶುಭಹಾರೈಸಿ ಮಾತನಾಡಿದರು.