ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸರ್ವಜ್ಞ ಪ್ರೌಢ ಶಾಲೆ ಅತ್ಯುತ್ತಮ ಸಾಧನೆ

| Published : May 03 2025, 12:15 AM IST

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸರ್ವಜ್ಞ ಪ್ರೌಢ ಶಾಲೆ ಅತ್ಯುತ್ತಮ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಸರ್ವಜ್ಞ ಪ್ರೌಢ ಶಾಲೆಯ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಜೀತ್ ಚವ್ಹಾಣ 625ಕ್ಕೆ 613 (98.08%) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಶ್ರೇಯಾ ತಾವರಗೇರಿ 602 (96.32%) ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ, ಗುರುರಾಜ 625ಕ್ಕೆ 590 (94.4%) ಅಂಕದೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ನಗರದ ಸರ್ವಜ್ಞ ಪ್ರೌಢ ಶಾಲೆಯ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಜೀತ್ ಚವ್ಹಾಣ 625ಕ್ಕೆ 613 (98.08%) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಶ್ರೇಯಾ ತಾವರಗೇರಿ 602 (96.32%) ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ, ಗುರುರಾಜ 625ಕ್ಕೆ 590 (94.4%) ಅಂಕದೊಂದಿಗೆ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.

ಅಗ್ರಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳ ವಿವರ:

ಅಜೀತ ಚವ್ಹಾಣ-613 (98.08%), ಶ್ರೇಯಾ ತಾವರಗೇರಿ-602 (96.32%), ಗುರುರಾಜ ಶರಣಬಸಪ್ಪ-590 (94.4%), ವೈಷ್ಣವಿ ಮಡಿವಾಳಪ್ಪ-587 (93.92%), ಶ್ರೇಯಾ ಮಹಾದೇವಪ್ಪ-584 (93.44%), ಕಾರ್ತಿಕ ಚನ್ನವೀರಯ್ಯ-581 (92.96%), ನೈತಿಕ ಶಿವಶಂಕರ ಡೆರೆದ್-573 (91.68%), ಸಪ್ನಾ ಇರಾರೆಡ್ಡಿ-570 (91.2%), ಸುಮೀತ ತಾಳಿಕೋಟಿ-570 (91.2%), ಸುರೇಖಾ ಶರಣಪ್ಪ-570 (91.2%), ಅಭಿಷೇಕ್ ಶ್ರೀಶೈಲ್-569 (91.04%), ಸಂಜನಾ ನಿಂಗಣ್ಣ-568 (90.88%), ಸಂಜನಾ ವೀರೇಶ್ ಮಹಾಗಾಂವ-568 (90.88%), ಅಂಜನಾ ನಿಂಗಣ್ಣ-561 (89.76%), ರೋಹಿಣಿ ತಂದೆ ಸಂಜೀವರೆಡ್ಡಿ-559 (89.44%), ಮನೀಶ್ ತಂದೆ ಶಿವಾಜಿ-531 (84.96%), ಜಾನವಿ ತಂದೆ ವಿಜಯಕುಮಾರ ರಾಠೋಡ್-528 (84.48%).

ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲರು ಹರ್ಷ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ಪಡೆದ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ತಮ್ಮ ಗುರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಶ್ರೀ ಅಭಿಷೇಕ್ ಸಿ. ಪಾಟೀಲ, ನಿರ್ದೇಶಕಿ ಸಂಗೀತಾ ಅಭಿಷೇಕ್ ಪಾಟೀಲ, ಪ್ರಾಂಶುಪಾಲರಾದ ಶ್ರೀ ವಿಜಯಕುಮಾರ ನಾಲವಾರ, ಶ್ರೀ ಕರುಣೇಶ ಹಿರೇಮಠ ಮತ್ತು ಶಿಕ್ಷಕ ಶಿಕ್ಷಕಿಯರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

-----------------

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಸರ್ವರಿಂದ ಜ್ಞಾನವನ್ನು ಪಡೆದು ಕೊಳ್ಳುವುದೇ ಸರ್ವಜ್ಞ ಶಾಲೆಯ ಧ್ಯೇಯ. ಮಕ್ಕಳಿಗೆ ಸಾಮಾನ್ಯ ಜ್ಞಾನವೂ ನೀಡಲಾಗುತ್ತಿದ್ದು, ಸರ್ವಾಂಗೀಣ ಬೆಳವಣಿಗೆಗೆ ಇದು ಉತ್ತಮ. ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲರ ಪ್ರೇರಣೆ ಮತ್ತು ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು.

- ಪ್ರೊ. ಚನ್ನಾರಡ್ಡಿ ಪಾಟೀಲ ಸಂಸ್ಥಾಪಕರು, ಸರ್ವಜ್ಞ ಶಿಕ್ಷಣ ಸಂಸ್ಥೆ

------------

ನ್ಯಾಯಮೂರ್ತಿ ಶಿವರಾಜ ಪಾಟೀಲರ ನುಡಿಮುತ್ತುಗಳನ್ನು ದಿನವೂ ಓದುತ್ತಿದ್ದೇವು ಮತ್ತು ಐಐಟಿಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲರ ಮಾರ್ಗದರ್ಶನ, ನುರಿತ ಶಿಕ್ಷಕರು ಮತ್ತು ಪ್ರೊ. ಚನ್ನಾರಡ್ಡಿ ಪಾಟೀಲರ ಸತತ ಸ್ಪೂರ್ತಿ ನನಗೆ ಪ್ರೇರಣೆಯಾದವು. ಇದರಿಂದಾಗಿ ಉತ್ತಮ ಅಂಕ ಗಳಿಸುವುದಕ್ಕೆ ಸಾಧ್ಯವಾಯಿತು - ಕುಮಾರ ಅಜೀತ್ ಬದ್ದು ಚವ್ಹಾಣ