ಸರ್ವಜ್ಞರ ವಚನಗಳು ಬೆಲೆಕಟ್ಟಲಾಗದ ಆಸ್ತಿ: ಸಂತೋಷ್ ಬಂಡೆ

| Published : Feb 22 2024, 01:50 AM IST

ಸರ್ವಜ್ಞರ ವಚನಗಳು ಬೆಲೆಕಟ್ಟಲಾಗದ ಆಸ್ತಿ: ಸಂತೋಷ್ ಬಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಂಬಾ: ಸರ್ವಜ್ಞರ ವಚನಗಳು ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ. ಬೆಳಕಿನಿಂದ ವ್ಯಕ್ತಿಗತ ಬದುಕಿನ ಕತ್ತಲೆ ಕಳೆದುಕೊಳ್ಳಬೇಕು. ಅವರ ವಚನಗಳಲ್ಲಿರುವ ಮನುಕುಲದ ಉನ್ನತಿಯ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ತಾಂಬಾ: ಸರ್ವಜ್ಞರ ವಚನಗಳು ಬೆಲೆ ಕಟ್ಟಲಾಗದ ಅಮೂಲ್ಯ ಆಸ್ತಿ. ಬೆಳಕಿನಿಂದ ವ್ಯಕ್ತಿಗತ ಬದುಕಿನ ಕತ್ತಲೆ ಕಳೆದುಕೊಳ್ಳಬೇಕು. ಅವರ ವಚನಗಳಲ್ಲಿರುವ ಮನುಕುಲದ ಉನ್ನತಿಯ ತತ್ವ ಸಿದ್ಧಾಂತಗಳನ್ನು ಪಾಲಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ಹಿರೇರೂಗಿ ಗ್ರಾಮದ ಕೆಜಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆತ್ಮೋದ್ಧಾರ ಮತ್ತು ಲೋಕೋದ್ಧಾರಕ್ಕೆ ಬೇಕಾದ ಎಲ್ಲ ತತ್ವಗಳು ಸರ್ವಜ್ಞರ ವಚನಗಳಲ್ಲಿವೆ. ಅವರ ವಚನಗಳಲ್ಲಿ ಅಡಗಿದ ಸತ್ಯ, ಅಹಿಂಸೆ, ನಿಸ್ವಾರ್ಥ, ಪ್ರೀತಿ, ತ್ಯಾಗ, ಸ್ನೇಹ, ಪ್ರಾಮಾಣಿಕತೆಯ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಶಿಕ್ಷಕಿ ಎಸ್ ಬಿ ಕುಲಕರ್ಣಿ ಮಾತನಾಡಿ, ಸರ್ವಜ್ಞ ತನ್ನ ಹಿತನುಡಿಗಳಿಂದ ಸಮಾಜವನ್ನು ಒಳ್ಳೆಯ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಇವರ ತ್ರಿಪದಿಗಳಲ್ಲಿರುವ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ವಿ ವೈ ಪತ್ತಾರ, ಆಡುವ ಮಾತಿನಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಸರ್ವಜ್ಞ. ಅವಿದ್ಯಾವಂತರಾದವರು ಎಲ್ಲ ಜನರನ್ನುಒಂದೇ ದೃಷ್ಟಿಯಲ್ಲಿ ನೋಡಲು ಪ್ರಯತ್ನಿಸಿದವರು ಎಂದರು.

ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ, ಶಿಕ್ಷಕರಾದ ಎಸ್.ಎಂ.ಪಂಚಮುಖಿ, ಎಸ್.ಡಿ.ಬಿರಾದಾರ, ಎಸ್.ಎನ್.ಡಂಗಿ, ಜೆ.ಸಿ.ಗುಣಕಿ ಹಾಗೂ ಅತಿಥಿ ಶಿಕ್ಷಕರಾದ ಸಂತೋಷ ಬಿರಾದಾರ, ಯಲ್ಲಮ್ಮ ಸಾಲೋಟಗಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.