ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಸಲ್ಲ

| Published : Sep 14 2025, 01:04 AM IST

ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಸಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

. ಒಂದೊಂದು ಶಾಲೆಯಲ್ಲಿ 10- 15 ಮಕ್ಕಳು ಇರುತ್ತಾರೆ. ಆದರೆ, ಶಿಕ್ಷಕರ ಪ್ರಮಾಣ ಜಾಸ್ತಿ ಇರುತ್ತದೆ. ಆದರೆ, ಹಳ್ಳಿಗಾಡಿಗಳಲ್ಲಿ ಶಿಕ್ಷಕರ ಪ್ರಮಾಣ ಕಡಿಮೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರುಎಲ್ಲರೂ ಸರ್ಕಾರಿ ಹುದ್ದೆ, ಸರ್ಕಾರಿ ಸೌಲಭ್ಯಗಳನ್ನು ಬಯಸುತ್ತಾರೆ. ಆದರೆ, ತಮ್ಮ ಮನೆಯ ಬಳಿ ಇರುವ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ ಎಂದು ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂ ನಮನ ಕಲಾಮಂಟಪದಲ್ಲಿ ಮೈಸೂರು ಕನ್ನಡ ವೇದಿಕೆಯು ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಸಾಧಕ ಶಿಕ್ಷಕರಿಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ವಿಪರ್ಯಾಸವೆಂದರೆ ನಗರದ ಭಾಗಗಳಲ್ಲಿ ಮಕ್ಕಳ ಕೊರತೆ ಇದೆ. ಒಂದೊಂದು ಶಾಲೆಯಲ್ಲಿ 10- 15 ಮಕ್ಕಳು ಇರುತ್ತಾರೆ. ಆದರೆ, ಶಿಕ್ಷಕರ ಪ್ರಮಾಣ ಜಾಸ್ತಿ ಇರುತ್ತದೆ. ಆದರೆ, ಹಳ್ಳಿಗಾಡಿಗಳಲ್ಲಿ ಶಿಕ್ಷಕರ ಪ್ರಮಾಣ ಕಡಿಮೆ ಇದೆ. ಒಂದೊಂದು ಕಡೆ 50 ಮಕ್ಕಳಿದ್ದರೂ ಇಬ್ಬರೇ ಶಿಕ್ಷಕರು ಇರುತ್ತಾರೆ. ಅಂತಹ ಜಾಗದಲ್ಲಿ ವಿದ್ಯಾರ್ಥಿಗಳ ವಿದ್ಯಾವಂತರಾಗುತ್ತಾರೆ ಎಂದು ಅವರು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷ ನಟರಾಜ ಜೋಯಿಸ್ ಮಾತನಾಡಿ, ಇಂದಿನ ಪೀಳಿಗೆ ಯಾರನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬ ಅರಿವಿಲ್ಲ. ಸೋಕಿಗೆ ಗಣೇಶ್ ಹಬ್ಬವನ್ನು ಮಾಡುತ್ತಾರೆ. ಸಿಕ್ಕಿದ್ದ ಜಾಗದಲ್ಲಿ ಗಣೇಶನ ಕೂರಿಸಿ ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾರೆ. ಅದೇ ಅವರ ದೊಡ್ಡ ಸಾಧನೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇವತ್ತಿನ ಪೀಳಿಗೆ ಈಜಲು ಹೋಗಿ ಅಥವಾ ಬೈಕ್ ರೈಡಿಂಗ್ ನಲ್ಲಿ ಸಾವನಪ್ಪಿದ್ದಾರೆ ಮತ್ತೆ ಹುಟ್ಟು ಬಾ ಗೆಳೆಯ ಎಂದು ದೊಡ್ಡದಾಗಿ ಬ್ಯಾನರ್ ಹಾಕಿಕೊಳ್ಳುತ್ತಾರೆ. ಶಿಕ್ಷಕರು ಅವರನ್ನು ಎಚ್ಚರಿಕೆಯಿಂದ ಕಾಲೇಜುಗಳಲ್ಲಿ ಶಿಸ್ತನ್ನು ಕಲಿಸಬೇಕು. ಇಲ್ಲವಾದರೆ ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುತ್ತಾರೆ. ಇದಕ್ಕೆ ನೇರ ಕಾರಣ ಅವರ ಪೋಷಕರೇ ಎಂದರು. ಇದೇ ವೇಳೆ ಸಾಧಕ ಶಿಕ್ಷಕರಾದ ಬಸವರಾಜೇಂದ್ರಸ್ವಾಮಿ, ಎನ್.ಆರ್. ಸುಮಾ, ಎ. ನಾರಾಯಣ್ ರಾವ್, ಟಿ. ಅನಿತಾ, ಪ್ರತಿಭಾ, ಸಿ.ಎಲ್. ಶರ್ಮಿಳಾ, ಎಂ.ಎ. ಸವಿತಾ, ಗ್ರೀಷ್ಮಾ ಮತ್ತು ಸುಪ್ರಿಯಾ ಅವರಿಗೆ ಡಾ. ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ, 77 ವರ್ಷ ಪೂರೈಸಿದ ಹಿರಿಯ ಹೋರಾಟಗಾರ ಚಿಕ್ಕಲೂರು ಮಂಜೇಗೌಡ ಅವರನ್ನು ಅಭಿನಂದಿಸಲಾಯಿತು.ದಂತ ವೈದ್ಯ ಡಾ. ಲೋಕೇಶ್, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್. ಬಾಲಕೃಷ್ಣ, ಪದಾಧಿಕಾರಿಗಳಾದ ಮಾದಪ್ಪ, ಕಾವೇರಮ್ಮ, ಮಾಲಿನಿ, ಭವಾನಿ, ಪ್ರೇಮಾ, ರಾಮಚಂದ್ರ, ವಿಶ್ವೇಶ್ವರಯ್ಯ ಮೊದಲಾದವರು ಇದ್ದರು. ಸಾಲುಂಡಿ ದೊರೆಸ್ವಾಮಿ ನಿರೂಪಿಸಿದರು.