ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಾಲೂಕಿನ ಅಬಲೂರ ಗ್ರಾಮದಲ್ಲಿ ಸರ್ವಜ್ಞನ ಕಂಚಿನ ಪುತ್ಥಳಿಯ ಆವರಣ ಹಾಗೂ ಸೋಮೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಹಿರೇಕೆರೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸೇವಾ ಪಾಕ್ಷಿಕದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಾಲೂಕಿನ ಅಬಲೂರ ಗ್ರಾಮದಲ್ಲಿ ಸರ್ವಜ್ಞನ ಕಂಚಿನ ಪುತ್ಥಳಿಯ ಆವರಣ ಹಾಗೂ ಸೋಮೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ನಿಮಿತ್ತ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಹಮ್ಮಿಕೊಂಡಿದ್ದು, ಗಾಂಧಿ ಜಯಂತಿವರೆಗೆ ಬಿಜೆಪಿ ಎಲ್ಲ ಘಟಕಗಳಿಂದ ಪುಣ್ಯ ಪುರುಷರ ಸ್ಮರಣೆ ಮಾಡುವ ಉದ್ದೇಶದಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಈಗಾಗಲೇ ರಕ್ತದಾನ ಶಿಬಿರ, ರಂಗೋಲಿ ಸ್ಪರ್ಧೆ, ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗಿದೆ. ಇಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಸಸಿ ನೆಡುವ ಕಾರ್ಯಕ್ರಮ, ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗುವುದು ಎಂದರು.ಬಿಜೆಪಿ ಹಿರೇಕೆರೂರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಜಗದೀಶ ದೊಡ್ಡಗೌಡ್ರ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂಜೀವ ಹಕ್ಕಳ್ಳಿ, ನಿಂಗಾಚಾರ ಮಾಯಾಚಾರ, ಪ್ರವೀಣ ಸಣ್ಣಕ್ಕಿ, ಗೋಪಾಲ, ಸುಪ್ರೀದ ಧಾರವಾಡಕರ, ಕೃಷ್ಣಾ ಬುಳ್ಳಾಪುರ, ಗುರು ಕಡದಕಟ್ಟಿ, ವೀರೇಶ ಗೌಡರ, ಪ್ರವೀಣ ರಡ್ಡೇರ, ಮಂಜುನಾಥ ಕಣವೇರ, ಅಶೋಕ ಆಡೂರ, ರಮೇಶ ಚಿನ್ನಿಕಟ್ಟಿ, ಚಂದ್ರು ದೊಡ್ಮನಿ, ರುದ್ರಮುನಿ ಕಣವೇರ, ಮಾಲತೇಶ ಆಡೂರ, ಜಗದೀಶ ಮಳವಳ್ಳಿ, ನಾಗರಾಜ ಆಡೂರ, ಷಣ್ಮುಖಯ್ಯ ಆರಾಧ್ಯಮಠ, ಚಂದ್ರು ಮುದಗೋಳ, ಶಂಭು ಹೊರಕೇರಿ, ಬಸವರಾಜ ಆಡೂರ ಸೇರಿದಂತೆ ಇತರರು ಸ್ವಚ್ಛತಾ ಕಾರ್ಯದಲ್ಲಿ ಇದ್ದರು.