ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ ಸುವರ್ಣ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಆಯೋಜಿಸಿರುವ ಬಿಲ್ಲವ, ತೀಯಾ, ಆರ್ಯ ಈಡಿಗ, ದೀವರು, ನಾಮಧಾರಿ ಸೇರಿದಂತೆ 26 ಪಂಗಡಗಳ ವಿಶ್ವ ಸಮ್ಮೇಳನ ಹಾಗೂ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಪೂರಕವಾಗಿ ಶುಕ್ರವಾರ ಸಂಜೆ ಮುಕ್ಕ ಸತ್ಯಧರ್ಮ ದೇವಿ ದೇವಳದಿಂದ ಸಸಿಹಿತ್ಲು ಗುರು ಮಂದಿರಕ್ಕೆ ಜಾನಪದ ಮೆರವಣಿಗೆ ನಡೆಯಿತು. ಮುಂಬೈ ಉದ್ಯಮಿ ಧನಂಜಯ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಿದರು. ಸಸಿಹಿತ್ಲು ಅಗ್ಗಿದ ಕಳಿಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ನಡೆದ ಸುವರ್ಣಮಹೋತ್ಸವದ ಸುವರ್ಣ ಸಂಭ್ರಮ ಧ್ವಜಾರೋಹಣವನ್ನು ಶ್ರೀಕ್ಷೇತ್ರ ಬಲ್ಯೋಟ್ಟು ಸೋಲೂರು ಮಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬೆಳಗಾವಿ ಶ್ರೀಕ್ಷೇತ್ರ ನಿಪ್ಪಾಣಿ ಮಠದ ಶ್ರೀ ಅರುಣಾನಂದ ಸ್ವಾಮೀಜಿ, ಮುಂಬೈ ಶ್ರೀಕ್ಷೇತ್ರ ಪೂವಾಯಿಯ ಸುವರ್ಣ ಬಾಬಾ ನೆರವೇರಿಸಿದರು.ಮಹೇಶ್ ಶಾಂತಿ ಅವರು ನಾರಾಯಣಗುರು ಮಂದಿರದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟರು. ಶಾಸಕ ಸುನೀಲ್ ಕುಮಾರ್, ರಾಷ್ಟ್ಕೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜ್ ಶೇಖರ ಕೋಟ್ಯಾನ್, ಅಗ್ಗಿದ ಕಳಿಯ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್., ಸಿ.ಬಿ.ಕರ್ಕೇರ, ಸತ್ಯಜಿತ್ ಸುರತ್ಕಲ್, ಎಲ್.ವಿ. ಅಮೀನ್, ಧರ್ಮಪಾಲ ದೇವಾಡಿಗ, ಭಾಸ್ಕರ ಸಾಲ್ಯಾನ್, ಸತೀಶ್ ಕುಂಪಲ, ಕಿರಣ್ ಪೂಜಾರಿ, ಹರೀಶ್ ಅಂಕೇಶ್ವರ, ಚಂದ್ರಶೇಖರ ಬೆಳ್ಳಡ, ರಮೇಶ್ ಚೇಳಾಯರು, ನರೇಶ್ ಸಸಿಹಿತ್ಲು, ಸರೋಜಿನಿ ಶಾಂತರಾಜ್, ಎಸ್.ಆರ್. ಪ್ರದೀಪ್, ಉದಯ ಬಿ. ಸುವರ್ಣ, ರಂಜಿತ್ ಪೂಜಾರಿ ತೋಡಾರು, ವಿವಿಧ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಂಜೆ ಬೀಚ್ ಫೆಸ್ಟಿವಲ್ ಉದ್ಘಾಟನೆ ನಡೆಯಿತು. ಡ್ಯಾನ್ಸ್ ಫೆಸ್ಟ್ ಮುಕ್ತ ನೃತ್ಯ ಸ್ಪರ್ಧೆ, ರಾತ್ರಿ ವಿಶ್ವಾಸ್ ಗುರುಪುರ ಬಳಗದಿಂದ ಬೀಚ್ ರಸ ಸಂಜೆ ಕಾರ್ಯಕ್ರಮ ಜರುಗಿತು.ಇಂದು ವಿಶ್ವ ಸಮ್ಮೇಳನ ಉದ್ಘಾಟನೆ: ಶನಿವಾರ ಬಿಲ್ಲವ, ಈಡಿಗ ಸೇರಿದಂತೆ 26 ಪಂಗಡಗಳ ವಿಶ್ವ ಸಮ್ಮೇಳನದ ಉದ್ಘಾಟನೆ ನಡೆಯಲಿದೆ. ವಿಧಾನಸಭಾ ಅಧ್ಯಕ್ಷ ಯು ಟಿ. ಖಾದರ್, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ, ಸಚಿವರಾದ ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ತೆಲಂಗಾಣ ರಾಜ್ಯಪಾಲ ತಮಿಳ್ ಇಸ್ಯೆ ಸೌಂದರ ರಾಜನ್, ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್, ಸಮಾಜದ ಸಂಸದರು, ಶಾಸಕರು, ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.