ಸಾರಾಂಶ
ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಅಲ್ಲಿ ಗುರುವಾರ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ವೈಭವದಿಂದ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಸಾಸ್ತಾನದ ಕಾರ್ತಿಕ್ ಎಸ್ಟೇಟ್ ಅಲ್ಲಿ ಗುರುವಾರ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ವೈಭವದಿಂದ ಸಂಪನ್ನಗೊಂಡಿತು.ಈ ಅಂಗವಾಗಿ ಸಾಲಿಗ್ರಾಮದಿಂದ ಸಾಸ್ತಾನದವರೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ನಡೆದ ಮೆರವಣಿಗೆಯ ಉದ್ದಕ್ಕೂ ಕೋಟದ ಪಂಚವರ್ಣ ಯುವಕ ಮಂಡಲ ಪಂಚವರ್ಣ ಮಹಿಳಾ ಮಂಡಲದ ಸ್ವಚ್ಛತಾ ಸೇನಾನಿಗಳು ಮೆರವಣಿಗೆಯಲ್ಲಿ ಉಪಯೋಗಿಸಿದ ಎಸೆದ ಮಜ್ಜಿಗೆ ಪ್ಯಾಕ್, ನೀರಿನ ಬಾಟಲ್‌ಗಳನ್ನು ಹೆಕ್ಕಿ ತೆರವುಗೊಳಿಸಿದರು. ಸುಮಾರು ಮೂರು ಕಿ.ಮೀ ಅಧಿಕ ವ್ಯಾಪ್ತಿ ಮೆರವಣಿಗೆ ಕ್ರಮಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಂಸ್ಥೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು.
ಕೋಟ ಅಮೃತೇಶ್ವರಿ ದೇಗುಲದ ಅಧ್ಯಕ್ಷ ಆನಂದ್ ಸಿ ಕುಂದರ್, ಸಮಿತಿಯ ಅಧ್ಯಕ್ಷ ಎಂ.ಸಿ ಚಂದ್ರಶೇಖರ್, ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಉಪಾಧ್ಯಕ್ಷ ಪ್ರತಾಪ್ ಶೆಟ್ಟಿ ಮತ್ತುಇತರರು ಸಾಥ್ ನೀಡಿದರು. ಯುವಕ ಮಂಡದ ಅಧ್ಯಕ್ಷ ಮನೋಹರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))