ಸಮಾಜ, ದೇಶ ಸೇವೆಯಲ್ಲಿ ತೃಪ್ತಿ

| Published : Jan 01 2025, 12:00 AM IST

ಸಾರಾಂಶ

ಸಮಾಜ, ದೇಶ ಸೇವೆ ಮಾಡುವ ಗುಣ ಇಟ್ಟುಕೊಳ್ಳಬೇಕು. ಅದರಲ್ಲಿ ಸಂತೋಷ, ನೆಮ್ಮದಿ, ತೃಪ್ತಿ ಅಡಗಿದೆ ಎಂದು ಬಿಂಧು ಮಾಧವಾಚಾರ್ಯ ನಾಗಸಂಪಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಮಾಜ, ದೇಶ ಸೇವೆ ಮಾಡುವ ಗುಣ ಇಟ್ಟುಕೊಳ್ಳಬೇಕು. ಅದರಲ್ಲಿ ಸಂತೋಷ, ನೆಮ್ಮದಿ, ತೃಪ್ತಿ ಅಡಗಿದೆ ಎಂದು ಬಿಂಧು ಮಾಧವಾಚಾರ್ಯ ನಾಗಸಂಪಗಿ ಹೇಳಿದರು.

ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ನಟರಾಜ ಸಂಗೀತ ನೃತ್ಯ ನಿಕೇತನ ಸಭಾಭವನದಲ್ಲಿ ಹಾಸನ ಜಿಲ್ಲೆಯ ಶಾನಬೋಗ ದಾಸಪ್ಪ ದತ್ತಿ ಸಂಸ್ಥೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 112ನೇ ರಜತ ಕಿರೀಟ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ದೇಶ ಸೇವೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಯಾವ ಕೆಲಸದಲ್ಲಿ ಉತ್ತಮ ಇರುತ್ತದೆ ಅದರಲ್ಲಿ ತೃಪ್ತಕರ ಮನೋಭಾವನೆ ಇರುತ್ತದೆ. ನಮ್ಮನ್ನು ಅರಿಸಿ ಬರುವ ಸತ್ಕಾರಗಳು ದೇವರ ಕೃಪೆ ಇರುತ್ತದೆ. ಪ್ರಶಸ್ತಿ ಪಡೆದವರ ಜವಾಬ್ದಾರಿ ಹೆಚ್ಚಿದೆ. ಅದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.ರಘೋತ್ತಮಚಾರ್ಯ ನಾಗಸಂಪಗಿ ಮಾತನಾಡಿ, ಪ್ರತಿಯೊಂದು ಘಟನೆಗೂ ಭಗವಂತನ ದೃಷ್ಟಿ ಇರುತ್ತದೆ. ನಮ್ಮ ಕತೃಶಕ್ತಿ, ಬುದ್ಧಿ ಮತ್ಯ, ಸೇವೆ ದೇವರ ಸೇವೆಯಲ್ಲಿ ಆಶೀರ್ವಾದ ಇರುತ್ತದೆ. ಹೀಗಾಗಿ ಶ್ರದ್ಧೆ ನಿಷ್ಠೆಯಿಂದ ಮಾಡಬೇಕು. ಅದರ ಪ್ರತಿ-ಲವಾಗಿ ನಮಗೆ ದೊರೆಯುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಡಾ.ಗಿರೀಶ ಮಾಸೂರಕರಗೆ ನೇತ್ರ ಸಾರ್ವಭೌಮ, ಬ್ರಾಹ್ಮಣ ಮಹಾಸಭಾ ಜಿಲ್ಲಾ ಅಧ್ಯಕ್ಷ ನರಸಿಂಹ ಆಲೂರಗೆ ಧರ್ಮರತ್ನಾಕರ, ವಿ.ಪ್ರ ಅಭಿವೃದ್ಧಿ ಸಂಘದ ಅಧ್ಯಕ್ಷ ಗುರುರಾಜ ದೇಶಪಾಂಡೆಗೆ ಧಾರ್ಮಿಕ ರತ್ನಾಕರ ಪ್ರಶಸ್ತಿ ಹಾಗೂ ಬೆಳ್ಳಿ ಕಿರೀಟ ನೀಡಿ ಸನ್ಮಾನಿಸಲಾಯಿತು.ದತ್ತಿ ಸಂಸ್ಥೆಯ ಮುಖ್ಯಸ್ಥ ಕೆ.ಪಿ.ವೆಂಕಟೇಶಮೂರ್ತಿ, ರಾಘವೇಂದ್ರಚಾರ್ಯ ಕಿರಸೂರ, ಡಾ.ಪಿ.ವಿ.ದೇಸಾಯಿ, ನಟರಾಜ ಸಂಗೀತ ನೃತ್ಯ ನಿಕೇತನದ ಸಂಸ್ಥಾಪಕಿ ಶುಭಧಾ ದೇಶಪಾಂಡೆ, ಶಂಕರ ಶಾಸಿ, ಸುನೀಲ ಮಠ, ವಿನಾಯಕ ತಾಳಿಕೋಟಿ ಇತರರು ಇದ್ದರು.