ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಹೆಚ್. ಹೆಚ್. ಸತೀಶ್ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು. | Kannada Prabha
Image Credit: KP
ಈ ಹಿಂದೆ ಶಿಕ್ಷಕರಾಗಿ ತಾಲೂಕಿನಲ್ಲಿ ಕೆಲಸ ಮಾಡಿರುವ ಅನುಭವ ಅವರಿಗೆ ಇದೆ. ಈ ನಿಟ್ಟಿನಲ್ಲಿ ಅವರು ನಮ್ಮ ತಾಲೂಕಿನ ಶಿಕ್ಷಣಾಧಿಕಾರಿಯಾಗಿ ಆಗಮಿಸಿರುವುದು ಸಂತಸದ ವಿಷಯವಾಗಿದೆ, ಶಿಕ್ಷಣ ಇಲಾಖೆ ಜೊತೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮೊದಲಿನಿಂದಲೂ ಒಳ್ಳೆಯ ವಿಶ್ವಾಸವನ್ನು ಹೊಂದಿದ್ದು ಇಲಾಖೆ ಜೊತೆ ಸಾಕಷ್ಟು ಪರಿಷತ್ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಯಶಸ್ವಿಗೊಳಿಸಿದ್ದೇವೆ. ಈ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ಉತ್ತಮ ಸೇವೆಯನ್ನ ತಾಲೂಕಿಗೆ ನೀಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಚನ್ನರಾಯಪಟ್ಟಣ: ಪಟ್ಟಣದ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಎಚ್. ಎಚ್. ಸತೀಶ್ ಅವರಿಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದಿಸಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಚನ್ನರಾಯಪಟ್ಟಣಕ್ಕೂ ಅವಿನಾಭಾವ ಸಂಬAಧವಿದ್ದು ಈ ಹಿಂದೆ ಶಿಕ್ಷಕರಾಗಿ ತಾಲೂಕಿನಲ್ಲಿ ಕೆಲಸ ಮಾಡಿರುವ ಅನುಭವ ಅವರಿಗೆ ಇದೆ. ಈ ನಿಟ್ಟಿನಲ್ಲಿ ಅವರು ನಮ್ಮ ತಾಲೂಕಿನ ಶಿಕ್ಷಣಾಧಿಕಾರಿಯಾಗಿ ಆಗಮಿಸಿರುವುದು ಸಂತಸದ ವಿಷಯವಾಗಿದೆ, ಶಿಕ್ಷಣ ಇಲಾಖೆ ಜೊತೆಗೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮೊದಲಿನಿಂದಲೂ ಒಳ್ಳೆಯ ವಿಶ್ವಾಸವನ್ನು ಹೊಂದಿದ್ದು ಇಲಾಖೆ ಜೊತೆ ಸಾಕಷ್ಟು ಪರಿಷತ್ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಯಶಸ್ವಿಗೊಳಿಸಿದ್ದೇವೆ. ಈ ನಿಟ್ಟಿನಲ್ಲಿ ಶಿಕ್ಷಣಾಧಿಕಾರಿಗಳು ಉತ್ತಮ ಸೇವೆಯನ್ನ ತಾಲೂಕಿಗೆ ನೀಡಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ದಿಂಡಗೂರು ಗೋವಿಂದರಾಜು, ಜಬಿ ಉಲ್ಲಾಬೇಗ್, ಶಿವನಗೌಡ ಪಾಟೀಲ್, ಯಶೋಧ ಜೈನ್, ನಂದನ್ ಪುಟ್ಟಣ್ಣ, ಮಂಜಪ್ಪ ಮತ್ತಿತರಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.