ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಮಠ, ಮಠಾಧಿಪತಿಗಳ ಮೂಲಕ ಸಮಾಜದ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದು, ಜನರಲ್ಲಿನ ಆಧ್ಯಾತ್ಮಿಕ ದಾಹವನ್ನು ನೀಗಿಸಲು ಧಾರ್ಮಿಕ ಆಚರಣೆಗಳಲ್ಲಿ ತೊಡಗಿಸಿಕೊಳ್ಳಲು ಮಾರ್ಗದರ್ಶನ ನೀಡುವ ಮಠಗಳಿಂದ ನಾಡಿನಲ್ಲಿ ಸರ್ವಾಂಗೀಣ ಪ್ರಗತಿ ಹಾಗೂ ಅಕ್ಷರ ಸಂಸ್ಕೃತಿಯ ಬೆಳವಣಿಗೆಯಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ತಾಲೂಕಿನ ಮುಡುಕುತೊರೆಯಲ್ಲಿರುವ ಕಲ್ಲುಮಠದ ಆವರಣದಲ್ಲಿ ನಡೆದ ಶ್ರೀ ವಿರಕ್ತಾಶ್ರಮಾಧಿಕಾರ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಠಗಳ ಸಾಂತ್ವನದ ಮಾತುಗಳು ಆತ್ಮಸ್ಥೈರ್ಯವನ್ನು ತುಂಬುವುದರ ಜೊತೆಗೆ ಬದುಕಿನ ವಿಕಾಶಕ್ಕೂ ಅವಕಾಶ ಕಲ್ಪಿಸುವುದರಿಂದ ಮಠಗಳು ಮತ್ತು ಭಕ್ತರ ನಡುವೆ ಉತ್ತಮ ಬಾಂಧವ್ಯ ಬೆಸೆದಿದೆ ಎಂದರು.ನಾಡಿನಾದ್ಯಂತ ಇದ್ದಂತಹ 1,500 ಮಠಗಳ ಸಂಖ್ಯೆ ಕಡಿಮೆಯಾಗಿದ್ದರೂ ಮಠಗಳು ಇಂದಿಗೂ ಜಾತಿ, ಮತ, ಭೇದವಿಲ್ಲದೆ ಎಲ್ಲರಿಗೂ ಆಶ್ರಯ ಕೊಟ್ಟಿವೆ. ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸುತ್ತೀವೆ. ಮಠಗಳಲ್ಲಿ ಆರ್ಥಿಕತೆಯ ಕೊರತೆಯಿದ್ದರೂ ಬರುವ ಭಕ್ತರು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆಶ್ರಯವನ್ನು ನೀಡುತ್ತಾ ಜನರಿಗೆ ನೆಮ್ಮದಿ ನೀಡಿವೆ. ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದಕ್ಕೆ ರಾಜೇಂದ್ರ ಶ್ರೀಗಳು ಮತ್ತು ಸಿದ್ಗಗಂಗಾ ಶಿವಕುಮಾರ ಶ್ರೀಗಳು ಧಾರ್ಮಿಕರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮುಡುಕುತೊರೆ ಜಾತ್ರೋತ್ಸವದ ವೇಳೆ ಬರುವ ಭಕ್ತರಿಗೆ ಆಶ್ರಯ ಮತ್ತು ದಾಸೋಹವನ್ನು ನೀಡುವ ಕಲ್ಲು ಮಠ ಧಾರ್ಮಿಕತೆಯಲ್ಲಿ ಐತಿಹಾಸಿಕ ಪರಂಪರೆಯನ್ನು ಹೊಂದಿದೆ ಎಂದು ತಿಳಿಸಿದರು.ಮೈಸೂರು ಹೊಸಮಠದ ಚಿದಾನಂದ ಸ್ವಾಮಿಜಿ ಅವರ ನೇತೃತ್ವದಲ್ಲಿ ನಡೆಯುವ ಧಾರ್ಮಿಕ ಸಭೆಯನ್ನು ಕನಕಪುರ ದೇಗುಲ ಮಠದ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ ಉದ್ಘಾಟಿಸಿದರು. ನಂತರ ಗದ್ದುಗೆಳಿಗೆ ರುದ್ರಾಭಿಷೇಕ, ಅಷ್ಟೋತ್ತರ ಹಾಗೂ ಮಹಾಮಂಗಳಾರತಿ ನೆರವೇರಿರು.
ಬ್ರಾಹ್ಮಿ ಮುಹೂರ್ತದಲ್ಲಿ ಕನಕಪುರ ದೇಗುಲು ಮಠದ ಡಾ. ಮುಮ್ಮುಡಿ ನಿರ್ವಾಣ ಸ್ವಾಮೀಜಿ ಅವರು ಎಂ.ಎಸ್. ಮಹದೇವ ಪ್ರಸಾದ್ ಎಂಬ ವಟುವಿಗೆ ಶ್ರೀ ನಂದಿಕೇಶ್ವರ ಸ್ವಾಮೀಜಿ ಎಂಬ ಅಭಿದಾನವಿತ್ತು, ವಿಧ್ಯುಕ್ತವಾಗಿ ವಿರಕ್ತಾಶ್ರಮಾಧಿಕಾರದ ಷಟ್ಟಲ ಬ್ರಹ್ಮಪದೇಶವನ್ನು ಅನುಗ್ರಹಿಸಿ, ಆಶೀರ್ವಡಿಸಿದರು.ಜೆಎಸ್ಎಸ್ ಮಾದಪ್ಪ ಪ್ರಾರ್ಥಿಸಿದರು. ಶಂಬುದೇವನಪುರ ಕುಮಾರಸ್ವಾಮಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ನಾಗೇಂದ್ರ ಪ್ರಭು ನಿರೂಪಿಸಿದರು. ಚನ್ನಬಸವ ಸ್ವಾಮೀಜಿ, ಸಿದ್ಧಮಲ್ಲ ಸ್ವಾಮೀಜಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ,
ಗುರುಶಾಂತ ಸ್ವಾಮೀಜಿ, ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಶಿವಲಿಂಗೇಂದ್ರ ಸ್ವಾಮೀಜಿ, ಸರ್ಪಭೂಷಣ ಸ್ವಾಮೀಜಿ, ಬಸವರಾಜ ಸ್ವಾಮೀಜಿ, ಶ್ರೀಕಾಂತ ಸ್ವಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ,ಇಮ್ಮಡಿ ಉದ್ದಾನ ಸ್ವಾಮೀಜಿ, ಗೌಡ್ರು ಮಹದೇವಸ್ವಾಮಿ, ನಿವೃತ್ತ ಶಿಕ್ಷಕ ಪುಟ್ಟಬುದ್ಧಿ, ಎಸ್. ಕುಮಾರಸ್ವಾಮಿ, ಎನ್. ಮರಿಸ್ವಾಮಿ, ದೊಡ್ಡನಹುಂಡಿ ಗೌಡ್ರು ಸ್ವಾಮಿ, ಮಿಲ್ ನಂಜುಂಡಸ್ವಾಮಿ, ಶಿವಪ್ಪ, ಬಸವರಾಜ ಸ್ವಾಮಿ, ರಾಜೇಶ, ಬಸವಣ್ಣ, ಬಸವಲಿಂಗಪ್ಪ, ಕಟ್ಟೆಪುರ ಓಂಕಾರ ಮೂರ್ತಿ,
ಕುಮಾರ, ಗೌಡ್ರು ಪಾಪಣ್ಣ, ನಾಗಣ್ಣ, ಮಹಾಂತಪ್ಪ, ಪ್ರಸಾದ್, ಮಾವಿನಹಳ್ಳಿ ಜಯಪ್ಪ, ಕಲ್ಲು ಮಠದ ಭಕ್ತರು ಇದ್ದರು.