ಸಾರಾಂಶ
ಗುಂಡ್ಲುಪೇಟೆ ಜೆಎಸ್‌ಎಸ್ ಕಾಲೇಜಿನ ಬಳಿಕ ಸುತ್ತೂರು ಜಾತ್ರಾ ರಥಯಾತ್ರೆಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತ್ರದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪಟ್ಟಣದಲ್ಲಿ ಬುಧವಾರ ಚಾಲನೆ ನೀಡಿದರು.ಸುತ್ತೂರು ಜಾತ್ರಾ ಮಹೋತ್ಸವ ಜ.೨೬ ರಿಂದ ೩೧ರವರೆಗೆ ೬ ದಿನಗಳ ಕಾಲ ನಡೆಯಲಿರುವ ಜಾತ್ರೆಯ ಪ್ರಚಾರ ರಥಕ್ಕೆ ಪಟ್ಟಣದ ಜೆಎಸ್‌ಎಸ್ ಕಾಲೇಜಿನಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ ಭಾವಚಿತ್ರಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಪೂಜೆ ಸಲ್ಲಿಸಿದ ಬಳಿಕ ರಥಯಾತ್ರೆಗೆ ಶುಭ ಕೋರಿದ ಬಳಿಕ ಮಾತನಾಡಿದರು.
ಶ್ರೀ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ನಾಡಿನ ನಾನಾ ಭಾಗಗಳಿಂದ ಸಾರ್ವಜನಿಕರು ಹಾಗೂ ಭಕ್ತರು ಆಗಮಿಸಲಿದ್ದಾರೆ. ತಾಲೂಕಿನ ಜನರು ಹಾಗೂ ಮಠದ ಭಕ್ತರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದರು. ಜಾತ್ರೆಯಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಶಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾಚತ್ರ ಸ್ಪರ್ಧೆಗಳು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕೃಷಿಮೇಳದಲ್ಲಿ ಹಾಗೂ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ರಥೋತ್ಸವ, ತೆಪ್ಪೋತ್ಸವ ನಡೆಯುತ್ತವೆ ಎಂದರು.ಈ ಸಮಯದಲ್ಲಿ ಚಿಕ್ಕತುಪ್ಪೂರು ಮಠಾಧೀಶ ಚನ್ನವೀರ ಸ್ವಾಮೀಜಿ, ಕಾಡ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ವೀರಶೈವ ಲಿಂಗಾಯಿತ ಮಹಾಸಭಾದ ತಾಲೂಕು ಘಟಕದ ಕೆ.ಎಸ್.ಶಿವಪ್ರಸಾದ್, ಮಹಾಸಭಾದ ನಿರ್ದೇಶಕರಾದ ಮಾಡ್ರಹಳ್ಳಿ ನಾಗೇಂದ್ರ, ಎಚ್.ಎಂ.ನಂದೀಶ್, ಹೊಂಗಹಳ್ಳಿ ಪ್ರಸಾದ್, ಯುವ ಘಟಕದ ಅಧ್ಯಕ್ಷ ಎಸ್.ಗುರುಪ್ರಸಾದ್,ಮ ಡಹಳ್ಳಿ ಶಿವಮೂರ್ತಿ,ಮುಖಂಡರಾದ ಎಚ್.ಜಿ.ಮಲ್ಲಿಕಾರ್ಜುನಪ್ಪ,ಚೌಡಹಳ್ಳಿ ನಂದೀಶ್,ಜೆಎಸ್‌ಎಸ್ ಪ್ರಾಂಶುಪಾಲ ಮಹದೇವಮ್ಮ ಪಿ ಹಾಗೂ ಚನ್ನಂಜಯ್ಯನಹುಂಡಿ ಡಾ.ಮಲ್ಲು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.