ರಂಗಭೂಮಿ ಗಂಡು ಮೆಟ್ಟಿನ ಕಲೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಈ ಕಲೆ ಜೀವಂತ ಕಲೆ

ಕೊಪ್ಪಳ: ರಂಗಭೂಮಿ ಜೀವಂತ ಕಲೆಯಾಗಿದ್ದು,ಅದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ. ಸೈಯದ್ ಹೇಳಿದರು.

ತಾಲೂಕಿನ ಅಗಳಕೇರಾ ಗ್ರಾಮದ ಶಾಸ್ತ್ರಿ ನಗರದಲ್ಲಿ ರಾಮನವಮಿ ಹಿನ್ನೆಲೆಯಲ್ಲಿ ಶ್ರೀಮಾರುತೇಶ್ವರ ಜಾತ್ರೆಯ ಅಂಗವಾಗಿ ನಡೆದ ಧರ್ಮದ ನುಡಿ ಬೆಂಕಿಯ ಕಿಡಿ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ರಂಗಭೂಮಿ ಗಂಡು ಮೆಟ್ಟಿನ ಕಲೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಈ ಕಲೆ ಜೀವಂತ ಕಲೆಯಾಗಿದೆ. ರಂಗಭೂಮಿ ಕಲೆ ಸಾಮಾಜಿಕ ಸಂದೇಶ ನೀಡುತ್ತದೆ.ರಂಗಭೂಮಿ ಕಲೆ ಪ್ರದರ್ಶಿಸುವ ಮೊದಲೇ ಸಾಕಷ್ಟು ತಯಾರಿ ನಡೆಸಿ ಪ್ರದರ್ಶನ ಮಾಡಲಾಗುತ್ತದೆ. ಗಟ್ಟಿಯಾಗಿರುವ ರಂಗಭೂಮಿ ಕಲೆ ಎಲ್ಲರೂ ಉಳಿಸಿ ಬೆಳೆಸಬೇಕಾಗಿದೆ ಎಂದರು.

ನಾಟಕ ಪ್ರದರ್ಶನಕ್ಕೆ ಮಾಜಿ ಮಂಡಲ ಪ್ರಧಾನ ಹುಲುಗಪ್ಪ ಗಡಾದ ಜ್ಯೋತಿ ಬೆಳಗಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಈಶಪ್ಪ ಹಿಟ್ನಾಳ್, ಬಸವರಾಜ್ ಭಜಂತ್ರಿ, ಬಸವರಾಜ್ ಕರ್ಕಿಹಳ್ಳಿ, ವೀರೇಶ್ ಅಗಡಿ, ನಾಗರಾಜ್ ವಡ್ಡರ್, ನಾಟಕದ ಕವಿ ಹಾಲಯ್ಯ ಹುಡೇಜಾಲಿ, ವಿಎಸ್ಎಸ್ಎನ್ ಅಧ್ಯಕ್ಷ ಕೆಂಚಪ್ಪ ಹಿಟ್ನಾಳ್, ಉಪಾಧ್ಯಕ್ಷ ವಲೀಸಾಬ ಪೊಲೀಸ್ ಪಾಟೀಲ್, ಗ್ರಾಪಂ ಉಪಾಧ್ಯಕ್ಷ ಜಂಬಣ್ಣ ಹೂಗಾರ್, ಗ್ರಾಪಂ ಸದಸ್ಯರು, ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.