ಸಾರಾಂಶ
ಬಾಳೆಹೊನ್ನೂರು, ಗ್ರಾಮೀಣ ಭಾಗದಲ್ಲಿ ನೂರಾರು ಗ್ರಾಮೀಣ ಕ್ರೀಡೆಗಳಿದ್ದು, ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಕೆಸರುಗದ್ದೆ ಆಟೋಟ ಸ್ಪರ್ಧೆಯನ್ನು ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಗ್ರಾಮೀಣ ಭಾಗದಲ್ಲಿ ನೂರಾರು ಗ್ರಾಮೀಣ ಕ್ರೀಡೆಗಳಿದ್ದು, ಅವುಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವಜನರ ಮೇಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಸಮೀಪದ ಗಡಿಗೇಶ್ವರ ಗ್ರಾಮದ ಶ್ರೀ ದುರ್ಗಿ ಮಾರಿಕಾಂಬಾ ಫ್ರೆಂಡ್ಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕೆಸರುಗದ್ದೆ ಆಟೋಟ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಕ್ರೀಡೆಗಳು ಇಂದು ನಶಿಸಿ ಹೋಗುತ್ತಿದ್ದು, ಅವುಗಳನ್ನು ಉಳಿಸಬೇಕಿದೆ. ಈ ಹಿಂದೆ ಗ್ರಾಮೀಣ ಆಟಗಳಾದ ಕೆಸರುಗದ್ದೆ, ಕಬಡ್ಡಿ, ಹಗ್ಗಜಗ್ಗಾಟ, ಕೋಲಾಟ, ಲಗೋರಿ, ಖೋಖೋ ಸೇರಿದಂತೆ ಹಲವಾರು ಕ್ರೀಡೆಗಳು ಪ್ರಚಲಿತದಲ್ಲಿ ಇದ್ದವು.
ಆದರೆ ಅವುಗಳನ್ನು ಇಂದು ಯುವಜನರು ಮರೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಯುವಜನರು, ಗ್ರಾಮೀಣ ಜನರಿಗೆ ಅವುಗಳನ್ನು ನೆನೆಪಿಸುವ ಕೆಲಸ ಮಾಡಿರುವುದು ಶ್ಲಾಘನೀಯ ಎಂದರು. ಎನ್.ಆರ್.ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಪ್ರಮುಖರಾದ ಚನ್ನಪ್ಪಗೌಡ ನಿಡುಗೋಡು, ಶ್ರೀನಿವಾಸಗೌಡ ಬಿಳುಕೊಪ್ಪ, ನಾರಾಯಣ ಪೂಜಾರಿ ಗಡಿಗೇಶ್ವರ, ಕರುಣಾಕರ ಗೌಡ, ಕೃಷ್ಣಮೂರ್ತಿ ಗೌಡ, ಅರುಣ್‌ಗೌಡ, ಮೋಹನ್‌ಗೌಡ, ಪ್ರಸನ್ನ ಮತ್ತಿತರರು ಹಾಜರಿದ್ದರು.೨೮ಬಿಹೆಚ್‌ಆರ್ ೩:ಬಾಳೆಹೊನ್ನೂರು ಸಮೀಪದ ಗಡಿಗೇಶ್ವರದಲ್ಲಿ ಆಯೋಜಿಸಿದ್ದ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ನಟರಾಜ್, ಚನ್ನಪ್ಪಗೌಡ, ಶ್ರೀನಿವಾಸಗೌಡ, ನಾರಾಯಣ ಇದ್ದರು.