ಜಲ ಮೂಲಗಳಾದ ಕೆರೆ ಕುಂಟೆ ಉಳಿಸಿ, ರಕ್ಷಿಸಿ

| Published : May 31 2024, 02:16 AM IST

ಜಲ ಮೂಲಗಳಾದ ಕೆರೆ ಕುಂಟೆ ಉಳಿಸಿ, ರಕ್ಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯರ ಅತಿ ಆಸೆಯಿಂದ ಕೆರೆಗಳ ಒತ್ತುವರಿಯಾಗಿ ಕೆರೆಗಳು ನೀರಿಲ್ಲದೆ ಬರಿದು ಆಗುವ ದುಸ್ಥಿತಿ ಸೃಷ್ಟಿಯಾಗಿದೆ. ಇತರೆ ಜಿಲ್ಲೆಗಳಲ್ಲಿ ಹೋಲಿಕೆ ಮಾಡಿದರೆ, ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರತೆ ಇದೆ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯ ಜಲ ಮೂಲಗಳಾದ ಕೆರೆ, ಕುಂಟೆ, ಕಲ್ಯಾಣಿಗಳನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಸಹಕರಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಹೇಳಿದರು.ನಗರದ ನಾಗರಕುಂಟೆಯ ಕಲ್ಯಾಣಿ ಸ್ವಚ್ಛತಾ ಅಭಿಯಾನದಡಿ ವಿಶ್ವ ಪರಿಸರ ದಿನಾಚರಣೆಗೆ ಸ್ವಚ್ಛತೆಗೆ ಚಾಲನೆ ನೀಡಿ ಮಾತನಾಡಿದರು. ಪೂರ್ವಿಕರ ಸ್ವತ್ತುಗಳನ್ನು ರಕ್ಷಣೆ ಮಾಡಬೇಕು, ಅದು ನಿರ್ಲಕ್ಷ್ಯ ವಹಿಸುವ ಮನೋಭಾವ ತೋರುವುದನ್ನು ಬಿಟ್ಟು, ಸಂರಕ್ಷಣೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 4500 ಕೆರೆಗಳು

ಅವಿಭಜಿತ ಜಿಲ್ಲೆಯಲ್ಲಿ ಸುಮಾರು ೪,೫೦೦ ಕೆರೆಗಳು ಇದ್ದು, ಇಂದು ಮನುಷ್ಯರ ಅತಿ ಆಸೆಯಿಂದ ಕೆರೆಗಳ ಒತ್ತುವರಿಯಾಗಿ ಕೆರೆಗಳು ನೀರಿಲ್ಲದೆ ಬರಿದು ಆಗುವ ದುಸ್ಥಿತಿಯಲ್ಲಿ ಕೆರೆಗಳು ಸೃಷ್ಟಿಯಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹೋಲಿಕೆ ಮಾಡಿದರೆ, ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರತೆ ಇದೆ. ಯನ್ನು ಈ ನಿಟ್ಟಿನಲ್ಲಿ ಪರಿಸರ ರಕ್ಷಣೆಗೆ ಆದ್ಯತೆಯನ್ನು ನೀಡುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಡಾ.ಕೆ.ರಾಜು, ಆದರ್ಶ ಕಾಲೇಜು ಪ್ರಾಂಶುಪಾಲ ಬಿ.ಎಚ್ ನವೀನ್ ಕುಮಾರ್, ಸ್ವಯಂ ಸೇವಾ ಸಂಸ್ಥೆಯ ಮಲ್ಲಮ್ಮ ಕೈವಾರ, ರಾಜ್ಯ ವಿಜ್ಞಾನ ಪರಿಷತ್ ಮಂಜುಳಾ ಭೀಮರಾವ್, ಪರ್ಯಾವರಣ ಸಂರಕ್ಷಣಾ ಗತಿ ವಿಧಿ ಮಹೇಶ್ ರಾವ್ ಕದಂ.ಎಸ್, ವೃಷಭಾದ್ರಿ ಫೌಂಡೇಶನ್ ಕಾರ್ಯದರ್ಶಿ ಕೆ. ರಮೇಶ್, ಸ್ಕೌಟ್ ಬಾಬು, ಆದರ್ಶ ಕಾಲೇಜು ಉಪನ್ಯಾಸಕ ರವೀಂದ್ರ ಸಿಂಗ್ ಇದ್ದರು.