ಸಾರಾಂಶ
ಕನ್ನಡಪ್ರಭ ವಾರ್ತೆ ಐಗಳಿ
ನಾವೆಲ್ಲರೂ ಭಾರತೀಯರು, ಸಹೋದರತ್ವ ಹೊಂದಿದವರು ಭಾವೈಕ್ಯತೆಯ ಕೊಂಡಿ ಮತ್ತಷ್ಟು ಗಟ್ಟಿಯಾಗಿದೆ. ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.ಸ್ಥಳೀಯ ಹಜರತ್ ಜಲಾಲಸಾಹೇಬ್ ದೇವರ ಜಾತ್ರೆಯ ಕೊನೆಯ ದಿನ ಹಮ್ಮಿಕೊಂಡಿದ್ದ ಜಾನಪದ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಬ್ಬ ಹರಿದಿನ ಜಾತ್ರೆಗಳು ಕುಟುಂಬಗಳ ಸಂಬಂಧಗಳು ಗಟ್ಟಿಗೊಳಿಸುತ್ತವೆ. ಎಲ್ಲರೂ ಕೂಡಿ ಎಲ್ಲ ದೇವತೆಗಳ ಜಾತ್ರೆ ಮಾಡುವುದು ವಿಶಿಷ್ಟತೆ. ವಿಶ್ವ ಗುರು ಬಸವಣ್ಣನವರು, ಮಹಾತ್ಮಾ ಗಾಂಧಿ, ವೀರರಾಣಿ ಕಿತ್ತೂರ ಚನ್ನಮ್ಮ, ಸಂಗೋಳ್ಳಿ ರಾಯಣ್ಣ, ಡಾ.ಅಂಬೇಡ್ಕರ್, ಸಂತ ಶಿಶುನಾಳ ಶರೀಪಸಾಹೇಬರು, ವಿಜಯಪುರದ ಸಿದ್ದೇಶ್ವರ ಮಹಾಸ್ವಾಮಿಗಳು ಅದರಂತೆ ಗ್ರಾಮದ ಲಿಂ.ಅಪ್ಪಯ್ಯ ಸ್ವಾಮಿಗಳು, ಲಿಂ.ರಾಚೋಟೇಶ್ವರ ಮಹಾಸ್ವಾಮಿಗಳು, ಅಲ್ಲದೇ ನಾಡಿನ ಅನೇಕ ಶಿವಯೋಗಿಗಳ ಆದರ್ಶಗಳು ಅಳವಡಿಸಿಕೊಳ್ಳಿರಿ. ನಾಡಿಗಾಗಿ ಹೋರಾಡಿದವರು ಸಮಾನತೆಯನ್ನು ಬೆಳೆಸಿದವರು. ಶಿಕ್ಷಣ ಸಂಘಟನೆ ಹೋರಾಟ ಮಾಡಿದವರು, ನುಡಿದಂತೆ ನಡೆದವರು. ಇವರನ್ನು ಎಂದಿಗೂ ಮರೆಯಬಾರದು. ಇವರ ವಚನಗಳ ಮೂಲಕ ನಾಡಿಗೆ ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿರಿ. ಅಲ್ಲದೆ ಇವರ ಜೀವನ ಚರಿತ್ರೆ ವಚನ ಪುಸ್ತಕಗಳನ್ನು ಮಕ್ಕಳ ಕೈಯಲ್ಲಿ ಕೊಟ್ಟು ಕಂಠ ಪಾಠ ಮಾಡಿಸಿರಿ ಮೊಬೈಲದಿಂದ ದೂರ ಇರಲಿ ನಮ್ಮೂರ ಜಲಾಲಸಾಹೇಬ ದೇವರ ಜಾತ್ರೆಯಲ್ಲಿ ಸರ್ವಧರ್ಮಿಯರು ಟೊಂಕು ಕಟ್ಟಿ ನಿಂತು ಯಶಸ್ವಿ ಮಾಡಿದ್ದಾರೆ. ಮುಂದಿನ ಪೀಳಿಗೆ ಇಂದಿನ ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯಲಿ ಎಂದು ತಿಳಿಸಿದರು.ಈ ವೇಳೆ ಅಪ್ಪಾಸಾಬ ಪಾಟೀಲ(ಮೆಡಿಕಲ್) ಅಧ್ಯಕ್ಷತೆ ವಹಿಸಿದ್ದರು. ಗುರಪ್ಪ ಬಿರಾದಾರ, ಡಾ.ಆರ್.ಡಿ.ವಾಘಮೋರೆ, ಭಾರತ ಬ್ಯಾಂಕಿನ ಅಧ್ಯಕ್ಷ ನೂರಅಹ್ಮದ್ ಡೊಂಗರಗಾಂವ, ಅಪ್ಪಾಸಾಬ.ಭೀ.ತೆಲಸಂಗ, ಭಾಳ ಮುಜಾವರ, ಶೌಕತ್ ಮುಜಾವರ, ಅಲ್ಲದೇ ಜಾತ್ರಾ ಕಮೀಟಿಯವರು ಇದ್ದರು. ಜಲಾಲಸಾಹೇಬ್ ದೇವರಿಗೆ ಮಧ್ಯಾಹ್ನದಲ್ಲಿ ಲಕ್ಷಾಂತರ ಭಕ್ತರು ಸಕ್ಕರೆಯನ್ನು ವಿತರಿಸಿದರು. ಜಾತ್ರೆಯಲ್ಲಿ ಕರಬಲ್ ಹಾಡುಗಳು, ಕವಾಯತ್ ಪದಗಳು, ಚೌಡಕಿ ಪದಗಳು, ಲೇಜೀಮ್ ಆಟಗಳು, ಭಕ್ತರನ್ನು ರಂಜಿಸಿದವು.