ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ: ಎಂ.ಮಾಯಪ್ಪ

| Published : May 30 2024, 12:47 AM IST

ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ: ಎಂ.ಮಾಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ದೇಶದ ಸಂಸ್ಕೃತಿ ಉಳಿಸಬೇಕು. ಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಪ್ರತಿಫಲ ಸಿಗುತ್ತದೆ. ಕದಿಯಲಾಗದ ಸಂಪತ್ತು ಎಂದರೆ ಅದು ವಿದ್ಯೆ. ಹಾಗಾಗಿ ವಿದ್ಯಾರ್ಥಿಗಳು ಚಂಚಲ ಮನಸ್ಸನ್ನು ಬದಿಗಿಟ್ಟು ಓದಿನ ಕಡೆಗೆ ಗಮನ ಅರಿಸಬೇಕು.

ಕನ್ನಡಪ್ರಭ ವಾರ್ತೆ ಭಾರತೀನಗರ

ದೇಶದ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಭಾರತ್ ವಿಕಾಸ ಪರಿಷದ್‌ನ ಗೌರವಾಧ್ಯಕ್ಷ ಎಂ.ಮಾಯಪ್ಪ ತಿಳಿಸಿದರು.

ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿರುವ ಪ್ರಶಾಂತ್ ಪ್ಲಾಜಾದಲ್ಲಿ ಭಾರತ ವಿಕಾಸ ಪರಿಷದ್ ಬೌದ್ಧಯನ ಶಾಖೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ದೇಶದ ಸಂಸ್ಕೃತಿ ಉಳಿಸಬೇಕು. ಶ್ರಮದಿಂದ ಯಾವುದೇ ಕೆಲಸ ಮಾಡಿದರೂ ಪ್ರತಿಫಲ ಸಿಗುತ್ತದೆ. ಕದಿಯಲಾಗದ ಸಂಪತ್ತು ಎಂದರೆ ಅದು ವಿದ್ಯೆ. ಹಾಗಾಗಿ ವಿದ್ಯಾರ್ಥಿಗಳು ಚಂಚಲ ಮನಸ್ಸನ್ನು ಬದಿಗಿಟ್ಟು ಓದಿನ ಕಡೆಗೆ ಗಮನ ಅರಿಸಬೇಕೆಂದರು.

ಶಿವಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಣ್ಣೂರು ಬಿ.ಕುಮಾರ್ ಮಾತನಾಡಿ, ಕಾಯಕವೇ ಕೈಲಾಸ, ದುಡಿಮೆಯೇ ದೇವರು ಎಂದು ಭಾವಿಸಿ ಕೆಲಸ ಮಾಡಿದ್ದ ಉದಾಹರಣೆಗಳು ಸಾಕಷ್ಟಿವೆ. ಅಂತಹವನ್ನು ನೋಡಿ ನಾವು ಸ್ಪೂರ್ತಿಯಾಗಿ ಪಡೆದು ಪ್ರತಿಭಾವಂತರಾಗಲು ಮುಂದಾಗಬೇಕು ಎಂದರು.

ಭಾರತ ವಿಕಾಸ ಪರಿಷದ್ ಅಧ್ಯಕ್ಷ ಶಿವಮಾದೇಗೌಡ ಮಾತನಾಡಿ, ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀಹೆಚ್ಚು ಅಂಕಗಳಿಸಿದ 23 ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಿ ಇಂದು ಸನ್ಮಾನಿಸುತ್ತಿರುವುದು ನಮಗೆ ಸಂತಸ ತಂದಿದೆ ಎಂದರು.

ಈ ವೇಳೆ ಸಿ.ಎ.ಕೆರೆ ಹೋಬಳಿ ವ್ಯಾಪ್ತಿಯ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಭಾರತ್ ವಿಕಾಸ ಪರಿಷದ್‌ನ ಕಾರ್ಯದರ್ಶಿ ಕೆ.ಎಸ್.ಶಿವರಾಮು, ಕೋಶಾಧಿಕಾರಿ ಗಾಯಿತ್ರಿ, ಸಂಚಾಲಕರಾದ ಶೆಟ್ಟಹಳ್ಳಿ ಬೋರಯ್ಯ, ಸದಸ್ಯರಾದ ದಾಸೇಗೌಡ, ಸುಶೀಲ, ನಂಜುಂಡೇಗೌಡ, ರಾಜೇಗೌಡ, ಎ.ಎಲ್.ರಮೇಶ್, ನಾದೋಸಿ, ಉದಯ ಅಪ್ಟಿಕಲ್ಸ್ ಮಾಲೀಕ ಕೆ.ಟಿ.ಬಾಬು ಸೇರಿದಂತೆ ಹಲವರಿದ್ದರು.