ಸಾರಾಂಶ
ಯಕ್ಷಗಾನ ಕಲೆ ಸಾಂಪ್ರದಾಯಿಕವಾಗಿ ಬಂದಂತಹದ್ದು. ಕರ್ನಾಟಕದ ಯಕ್ಷಗಾನ ಕಲೆ ಸನಾತನ ಸಂಸ್ಕೃತಿ ಪ್ರತಿರೂಪ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಯಕ್ಷಗಾನ ಕಲೆ ಸಾಂಪ್ರದಾಯಿಕವಾಗಿ ಬಂದಂತಹದ್ದು. ಕರ್ನಾಟಕದ ಯಕ್ಷಗಾನ ಕಲೆ ಸನಾತನ ಸಂಸ್ಕೃತಿ ಪ್ರತಿರೂಪವಾಗಿದೆ. ಅದರದೇ ಆದ ವೈಶಿಷ್ಟತೆ ಹೊಂದಿದ್ದು ದೇಶಾದ್ಯಂತ, ರಾಜ್ಯಾದ್ಯಂತ ಪ್ರದರ್ಶಿಸುತ್ತಿರುವ ಕಲಾವಿದರು ಪುಣ್ಯವಂತರು. ಅವರನ್ನು ಗೌರವಿಸುವುದರ ಜೊತೆಗೆ ಕಲೆ ಉಳಿಸುವಂತಹ ಕಾರ್ಯ ನಮ್ಮಿಂದಾಗಲಿ ಎಂದು ಶಾಸಕ ಸಿದ್ದು ಸವದಿ ಹೇಳಿದರು.ಸ್ಥಳೀಯ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರೀ ಸಿದ್ಧಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಹಟ್ಟಿಯಂಗಡಿ ಮೇಳದಿಂದ ನಡೆದ ಸಿರಿ ಸಿಂಗಾರಿ ಪ್ರಸಂಗ ಸನ್ನಿವೇಶದ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಮಂಡಳಿ ನಿರ್ದೇಶಕ ರವಿರಾಜ ಶೆಟ್ಟಿ ಮತ್ತು ವ್ಯವಸ್ಥಾಪಕ ರಂಜಿತ್ ಶೆಟ್ಟಿ ಮಾತನಾಡಿ, ಈ ಯಕ್ಷಗಾನ ಮಂಡಳಿ ಹತ್ತು ವರ್ಷ ಪೂರೈಸಿ ಹನ್ನೊಂದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ನಿಮ್ಮೆಲ್ಲರ ಸಹಕಾರ, ಅಭಿಮಾನ ಹೀಗೆ ಇರಲಿ ಎಂದರು.ಕಲಾವಿದರಾದ ವಿನಯ್ ಶೆಟ್ಟಿ, ರಾಕೇಶ್ ಮಲ್ಯಾ, ಸುಬ್ರಹ್ಮಣ್ಯ ಹೆಗಡೆ, ನರಸಿಂಹ ಗಾವಕರ್, ಸಿತಿಲ್ ಶೆಟ್ಟಿ ರಮೇಶ ಭಂಡಾರಿ, ತಿಲಕರಾಜ್, ನವೀನ್, ಸುರಾಜ್, ನಾಗಶ್ರೀ ಜಿ.ಎಸ್, ಗೌತಮ್, ರಾಘು ಇವರೆಲ್ಲರ ನಟನೆ ಯಕ್ಷಗಾನ ಪ್ರಿಯರನ್ನು ರಂಜಿಸಿತು. ಸಹಕಾರ ನೀಡಿದ ಜಯರಾಮ ಶೆಟ್ಟಿ ಮತ್ತು ಸುರೇಶ ಶೆಟ್ಟಿಯವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಸದಸ್ಯ ಶೇಖರ್ ಅಂಗಡಿ, ಶಂಕರಗೌಡ ಪಾಟೀಲ್, ಸಂಗಪ್ಪ ಹಲ್ಲಿ, ಮಹಾದೇವ ಮಾರಾಪುರ, ಮಲ್ಲಪ್ಪ ಬಾವಿಕಟ್ಟಿ, ಪ್ರಕಾಶ ಮಮದಾಪುರ, ಮಹಾದೇವ ಬರಗಿ, ರವಿ ಮುಂಡಗನೂರ, ಮಹೇಶ ಮನ್ನಯ್ಯನವರಮಠ, ಶಿವಲಿಂಗ ಟಿರ್ಕಿ, ರವಿ ಜವಳಗಿ, ರಾಜೇಂದ್ರ ಮಿರ್ಜಿ, ಬಸವರಾಜ ಮೇಟಿ, ಜಿ.ಎಸ್.ಬರಗಿ, ನಿಂಗಪ್ಪ ಬಾಳಿಕಾಯಿ, ಈರಣ್ಣ ಹಲಗತ್ತಿ, ವೀರೇಶ್ ಆಸಂಗಿ, ಮಹೇಶ ಜಿಡ್ಡಿಮನಿ, ಶಿವಾನಂದ ನುಚ್ಚಿ, ವಿವೇಕ ಢಫಳಾಪುರ, ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಯಾದವಾಡ, ಕಾರ್ಯದರ್ಶಿ ರಾಜು ಜಂಬಗಿ, ಸಂತೋಷ್ ದೇವಾಡಿಗ, ಸುರೇಶ್ ದೇವಾಡಿಗ, ಹರೀಶ್ ದೇವಾಡಿಗ, ರಾಜೇಶ್ ಶೆಟ್ಟಿ, ಶಶಾಂಕ್ ಶೆಟ್ಟಿ, ಅರವಿಂದ ಶೆಟ್ಟಿ ಸೇರಿದಂತೆ ಇತರರಿದ್ದರು. ಪತ್ರಕರ್ತ ಜಯರಾಮ ಶೆಟ್ಟಿ ನಿರೂಪಿಸಿ, ವಂದಿಸಿದರು.