ಕೆರೆಗಳಲ್ಲಿನ ಹೊಳು ತೆಗೆದು ಪುನಶ್ಚೇತನಗೊಳಿಸುವ ಮೂಲಕ ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶ್ರಮಿಸಲಾಗುತ್ತಿದೆ ಎಂದು ಯೋಜನೆ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಹೇಳಿದರು.

ಅಳ್ನಾವರ:

ಕೆರೆಗಳಲ್ಲಿನ ಹೊಳು ತೆಗೆದು ಪುನಶ್ಚೇತನಗೊಳಿಸುವ ಮೂಲಕ ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಶ್ರಮಿಸಲಾಗುತ್ತಿದೆ ಎಂದು ಯೋಜನೆ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಣ್ಣ ನೀರಾವರಿ ಇಲಾಖೆ ಹಾಗೂ ಕೆರೆ ಅಭಿವೃದ್ಧಿ ಸಮಿತಿಯ ಸಹಕಾರದಲ್ಲಿ ಪುನಶ್ಚೇನಗೊಂಡ ಇಲ್ಲಿನ ಚವಟಗೆರಿ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರವಾಡ ತಾಲೂಕಿನ ಹಳ್ಳಿಗೇರಿಯಲ್ಲಿ ಪ್ರಥಮ ಬಾರಿ ಆರಂಭವಾದ ಯೋಜನೆ ಇಂದು ರಾಜ್ಯಾದ್ಯಂತ ವಿಸ್ತರಣೆ ಆಗಿದ್ದು ಇದೀಗ ರಾಜ್ಯದಲ್ಲಿ 1005 ಕೆರೆಗಳ ಪುನಶ್ಚೇನ ಕಾರ್ಯ ನಡೆಯುತ್ತಿದೆ. ಅವುಗಳ ಪೈಕಿ ಇಲ್ಲಿನ ಚವಟಗೆರಿ ಕೆರೆಯು 981ನೇ ಕೆರೆಯಾಗಿ ಪೂರ್ಣಗೊಂಡಿದೆ ಎಂದರು.

ಈ ಯೋಜನೆಯಡಿ ಪಸ್ತುತ ಕೆರೆಗೆ ₹ 9.10 ಲಕ್ಷ ಹಾಗೂ ಗ್ರಾಮಸ್ಥರ ಸಹಕಾರದಿಂದ ₹ 4 ಲಕ್ಷ ಸೇರಿ ಒಟ್ಟು ₹ 13 .10 ಲಕ್ಷ ವಿನಿಯೋಗಿಸಲಾಗಿದೆ ಎಂದ ಅವರು, ಮುಂದಿನ ಪೀಳಿಗೆಗೆ ನೀರು ಉಳಿಸುವ ಮೂಲಕ ಪರಿಸರ ಬೆಳೆಸಲು ಮುಂದಾಗಬೇಕು. ಈ ಕೆರೆ ಅಭಿವೃದ್ಧಿಯಿಂದ ನೀರಾವರಿ ಹಾಗೂ ಪ್ರಾಣಿ-ಪಕ್ಷಿಗಳಿಗೆ ಅನುಕೂಲ ಆಗಲಿದೆ ಎಂದರು.

ಕೆರೆಯ ನಾಮಫಲಕವನ್ನು ತಹಸೀಲ್ದಾರ್ ಡಾ. ಡಿ,ಎಚ್. ಹೂಗಾರ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅರ್ಜುನ್ ಅಷ್ಟೇಕರ, ಪಪಂ ಮುಖ್ಯಾಧಿಕಾರಿ ಪ್ರಕಾಶ ಮಗದಮು, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ರವಿಚಂದ್ರ ಪಾಟೀಲ್, ಪುಂಡಲಿಕ ಪಾರ್ದಿ, ವಸಂತ ಅರ್ಕಾಚಾರ, ಸುಮಾ ಸೊಪ್ಪಿ, ಪ್ರವೀಣ ಪವಾರ, ಸುರೇಂದ್ರ ಕಡಕೋಳ, ಮಾರುತಿ ಶೇಟ್, ಸುನಂದಾ ಕಲ್ಲು, ಸೋಮನಿಂಗ್ ಗರಗ, ಬೋಜಾ, ಸುಬಾಸ ಕಾಂಬಳೆ ಇದ್ದರು.