ಸಾರಾಂಶ
ಅಂಗಾಂಗ ದಾನದಿಂದ ಬೇರೆಯವರ ಜೀವ ರಕ್ಷಣೆ ಆಗುವುದು. ಅಂಗಾಂಗಗಳಿಗೆ ಬೇರೆ ಜೀವಿಗಳು ಕಾಯುತ್ತಿರುತ್ತವೆ ಎಂದು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಇದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಡಾ.ಸುರೇಶ ಕಾಗಲ್ಕರರೆಡ್ಡಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಅಂಗಾಂಗ ದಾನದಿಂದ ಬೇರೆಯವರ ಜೀವ ರಕ್ಷಣೆ ಆಗುವುದು. ಅಂಗಾಂಗಗಳಿಗೆ ಬೇರೆ ಜೀವಿಗಳು ಕಾಯುತ್ತಿರುತ್ತವೆ ಎಂದು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಇದು ನಮ್ಮ ನಿಮ್ಮೆಲ್ಲರ ಸಾಮಾಜಿಕ ಜವಾಬ್ದಾರಿ ಎಂದು ಡಾ.ಸುರೇಶ ಕಾಗಲ್ಕರರೆಡ್ಡಿ ಹೇಳಿದರು.ಅಂಗಾಂಗ ದಾನಗಳ ಕುರಿತು ಕಾನೂನು ವಿಶ್ಲೇಷಣೆ ಪ್ರಕಟಿಸಿದ ಅವರು, ನಿಷ್ಕ್ರಿಯಗೊಂಡ ಮೆದುಳಿನ ದೇಹದಿಂದ ಅಂಗಾಂಗ ದಾನ ಹಾಗೂ ಜೋಡಣೆಯಿಂದ ಸುಮಾರು 9ಕ್ಕೂ ಹೆಚ್ಚು ಅಂಗಾಂಗಗಳನ್ನು ಶಸ್ತ್ರ ಚಿಕಿತ್ಸೆ ಮಾಡಿಸಿ ಜೋಡಣೆ ಮಾಡಬಹುದಾಗಿದೆ. ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಂದ ಹಾಗೂ ಮೆದುಳು ನಿಷ್ಕ್ರಿಯಗೊಂಡವರಿಂದ ಕಿಡ್ನಿ, ಚರ್ಮ, ಯಕೃತ್ತು, ಹೃದಯ, ಹೃದಯದ ಕವಾಟಗಳು, ಪುಪಸು, ಅಸ್ತಿಮಜ್ಜೆ. ಮೂಳೆ, ಕಣ್ಣು ಸೇರಿ ಇತರೇ ಅಂಗಾಂಗಗಳನ್ನು ದಾನ ಮಾಡಬಹುದು ಎಂದು ಅರಿವು ಮೂಡಿಸಿದರು.