ಜೆಇಇ ಅಡ್ವಾನ್ಸ್‌ಡ ಪರೀಕ್ಷೆಯಲ್ಲಿ ಎಸ್ಬಿಆರ್ ಕಾಲೇಜು ಅಮೋಘ ಸಾಧನೆ

| Published : Jun 11 2024, 01:39 AM IST

ಜೆಇಇ ಅಡ್ವಾನ್ಸ್‌ಡ ಪರೀಕ್ಷೆಯಲ್ಲಿ ಎಸ್ಬಿಆರ್ ಕಾಲೇಜು ಅಮೋಘ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ಎಸ್ಬಿಆರ್ ಕಾಲೇಜು ಮಕ್ಕಳು ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿರುವ ಎಸ್ಬಿಆರ್ ಕಾಲೇಜು ಮಕ್ಕಳು ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ಈ ಕಾಲೇಜಿನಿಂದ ಪರೀಕ್ಷೆ ಬರೆದವರ ಪೈಕಿ 13 ವಿದ್ಯಾರ್ಥಿಗಳು ಐಐಟಿಗಳಲ್ಲಿ ಪ್ರವೇಶಕ್ಕೆ ಅರ್ಹತೆ ಪಡೆದರೆ, ವಿನಯಕುಮಾರ ಕಸಬೇಗೌಡರ್ ರಾಷ್ಟ್ರಕ್ಕೆ 4345ನೇ ರ್‍ಯಾಂಕ್‌, ಶರಣರಾಜ್ ಯಂಕಂಚಿ. ರಾಷ್ಟ್ರಕ್ಕೆ 2611ನೇ ರ್‍ಯಾಂಕ್‌ ಪಡೆದಿದ್ದಾರೆ.

ಶರಣಬಸವೇಶ್ವರ ಸಂಯುಕ್ತ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯ ಜೊತೆಗೆ ರಾಷ್ಟ್ರ ಮಟ್ಟದ ಜೆ.ಇ.ಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿಯೂ ಅತ್ಯುತ್ತಮ ರ್‍ಯಾಂಕ್‌‍ಗಳನ್ನು ಪಡೆಯುವುದರೊಂದಿಗೆ ಮತ್ತೊಮ್ಮೆ ತನ್ನ ಪ್ರತಿಷ್ಠೆ ಮೆರೆದಿದೆ.

ವಿದ್ಯಾರ್ಥಿಗಳು, ರ್‍ಯಾಂಕ್‌‌ ವಿವರ:

ವಿನಯಕುಮಾರ ಕಸಬೇಗೌಡರ್- 4345, ಶರಣರಾಜ. ಯಂಕಂಚಿ- 2611, ಹರ್ಷಾ ಹುಳಕುಂದಾ- 2586, ರೋಹನ್ ರಾಜಶೇಖರ 4218, ಲಕ್ಷ್ಮೀಕಾಂತ ಅನೀಲಕುಮಾರ- 4869, ಸೃಷ್ಟಿ ಸುರೇಶ- 4935, ಅಂಬರೀಷ ಹಿಬಾರೆ- 6833, ಮಾನಸ್ ಎಸ್- 7957, ಓಂಕಾರ ಮಲ್ಲಿಕಾರ್ಜುನ- 16124, ಅಭಿಷೇಕ ಶರಣಬಸಪ್ಪ- 17885, ಪ್ರತೀಕ್ಷಾ ಮದ್ರ - 778, ಬಾಲಾಜಿ ಚವ್ಹಾಣ- 3099, ಅಭಿಜೀತ್ ಜಾಧವ- 6696 ಉತ್ತಮ ಸಾಧನೆ ಮಾಡಿದ್ದಾರೆ.

ಗುಣಮಟ್ಟದ ಶಿಕ್ಷಣದ ಮೂಲಕ ಗುರುತಿಸಿಕೊಂಡಿರುವ ಎಸ್.ಬಿ.ಆರ್. ಕಾಲೇಜು ಪ್ರತಿವರ್ಷ ಫಲಿತಾಂಶದಲ್ಲಿ ಅಮೋಘ ಸಾಧನೆ ಮಾಡುತ್ತಲೇ ಇದೆ. ರಾಷ್ಟ್ರಮಟ್ಟದ ಅತ್ಯಂತ ಕಠಿಣ ಪರೀಕ್ಷೆಯಾದ ಜೆ.ಇ.ಇ ಅಡ್ವಾನ್ಸ್‍ಡ್‍ದಲ್ಲಿಯು ಎಸ್.ಬಿ.ಆರ್.ನಿಂದ ಅತಿ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ ಪಡೆಯಬೇಕಾದರೆ ಗುರು-ವೃಂದದವರ ವಿಶಿಷ್ಟ ಬೋಧನಾ ಪದ್ಧತಿಯೇ ಈ ಸಾಧನೆಗೆ ಕಾರಣ ಎಂದು ಮಕ್ಕಳು ಹೇಳುತ್ತಿದ್ದಾರೆ.

ಈ ವರ್ಷದ 13 ವಿದ್ಯಾರ್ಥಿಗಳು ಉತ್ತಮ ರ್‍ಯಾಂಕ್‌ ಗಳಿಸಿ ದೇಶದ ಪ್ರತಿಷ್ಠಿತ ಐಐಟಿ ಗಳಲ್ಲಿ ಅಭ್ಯಾಸ ಮಾಡುವ ಸದಾವಕಾಶ ಪಡೆದಿದ್ದಾರೆ. ಜೆಇಇ ಪರೀಕ್ಷೆಯು ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲನೇ ಹಂತ ಮೇನ್ಸ್. ಈ ಮೇನ್ಸ್‍ನಲ್ಲಿ ತೇರ್ಗಡೆಯಾದರೆ ಎನ್.ಐ.ಟಿ ಕಾಲೇಜಿನ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪಡೆಯಲು ಮತ್ತು ಜೆಇಇ ಅಡ್ವಾನ್ಸಡ್ ಪರೀಕ್ಷೆ ಬರೆಯಲೂ ಕೂಡಾ ಅರ್ಹರಾಗುತ್ತಾರೆ. ಇನ್ನು ಎರಡನೇ ಹಂತ ಜೆಇಇ ಅಡ್ವಾನ್ಸಡ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ದೇಶದ ಪ್ರತೀಷ್ಠಿತ ಐಐಟಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ನಮ್ಮ ಕಾಲೇಜಿನಿಂದ ಈ ಬಾರಿ 169 ವಿದ್ಯಾರ್ಥಿಗಳು ಮೇನ್ಸ್‍ನಲ್ಲಿ ಅರ್ಹರಾಗಿದ್ದು, 13 ವಿದ್ಯಾರ್ಥಿಗಳು ಐಐಟಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

ಈ ವಯಸ್ಸಿನ ವಿದ್ಯಾರ್ಥಿಗಳಿಗೆ ಅತ್ಯಂತ ಕಠಿಣ ಪರೀಕ್ಷೆ ಎಂದೇ ಪರಿಗಣಿಸಲಾದ ಜೆಇಇ ಅಡ್ವಾನ್ಸ್‍ಡ್‍ದಲ್ಲಿಯೂ ಎಸ್.ಬಿ.ಆರ್ ನಿಂದ ಅತಿ ಹೆಚ್ಚಿನ ವಿದ್ಯಾರ್ಥಿಗಳು ಗರಿಷ್ಟ ರ್‍ಯಾಂಕ್‌ ಪಡೆದು ದೇಶದ ಪ್ರಮುಖ ಐಐಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾದರೆ ಕಾಲೇಜಿನಲ್ಲಿ ಅಳವಡಿಸಿಕೊಂಡ ವಿಶಿಷ್ಟ ಬೋಧನಾ ಪದ್ಧತಿಯೇ ಮೂಲ ಕಾರಣ ಇವರ ಭವಿಷ್ಯ ಉಜ್ವಲವಾಗಲಿ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ ಶುಭ ಕೋರಿದ್ದಾರೆ.

ಚೇರ್ ಪರ್ಸನ್, ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಅ‍ವರು ಈ ಸಾಧನೆಗೆ ಸಂತಸ ಹೊರಹಾಕಿದ್ದಾರೆ. ಎಸ್ಬಿಆರ್‌ನಲ್ಲಿ ಉಪನ್ಯಾಸಕರು ಬಹಳ ಶ್ರದ್ಧೆಯಿಂದ ಹಗಲಿರುಳು ಬೋಧನೆಯಲ್ಲಿ ತೊಡಗಿ ಮಕ್ಕಳಿಗೆ ಕಲಿಸುತ್ತಿರೋದೇ ಸಾಧನೆಗೆ ಕಾರಣವೆಂದು ಮಕ್ಕಳಿಗೆ ಶುಭ ಹಾರೈಸಿದ್ದಾರೆ. ಮಕ್ಕಳಿಗೆ ಕಲಿಯಲು ಸಕಲ ಸೌಲಭ್ಯಗಳಿಂದ ಕೂಡಿದ ಪರಿಸರ ಒದಗಿಸಿರುವುದರಿಂದಾಗಿ, ವಿದ್ಯಾರ್ಥಿಗಳು ಈ ಫಲಿತಾಂಶ ಪಡೆದು ಸಂಸ್ಥೆಯ ಗೌರವಕ್ಕೆ ಪಾತ್ರರಾಗಿದ್ದರೆ. ವಿದ್ಯಾರ್ಥಿಗಳ ಭವಿಷ್ಯ ಒಳ್ಳೆಯದಾಗಲಿ

ಎನ್‌.ಎಸ್‌. ದೇವರಕಲ್‌, ಪ್ರಾಚಾರ್ಯರು, ಎಸ್ಬಿಆರ್‌, ಕಲಬುರಗಿ