ಸಾರಾಂಶ
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ಮಂಗಳೂರು ವತಿಯಿಂದ ಸ್ಕ್ಯಾಡ್ಸ್ ಪ್ರಥಮ ಪ್ರಶಸ್ತಿಗೆ ಭಾಜನವಾಗಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸ್ಕ್ಯಾಡ್ಸ್ ಮಂಗಳೂರು (SKADS) ವತಿಯಿಂದ ಸ್ಕ್ಯಾಡ್ಸ್ ಪ್ರಥಮ ಪ್ರಶಸ್ತಿ ಗೆ ಭಾಜನವಾಗಿದೆ.ಸ್ಕ್ಯಾಡ್ಸ್ ಮಂಗಳೂರು (SKADS) ಸಂಸ್ಥೆ ವತಿಯಿಂದ ಸಂಸ್ಥೆಯೊಂದಿಗೆ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ವ್ಯವಹಾರ ನಡೆಸಿದ ಸಹಕಾರ ಸಂಘಕ್ಕೆ ಕೊಡ ಮಾಡುವ ಪ್ರಶಸ್ತಿಯನ್ನು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೀಡಿ ಗೌರವಿಸಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ನಾಗೇಶ್ ಕುಂದಲಪಾಡಿ ಅವರ ಪರವಾಗಿ ನಿರ್ದೇಶಕರಾದ ಪ್ರಮೀಳಾ ಬಂಗಾರಕೋಡಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ಸ್ಕ್ಯಾಡ್ಸ್ ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ರವೀಂದ್ರ ಕಂಬಳಿ ಹಾಗೂ ಸಂಸ್ಥೆಯ ನಿರ್ದೇಶಕರು ಪ್ರಶಸ್ತಿ ನೀಡಿ ಗೌರವಿಸಿದರು.