ಪರಿಶಿಷ್ಟರು ಸರ್ಕಾರಿ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕು: ಎಸ್‌ಪಿ ಸಲಹೆ

| Published : Jun 25 2025, 01:18 AM IST

ಪರಿಶಿಷ್ಟರು ಸರ್ಕಾರಿ ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಬೇಕು: ಎಸ್‌ಪಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಜಾತಿ, ವರ್ಗದ ಸಮುದಾಯದವರಿಗೆ ಸರ್ಕಾರದ ಬಹಳಷ್ಟು ಸೌಲಭ್ಯಗಳಿವೆ. ಅವುಗಳ ಮಾಹಿತಿ ಪಡೆದು, ಬಳಕೆ ಮಾಡಿಕೊಂಡು ಶಿಕ್ಷಣವಂತರಾಗಿ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದ್ದಾರೆ.

- ಎ.ಕೆ. ಕಾಲೋನಿ ಭಜನಾ ಮಂದಿರ ಬೀಟ್ ಜನಸಂಪರ್ಕ ಸಭೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಪರಿಶಿಷ್ಟ ಜಾತಿ, ವರ್ಗದ ಸಮುದಾಯದವರಿಗೆ ಸರ್ಕಾರದ ಬಹಳಷ್ಟು ಸೌಲಭ್ಯಗಳಿವೆ. ಅವುಗಳ ಮಾಹಿತಿ ಪಡೆದು, ಬಳಕೆ ಮಾಡಿಕೊಂಡು ಶಿಕ್ಷಣವಂತರಾಗಿ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ನಗರದ ಎ.ಕೆ. ಕಾಲೋನಿ ಭಜನಾ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಬೀಟ್ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಣವಂತರಿಗೆ ಬಹಳ ಮಹತ್ವವಿದೆ. ಆದ್ದರಿಂದ ಪರಿಶಿಷ್ಟ ಜಾತಿಯ ಪೋಷಕರು ಗಮನಹರಿಸಬೇಕಿದೆ ಎಂದರು.

ಸಮಾಜದ ಯುವಕ ಸಂತೋಷ ನೋಟದವರ್ ಮಾತನಾಡಿ, ನಗರದಲ್ಲಿ ಸಂಚಾರದ ಸಮಸ್ಯೆ ತುಂಬಾ ಇದೆ. ಅದನ್ನು ಬೇಗ ಪರಿಹರಿಸಬೇಕು. ಎ.ಕೆ. ಕಾಲೋನಿಯು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಇರುವುದರಿಂದ ಸುರಕ್ಷಿತೆ ದೃಷ್ಟಿಯಿಂದ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು. ರೌಡಿಶೀಟರ್ ಪ್ರಕರಣದಲ್ಲಿ ಇರುವವರನ್ನು ಪರಿಶೀಲಿಸಿ, ಅವರನ್ನು ಮುಕ್ತಗೊಳಿಸಿ ಎಂದು ಮನವಿ ಮಾಡಿದರು.

ಮುಖಂಡ ಮಂಜುನಾಥ್ ಕೊಪ್ಪಳ ಮಾತನಾಡಿ, ವಾರ್ಡಿನಲ್ಲಿ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಸರಿ ಪಡಿಸಲು ಮನವಿ ಮಾಡಿದರು.

ಪಿಐ ರಾಜೇಸಾಬ್ ಫಕ್ರುದ್ದೀನ್ ದೇಸಾಯಿ ಮಾತನಾಡಿ, ಶಾಲೆ ಕಾಲೇಜು ಆವರಣದ ಸಮೀಪ ಬ್ಯಾರಿಕೇಡ್ ಅಳವಡಿಸಲಾಗಿದೆ. ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಅವರಗಳ ಮೇಲೆ ಕ್ರಮ ಕೈಕೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಕಾಲೋನಿಯ ಹಿರಿಯರು, ಯುವಕರು, ಸಂಘ ಸಂಸ್ಥೆಗಳ ಮುಖಂಡರು, ದಲಿತ ನಾಯಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - -

-23 ಎಚ್‍ಆರ್‍ಆರ್01:

ಹರಿಹರದ ಎ.ಕೆ ಕಾಲೋನಿ ಭಜನಾ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಬೀಟ್ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾತನಾಡಿದರು.