ಪ್ರತಿಭಾವಂತರ ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ

| Published : Mar 16 2025, 01:49 AM IST

ಸಾರಾಂಶ

ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ಡಂಬಳ: ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಮೂಲಕ ಪ್ರತಿಭೆಗಳನ್ನು ಗುರುತಿಸಲು ಶಾಲಾ ವಾರ್ಷಿಕೋತ್ಸವ ಉತ್ತಮ ವೇದಿಕೆ ಎಂದು ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ಡಂಬಳ ಹೋಬಳಿ ಬರದೂರ ಗ್ರಾಮದ ಚಟ್ಟೇರ ವಿದ್ಯಾವರ್ಧಕ ಸಂಘದ ಬೀಳಗಿ ಈಶ್ವರಪ್ಪ ಎಂ. ನಾಡಗೌಡ್ರ ಮತ್ತು ಬಾಳಪ್ಪ ನಾಡಗೌಡ್ರ ಸ್ಮರಣಾರ್ಥವಾಗಿ ಜ್ಞಾನಸ್ಫೂರ್ತಿ ಇಂಟರ್ ನ್ಯಾಶನಲ್ ಪೂರ್ವ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 1ರಿಂದ 5ನೇ ತರಗತಿ ಶಾಲಾ ಕಟ್ಟಡ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾಜಿ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ಸಮಾಜದಲ್ಲಿ ಒಳ್ಳೆಯವರಾಗಿ ಗುರ್ತಿಸಿಕೊಳ್ಳಬೇಕಾದರೆ ಒಳ್ಳೆಯ ವಿದ್ಯಾವಂತರಾಗಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದುಕೊಂಡು ಶಾಲೆಯ, ಊರಿನ ಹಾಗೂ ತಂದೆ- ತಾಯಿಯವರ ಹೆಸರನ್ನು ತರಬೇಕೆಂದು ಹೇಳಿದರು.

ಗುರುಮೂರ್ತಿಸ್ವಾಮಿ ಇನಾಮದಾರ, ಬಿಇಒ ಎಚ್.ಎಮ್.ಪಡ್ನೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಕುಚಿತ ಮನೋಭಾವನೆ ಹೋಗಲಾಡಿಸಲು ಶಾಲಾ ವಾರ್ಷಿಕೋತ್ಸವ ಉತ್ತಮವಾದ ವೇದಿಕೆಯಾಗಿದೆ. ಮಕ್ಕಳು ಕೇವಲ ಒಂದೇ ವಿಷಯಕ್ಕೆ ಸೀಮಿತವಾಗಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಓದು ಬರಹದ ಜೊತೆಗೆ ಉತ್ತಮವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ಸಹ ರೂಢಿಸಿಕೊಳ್ಳುವುದು ಒಳ್ಳೆಯ ಬೆಳವಣಿಯಾಗಿದೆ ಎಂದು ಹೇಳಿದರು.

ಶಾಲಾ ಸಮಿತಿ ಕಾರ್ಯದರ್ಶಿ ಮೋಹನ ಚಟ್ಟೇರ್ ಮಾತನಾಡಿ, ಈ‌ ಭಾಗದ ವಿದ್ಯಾರ್ಥಿಗಳ‌‌ ಭವಿಷ್ಯ ಕಟ್ಟುವ ನಿಟ್ಟಿನಲ್ಲಿ ನಮ್ಮ ಜ್ಞಾನಸ್ಫೂರ್ತಿ ಇಂಟರ್ ನ್ಯಾಶನಲ್ ಪೂರ್ವ ಪ್ರಾಥಮಿಕ ಶಾಲೆ ನಿರಂತರವಾಗಿ ಶ್ರಮಿಸುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಕಟ್ಟಲಿದೆ. ಆ ಹಿನ್ನೆಲೆ ವಿವಿಧ ಗ್ರಾಮಗಳಿಂದ ಬಂದಂತ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕಲರ್ಸ್‌ ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯ ಗುರು ಪಾಟೀಲ, ಬಿಗ್ ಬಾಸ್ ಹಾಗೂ ಸರಿಗಮಪ ಖ್ಯಾತಿಯ ಹನಮಂತ ಲಮಾಣಿ ಅವರ ಹಾಡುಗಳಿಗೆ ವಿವಿಧ ಗ್ರಾಮಗಳಿಂದ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗೌರಮ್ಮ ಈ ನಾಡಗೌಡ, ಸಿಪಿಐ ಮಂಜುನಾಥ ಕುಸಗಲ್ಲ, ಗಂಗಾಧರ ಅಣ್ಣಿಗೇರಿ, ಅಧ್ಯಕ್ಷೆ ಡಾ. ಪಾರ್ವತಿ ಚಟ್ಟೇರ, ಉಪಾಧ್ಯಕ್ಷ ವೀರನಗೌಡ ಈ ನಾಡಗೌಡ, ಮುಖ್ಯೋಪಾಧ್ಯಾಯ ಸತ್ಯಪ್ಪ ತಳವಾರ, ಎಮ್.ಜಿ. ಗಚ್ಚೇನ್ನವರ, ಎಮ್.ಎಮ್. ಹೆಬ್ಬಾಳ, ಈರಣ್ಣ ಚಟ್ಟೇರ, ಎನ್.ಎಮ್. ಕುಕನೂರ, ಹೆಚ್.ಎನ್. ಗೌಡ್ರ, ಮಾಲಿಂಗಪ್ಪ ಚಟ್ಟೇರ್, ಶಾಂತಮ್ಮ ಚಟ್ಟೇರ್, ಹನಮಪ್ಪ ನಾಡಗೌಡರ, ಗೌರಮ್ಮ ಈ ನಾಡಗೌಡ, ಸುನಿತಾ ಚಟ್ಟೇರ್, ಆನಂದ ಚಟ್ಟೇರ್ ಸೀಮಾ ಚಟ್ಟೇರ್, ಶಿವಲೀಲಾ ಯ. ಕುಂಬಾರ, ತೇಜಸ್ವಿನಿ ಕುಕನೂರು, ಪ್ರಕಾಶ ಇಮ್ಮಡಿ, ಶಿವಾನಂದ ಲಮಾಣಿ, ನಿತ್ಯಾ ಮೋಹನ ಟ್ಟೇರ, ಎಸ್.ವಿ. ಅಡರಗಟ್ಟಿ, ಎಸ್.ವಿ. ಅರಿಶನದ, ಪೂರ್ವಿಕಾ ನಾಡಗೌಡ್ರ, ವಿಶ್ವನಾಥ ಉಳ್ಳಾಗಡ್ಡಿ, ಶಿವಾನಂದ ಲಮಾಣಿ, ಲಕ್ಷ್ಮಣ ಲಮಾಣಿ, ಶರಣಪ್ಪ ಗದಗ, ಬಸವರಾಜ ತಳವಾರ, ಗೌಸುಸಾಬ ದೋಟಿಹಾಳ, ಚನ್ನಪ್ಪ‌ ಹೊಸಮನಿ, ಶಿವಪ್ಪ ಮೇಟಿ, ರವಿ ಮೇಟಿ, ಸಿಬ್ಬಂದಿ, ಗ್ರಾಮಸ್ಥರು, ಪಾಲಕರು, ವಿದ್ಯಾರ್ಥಿಗಳು ಇದ್ದರು.