ಕಂಬಕ್ಕೆಶಾಲಾ ವಾಹನ ಡಿಕ್ಕಿ

| Published : Aug 03 2025, 01:30 AM IST

ಸಾರಾಂಶ

ರಾಮನಗರ: ಚಲಿಸುತ್ತಿದ್ದ ಖಾಸಗಿ ಶಾಲಾ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬಿಡದಿ ಪಟ್ಟಣದ ಬಾನಂದೂರು ಕ್ರಾಸ್ ಬಳಿ ನಡೆದಿದೆ.

ರಾಮನಗರ: ಚಲಿಸುತ್ತಿದ್ದ ಖಾಸಗಿ ಶಾಲಾ ವಾಹನವೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಬಿಡದಿ ಪಟ್ಟಣದ ಬಾನಂದೂರು ಕ್ರಾಸ್ ಬಳಿ ನಡೆದಿದೆ.

ಬಿಜಿಎಸ್ ವಲ್ಡ್ ವರ್ಲ್ಡ್‌ ಶಾಲೆಗೆ ಸೇರಿದ ಶಾಲಾ ಬಸ್ ಸಂಜೆ ವೇಳೆಗೆ ವಿದ್ಯಾರ್ಥಿಗಳನ್ನು ಹೊತ್ತು ಕಾಲೇಜಿನಿಂದ ಹೊರಟು ಬಾನಂದೂರು ಕ್ರಾಸ್ ಬಳಿ ಬೆಂಗಳೂರು-ಮೈಸೂರು ಹಳೆಯ ರಾಷ್ಟ್ರೀಯ ಹೆದ್ದಾರಿಗೆ ರಾಮನಗರದ ಕಡೆಗೆ ಹೋಗಲು ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ ಬೈಕ್ ಸವಾರ ಅಡ್ಡಬಂದ ಕಾರಣ ಚಾಲಕ ಶಾಲಾ ಬಸ್ ಅನ್ನು ರಸ್ತೆ ಎಡಭಾಗದ ಫುಟ್‍ಪಾತ್‍ಗೆ ಚಲಿಸಿದ್ದಾನೆ.

ಈ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದಲ್ಲಿರುವ ಹಳ್ಳದ ಕಡೆಗೆ ವಾಲಿದೆ. ಅದೃಷ್ಟವಶಾತ್ ಅಲ್ಲಿದ್ದ ಕಬ್ಬಿಣದ ಜಾಹೀರಾತು ಫಲಕದ ಕಂಬಿಯೊಂದು ಬಸ್ ಹಳ್ಳಕ್ಕೆ ಉರುಳದಂತೆ ತಡೆದಿದೆ. ಇದರಿಂದ ದೊಡ್ಡಮಟ್ಟದ ಅನಾಹುತವೊಂದು ತಪ್ಪಿದೆ. ಶಾಲಾ ಬಸ್‍ನಲ್ಲಿ 11 ವಿದ್ಯಾರ್ಥಿಗಳು ಹಾಗೂ 7 ಶಿಕ್ಷಕರು ಪ್ರಯಾಣಿಸುತ್ತಿದ್ದು ಅವಘಡದಲ್ಲಿ ಯಾರಿಗೂ ಅಪಾಯವಾಗಿಲ್ಲ. ಎಲ್ಲರೂ ಸುರಕ್ಷಿತವಾಗಿ ಬಸ್ಸಿನಿಂದ ಹೊರಗೆ ಬಂದಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ವಾಹನ ಹಾಗೂ ಕೆಲವು ಸ್ಥಳೀಯರ ಸಹಾಯದಿಂದ ಬಸ್‍ ಅನ್ನು ರಸ್ತೆಗೆ ಎಳೆಸಿದ್ದಾರೆ. ಘಟನೆಯಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು. ಬಳಿಕ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

2ಕೆಆರ್ ಎಂಎನ್ 2.ಜೆಪಿಜಿ

ಬಾನಂದೂರು ಕ್ರಾಸ್ ಬಳಿ ಶಾಲಾ ಬಸ್ ರಸ್ತೆ ಬದಿಯಲ್ಲಿ ಹಳ್ಳದ ಕಡೆಗೆ ವಾಲಿರುವ ದೃಶ್ಯ.