ಶಾಲಾ ಮಕ್ಕಳ ಆಟೋ ಪಲ್ಟಿ, ಮಕ್ಕಳಿಗೆ ಗಾಯ

| Published : Sep 07 2024, 01:34 AM IST

ಸಾರಾಂಶ

ಶಾಲಾ ಮಕ್ಕಳನ್ನು ಕೆರೆದೊಯ್ಯುತ್ತಿದ್ದ ಆಟೋ ಪಲ್ಟಿಯಾಗಿ ಮಕ್ಕಳಿಗೆ ಸಣ್ಣ ಪುಟ್ಟ ಗಾಯವಾದ ಘಟನೆ ಬೆಳಗಾವಿಯಲ್ಲಿ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಾಲಾ ಮಕ್ಕಳನ್ನು ಕೆರೆದೊಯ್ಯುತ್ತಿದ್ದ ಆಟೋ ಪಲ್ಟಿಯಾಗಿ ಮಕ್ಕಳಿಗೆ ಸಣ್ಣ ಪುಟ್ಟ ಗಾಯವಾದ ಘಟನೆ ಶುಕ್ರವಾರ ನಡೆದಿದೆ.

ಎಪಿಎಂಸಿ ರಸ್ತೆಯಿಂದ ಅಂಬೇಡ್ಕರ್ ನಗರದ ಕಡೆಗೆ ಹೊರಟಿದ್ದ ಸುಮಾರು 10ಕ್ಕೂ ಅಧಿಕ ಶಾಲಾ‌ ಮಕ್ಕಳಿದ್ದ ಆಟೋ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಅಪ್ಪಳಿಸಿದೆ. ಆಟೋ ಪಲ್ಟಿಯಾಗಿ ಮುಂದಿನ ಗ್ಲಾಸ್ ಸಿಡಿದು ದೂರದಲ್ಲಿ ಬಿದ್ದಿದೆ. ಆಟೋದಲ್ಲಿದ್ದ ಮಕ್ಕಳು ನೆಲಕ್ಕೆ ಬಿದ್ದ ಪರಿಣಾಮ ಮೈ, ಕೈಗೆ ಸಣ್ಣಪುಟ್ಟ ಗಾಯವಾಗಿವೆ. ಚಾಲಕ ಮದ್ಯಪಾನ ಮಾಡಿದ್ದನ್ನು ಗಮನಿಸಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಸುಮಾರು 20 ನಿಮಿಷಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಉತ್ತರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ‌ಈ‌ ಘಟನೆ ನಡೆದಿದೆ.

ಸಂಚಾರ ಪೊಲೀಸರು ಕೇವಲ ಹೆಲ್ಮೆಟ್‌ ಧರಿಸದವರ ವಿರುದ್ಧ ದಂಡ ಹಾಕುವುದಕ್ಕೆ ಒತ್ತು ನೀಡಿದ್ದು, ಕಣ್ಮುಂದೆಯೇ ಶಾಲಾಮಕ್ಕಳನ್ನು ಆಟೋಗಳಲ್ಲಿ ಕುರಿಗಳಂತೆ ತುಂಬಿಕೊಂಡು‌ ಹೋಗುವುದನ್ನು ಕಂಡೂ ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.