ಶಾಲಾ ಪ್ರಾರಂಭ: ಟ್ರ್ಯಾಕ್ಟರ್‌ನಲ್ಲಿ ವಿದ್ಯಾರ್ಥಿಗಳ ಮೆರವಣಿಗೆ

| Published : Jun 07 2024, 12:15 AM IST

ಶಾಲಾ ಪ್ರಾರಂಭ: ಟ್ರ್ಯಾಕ್ಟರ್‌ನಲ್ಲಿ ವಿದ್ಯಾರ್ಥಿಗಳ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಲಾಯಿತು. ಬೆಳಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ಶಾಲೆ ಮುಖ್ಯಗುರು, ಸಿಬ್ಬಂದಿ ವರ್ಗ ಹಾಗೂ ಪ್ರಮುಖರೆಲ್ಲ ಸೇರಿ ನೂತನವಾಗಿ ದಾಖಲಾತಿ ಹೊಂದಿರುವ ಮಕ್ಕಳನ್ನು ಸಿಂಗರಿಸಿದ ಟ್ರ್ಯಾಕರ್‌ನಲ್ಲಿ ಕೂರಿಸಿ ಮೆರವಣಿಗೆ ಆರಂಭಿಸಿದರು.

ಕನ್ನಡಪ್ರಭ ವಾರ್ತೆ ಯಡ್ರಾಮಿ

ಪಟ್ಟಣ ಸೇರಿ ತಾಲೂಕಿನಾದ್ಯಂತ ಶುಕ್ರವಾರ ಅದ್ದೂರಿಯಾಗಿ ಶಾಲಾ ಪ್ರಾರಂಭೋತ್ಸವ ನಡೆಯಿತು. ಶಿಕ್ಷಕರು ಹಾಗೂ ಶಾಲಾ ಸುಧಾರಣಾ ಸಮಿತಿ ಪ್ರಮುಖರು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಅಖಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಟ್ರ್ಯಾಕ್ಟರ್‌ನಲ್ಲಿ ಅದ್ದೂರಿ ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಲಾಯಿತು. ಬೆಳಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ಶಾಲೆ ಮುಖ್ಯಗುರು, ಸಿಬ್ಬಂದಿ ವರ್ಗ ಹಾಗೂ ಪ್ರಮುಖರೆಲ್ಲ ಸೇರಿ ನೂತನವಾಗಿ ದಾಖಲಾತಿ ಹೊಂದಿರುವ ಮಕ್ಕಳನ್ನು ಸಿಂಗರಿಸಿದ ಟ್ರ್ಯಾಕರ್‌ನಲ್ಲಿ ಕೂರಿಸಿ ಮೆರವಣಿಗೆ ಆರಂಭಿಸಿದರು. ಯುವತಿಯರು ಕುಂಭ ಹೊತ್ತು ಹೆಜ್ಜೆಹಾಕಿದರೆ, ಡೊಳ್ಳು ಕುಣಿತ, ಹಲಗೆ ಸದ್ದು ಗಮನಸೆಳೆಯಿತು.

ಶಿಕ್ಷಣ ಸಂಯೋಜಕ ಪ್ರಭುಗೌಡ ದೇಸಾಯಿ ರಿಬ್ಬನ್ ಕತ್ತರಿಸುವ ಮೂಲಕ ಸಿಂಗಾರಗೊಂಡ ಶಾಲೆಯ ಬಾಗಿಲು ತೆರೆದರು. ಬಳಿಒಂದನೇ ತರಗತಿ ದಾಖಲಾತಿ ಹೊಂದಿದ ಮಕ್ಕಳ ಪಾಲಕರು ಒಬ್ಬರ ನಂತರ ಒಬ್ಬರು ತಮ್ಮ ಮಕ್ಕಳನ್ನು ಶಾಲೆಯಲ್ಲಿ ಇರಿಸಿದ್ದ ತೊಟ್ಟಿಲಿನಲ್ಲಿ ಮಲಗಿಸಿದರು. ನಂತರ ಮುಖ್ಯಗುರುಗಳು ಹಾಗೂ ಶಿಕ್ಷಕರು ಮಗುವನ್ನು ಎತ್ತಿಕೊಂಡು ಸ್ವಾಗತ ಮಾಡಿಕೊಳ್ಳುವ ಮೂಲಕ ‘ತಾಯಿಯ ಮಡಿಲಿನಿಂದ ಶಾಲೆಗೆ’ ಎಂಬ ವಿಶೇಷ ಕಾರ್ಯಕ್ರಮ ನಡೆಸಲಾಯಿತು.

ಸಿಆರ್‌ಪಿ ಶಿವಕುಮಾರ, ಮುಖ್ಯಶಿಕ್ಷಕ ಮಲ್ಲನಗೌಡ ಪಾಟೀಲ, ಶಿಕ್ಷಕ ರವಿ ಪಾಟೀಲ, ರಾಜಶೇಖರಗೌಡ ಪೊಲೀಸ ಪಾಟೀಲ್, ಗುರಣ್ಣಗೌಡ ಮಾಲಿಪಾಟೀಲ್, ಪವಾಡಯ್ಯ ಹಿರೇಮಠ, ಸಿದ್ದಪ್ಪ ನೀಲೂರ, ನಂದಕುಮಾರ ಮಲ್ಲೇದ, ಬಸನಗೌಡ ಪಾಟೀಲ, ನಾಗಪ್ಪ ಕಮಾನಮನಿ, ಕಲ್ಲಪ್ಪ ನೀಲೂರ, ಮಾಳಿಂಗರಾಯ ಪೂಜಾರಿ, ದೇವಿಂದ್ರ ಪೂಜಾರಿ, ಅರುಣಾ ಪಾಟೀಲ ಇತರರಿದ್ದರು.