ಮೊರಾರ್ಜಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

| Published : Jul 03 2025, 11:49 PM IST

ಮೊರಾರ್ಜಿ ವಸತಿ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸಮೀಪದ ಆಲೂರುಸಿದ್ದಾಪುರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ಶಾಲೆಯ 2025-26ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು.

ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತ್ತು ಮತದಾನ ಮಾಡುವುದು ತನ್ನ ಹಕ್ಕು ಎಂಬ ಶೀರ್ಷಿಕೆಯಲ್ಲಿ ಚುನಾವಣೆಯನ್ನು ನಡೆಸಲಾಯಿತು. ಚುನಾವಣಾ ಆಯೋಗ ಚುನಾವಣೆ ನಡೆಯುವ ಮೊದಲು ಜಾರಿಗೊಳಿಸುವ ನೀತಿಸಂಹಿತೆಯಂತೆ ಶಾಲಾ ಸಂಸತ್ ಚುನಾವಣೆಗಿಂತ ಎರಡು ದಿನ ಮೊದಲೆ ಚುನಾವಣೆ ಅಧಿಕಾರಿಯಾಗಿದ್ದ ವಸತಿ ಶಾಲೆಯ ಪ್ರಾಂಶುಪಾಲೆ ಕೆ.ಎನ್.ಭಾರತಿ ನೀತಿಸಂಹಿತೆ ಜಾರಿಗೊಳಿಸಿದ್ದರು ಅದರಂತೆ ಚುನಾವಣೆಗೆ ಸ್ಪರ್ಧಿಸಿದ ವಿದ್ಯಾರ್ಥಿ ಅಭ್ಯರ್ಥಿಗಳು ಚುನಾವಣಾ ಪ್ರಚಾರ ನಡೆಸಿದರು. ಶಾಲಾ ಸಂಸತ್ ಮಂಡಳಿಯ 11 ಸ್ಥಾನಗಳಿಗಾಗಿ ಚುನಾವಣೆಯನ್ನು ನಡೆಸಲಾಗಿತ್ತು. ವಿದ್ಯಾರ್ಥಿ ಮತದಾರರು ಬ್ಯಾಲೆಟ್ ಪೇಪರ್‍ನಲ್ಲಿ ನಮೂದಿಸಿದ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಪಕ್ಕದಲ್ಲಿ ಮತ ಹಾಕುವ ವ್ಯವಸ್ಥೆ ಮಾಡಿದ ಹಿನ್ನಲೆಯಲ್ಲಿ ಮತದಾರರು ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತ ಹಾಕಿದರು. ಚುನಾವಣೆ ಮೊದಲು ನಡೆದ ಕಾರ್ಯಕ್ರಮದಲ್ಲಿ ವಸತಿ ಶಾಲಾ ಪ್ರಾಂಶುಪಾಲೆ ಕೆ.ಎನ್.ಭಾರತಿ ವಿದ್ಯಾರ್ಥಿಗಳಿಗೆ ಚುನಾವಣೆ ಮಹತ್ವ ಮತದಾನದ ಹಕ್ಕು ಮುಂತಾದ ಪ್ರಜಾಪ್ರಭುತ್ವದ ಉದ್ದೇಶ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಶಾಲಾ ಸಂಸತ್ತು ಮಂಡಳಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳುಶಾಲಾ ನಾಯಕ ಮತ್ತು ನಾಯಕಿ-ವಿ.ವಿ.ಗಗನ್ ಮತ್ತು ಗೀತಾಂಜಲಿ, ಉಪನಾಯಕ ಮತ್ತು ಉಪ ನಾಯಕಿ-ಕಿರಣ್ ಕೃಪಾಕರ್ ಮತ್ತು ನಿಶಾ. ಶಿಕ್ಷಣ ಮಂತ್ರಿ-ಎಸ್.ಪ್ರಜ್ವಲ್ ಮತ್ತು ಎಸ್.ಟಿ.ಹಿತೇಶ್ರೀ. ಹಣಕಾಸು ಮಂತ್ರಿ-ಬಿ.ಎ.ವರುಣ್ ಮತ್ತು ಎಸ್.ಪಿ.ನಿರೂಪ್. ಆರೋಗ್ಯ ಮಂತ್ರಿ-ಯು.ಎಲ್.ಶ್ರೇಯಸ್ ಮತ್ತು ಯಥಾಕ್ಷ. ಕ್ರೀಡಾಮಂತ್ರಿ-ಎಚ್.ಎಸ್,ಹಾಕ್ಷಿತ್ ಮತ್ತು ಕೆ.ಕೆ.ಶಿಲ್ಪಶ್ರೀ. ಸಾಂಸ್ಕೃತಿಕ ಮಂತ್ರಿ-ಎಂ.ಜಿ.ಶ್ರೇಯಸ್ ಮತ್ತು ಹಂಸಿಕ. ಸ್ವಚ್ಛತಾ ಮಂತ್ರಿ-ವಿವೇಕ್ ಮತ್ತು ಜಿ.ಪಿ.ಖುಸಿ. ವಾರ್ತಾ ಮಂತ್ರಿ-ಗೌತಮ್ ಪ್ರೀತ್ ಮತ್ತು ಸಂಪ್ರತಿ. ಆಹಾರ ಮಂತ್ರಿ-ಬಿ.ಎಂ.ಶಶಾಂಕ್ ಮತ್ತು ಎಂ.ಪಿ.ಅನನ್ಯ. ಶಿಸ್ತು ಮಂತ್ರಿ-ವಿನೀಶ್ ಗೌಡ ಮತ್ತು ಸ್ಪರ್ಶ.