ಸಾರಾಂಶ
ಇಂದಿನ ಯುವಜನತೆಯಲ್ಲಿ ಮಾನವೀಯ ಮೌಲ್ಯತೆಗಳುಳ್ಳ ಭಾವ ಮೊಳಕೆಯೊಡೆಯಬೇಕು. ಜೊತೆಗೆ ಶ್ರೇಷ್ಠತೆಯ ನಾಯಕತ್ವದ ಗುಣಗಳು ಆಳವಡಿಸಿಕೊಳ್ಳಬೇಕು. ಅಂದಾಗ ಭವಿಷ್ಯತ್ತಿನ ಆದರ್ಶತೆಗೊಂದು ನೈತಿಕತೆಯ ಮೌಲ್ಯಾಧಾರಿತದ ಮೆರುಗು ಬಂದಿತೆಂದು ಎಂದು ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ ಹೇಳಿದರು.
ಕನ್ನಡಪ್ರಭ ವಾರ್ತೆ ಆಲಮಟ್ಟಿ
ಇಂದಿನ ಯುವಜನತೆಯಲ್ಲಿ ಮಾನವೀಯ ಮೌಲ್ಯತೆಗಳುಳ್ಳ ಭಾವ ಮೊಳಕೆಯೊಡೆಯಬೇಕು. ಜೊತೆಗೆ ಶ್ರೇಷ್ಠತೆಯ ನಾಯಕತ್ವದ ಗುಣಗಳು ಆಳವಡಿಸಿಕೊಳ್ಳಬೇಕು. ಅಂದಾಗ ಭವಿಷ್ಯತ್ತಿನ ಆದರ್ಶತೆಗೊಂದು ನೈತಿಕತೆಯ ಮೌಲ್ಯಾಧಾರಿತದ ಮೆರುಗು ಬಂದಿತೆಂದು ಎಂದು ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ ಹೇಳಿದರು.ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹರ್ಡೇಕರ್ ಸ್ಮಾರಕ ಸಂಯುಕ್ತ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಜರುಗಿದ ಪ್ರಸಕ್ತ 2024-25 ನೇ ಸಾಲಿನ ಶಾಲಾ ಸಂಸತ್ತು ಚುನಾವಣಾ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಯ ಅಧಿಸೂಚನೆ ಹೊರಡಿಸಿ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಯಿತು. ನಾಮ ಪತ್ರ ಸಲ್ಲಿಸುವುದು ನಾಮ ಪತ್ರ ಪರಿಶೀಲನೆ ಅಂತಿಮ ಉಮೇದುವಾರರ ಪಟ್ಟಿ, ಚುನಾವಣಾ ಪ್ರಚಾರ ಈ ರೀತಿಯಾಗಿ ನಿಯಮಗಳನ್ನು ಪಾಲಿಸಿ ಚುನಾವಣಾ ಪ್ರಕ್ರಿಯೆಗಳು ನಡೆದವು. ಚುನಾವಣೆ ಅಧಿಕಾರಿಗಳಾಗಿ ಶಿಕ್ಷಕ ಎಂ.ಎಚ್.ಬಳಬಟ್ಟಿ, ಎಮ್.ಎಸ್.ಗಾಳಪ್ಪಗೋಳ, ಶಿಕ್ಷಕಿ ಸರಸ್ವತಿ ಈರಗಾರ, ಜಗದೇವಿ ಕೆ, ಜ್ಯೋತಿ ಹಡಪದ ಕಾರ್ಯನಿರ್ವಹಿಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯೋಪಾಧ್ಯಾಯ ಎಸ್.ಆಯ್.ಗಿಡ್ಡಪ್ಪಗೋಳ, ಮಾರ್ಗದರ್ಶಕರಾಗಿ ಹಿರಿಯ ಶಿಕ್ಷಕ ಯು.ಎ.ಹಿರೇಮಠ, ಜಿ.ಎಂ.ಹಿರೇಮಠ ಕಾರ್ಯ ಮಾಡಿದರು.ಪ್ರಿಸೈಡಿಂಗ್ ಅಧಿಕಾರಿಯಾಗಿ ಸ್ನೇಹಾ ದಳವಾಯಿ, ಎ.ಪಿ.ಆರ್.ಓ. ನಿಶ್ಚಿತಾ ಕೊಪ್ಪನ್ನವರ, ಒಂದನೇ ಪೋಲಿಂಗ್ ಅಧಿಕಾರಿಯಾಗಿ ವಿಜಯಲಕ್ಷ್ಮೀ ತಳೂರ, ಎರಡನೇ ಪೋಲಿಂಗ್ ಅಧಿಕಾರಿ ಚಂದ್ರಿಕಾ ಹಿರೇಮಠ, ಮೂರನೇ ಪೋಲಿಂಗ್ ಅಧಿಕಾರಿಯಾಗಿ ರತ್ನಾ ಜಲ್ಲಿ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿದರು.
ಪ್ರಧಾನಮಂತ್ರಿಯಾಗಿ ಆಕೀಬ ತಹಶೀಲ್ದಾರ, ಮಹಿಳಾ ಪ್ರಧಾನಿಯಾಗಿ ಫೈರೋಜ್ ಬಾಗಲಕೋಟ, ಉಪ ಪ್ರಧಾನಿಯಾಗಿ ಮದ್ವೇಶ ಕುಲಕರ್ಣಿ ಆಯ್ಕೆಯಾದರು. ಅದರಂತೆ ವಿನೋದ ಗುಳಬಾಳ ಕ್ರೀಡಾ ಮಂತ್ರಿ, ಸಮರ್ಥ ಭಲೇಶ್ವರ ಆರೋಗ್ಯ ಮಂತ್ರಿ, ಶಂಕ್ರಮ್ಮ ಹುಲ್ಲೂರ ವಾಚನಾಲಯ ಮಂತ್ರಿ, ಸಾನಿಯಾ ನದಾಫ್ ಸಾಂಸ್ಕೃತಿಕ ಮಂತ್ರಿ, ಮಲೀಕ ನದಾಫ್ ಪ್ರವಾಸ ಮಂತ್ರಿಯಾಗಿ ಆಯ್ಕೆಯಾದರು.---