ಸಾರಾಂಶ
ಹಿಂದೆಲ್ಲ ಮನುಷ್ಯನಿಗೆ ಒಂದಿಲ್ಲೊಂದು ಕೆಲಸ ಕಾರ್ಯಗಳ ಮೂಲಕ ವ್ಯಾಯಾಮವನ್ನು ಮಾಡುತ್ತಿದ್ದು,
ಕನ್ನಡಪ್ರಭ ವಾರ್ತೆ ಬನ್ನೂರು
ಸದೃಢವಾದ ಮನಸ್ಸು, ಏಕಾಗ್ರತೆ ರೂಪಿಸಿಕೊಳ್ಳಬೇಕಾದರೆ ಕ್ರೀಡೆ ಮನಷ್ಯನ ಜೀವನದಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಟ್ಯಾವೋ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ.ಆರ್. ಮಂಜುನಾಥ್ ಹೇಳಿದರು.ಪಟ್ಟಣದ ಬಿ. ಸೀಹಳ್ಳಿಯ ಆದಿಶಕ್ತಿ ಹುಚ್ಚಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾದ ಹೋಬಳಿ ಮಟ್ಟದ ಶಾಲಾ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದೆಲ್ಲ ಮನುಷ್ಯನಿಗೆ ಒಂದಿಲ್ಲೊಂದು ಕೆಲಸ ಕಾರ್ಯಗಳ ಮೂಲಕ ವ್ಯಾಯಾಮವನ್ನು ಮಾಡುತ್ತಿದ್ದು, ಆತನ ಆಯಸ್ಸು, ದೇಹದ ಶಕ್ತಿಯು ವೃದ್ಧಿಯಾಗುತ್ತಿತ್ತು. ಆದರೆ ಇಂದು ಮನುಷ್ಯ ವಿಲಾಸಿ ಜೀವನ ಅನುಸರಣೆ ಮಾಡುತ್ತಿರುವ ಹಿನ್ನೆಲೆ ಕೆಲಸ ಕಾರ್ಯಗಳು ಕಡಿಮೆಯಾಗುತ್ತಿದ್ದು, ಆತನ ಆಯಸ್ಸು ನಿತ್ಯ ಕಡಿಮೆಯಾಗುತ್ತಿದೆ ಎಂದರು.ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ ಮಾತನಾಡಿ, ಕ್ರೀಡೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ. ಎಲ್ಲ ಶಾಲೆಗಳ ಜೊತೆಯಲ್ಲಿ ಪಾಲ್ಗೊಳ್ಳುವ ಹುಮ್ಮಸ್ಸು ಮುಖ್ಯ ಎಂದರು. ಕ್ರೀಡೆಯನ್ನು ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆ ಮಾಡಿರುವುದು ಸಂತಸವನ್ನುಂಟು ಮಾಡಿದ್ದು, ಮುಂದಿನ ದಿನಗಳಲ್ಲಿಯೂ ಇಲ್ಲಿ ಹೆಚ್ಚು ಹೆಚ್ಚು ಕ್ರೀಡಾ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಆಶಿಸಿದರು.
ಯೋಜನಾ ಸಮನ್ವಯಾಧಿಕಾರಿ ಜಿ. ಶೋಭಾ, ಶಿವಶಂಕರ್‌ಮೂರ್ತಿ, ಸುಬ್ರಹ್ಮಣ್ಯ, ರೋಟರಿ ಶಾಲೆಯ ಅಧ್ಯಕ್ಷ ವೆಂಕಟೇಶ್, ಸೀಹಳ್ಳಿ ಗ್ರಾಪಂ ಅಧ್ಯಕ್ಷ ಜೈ ಕುಮಾರ್, ಜವರೇಗೌಡ, ಶಿವಮೂರ್ತಿ, ದೇವರಾಜು, ನಾಗೇಶ್, ಸುರೇಶ್, ದೈಹಿಕ ಶಿಕ್ಷಕ ಶಬೀರ್, ಕುಮಾರ್, ಮರಿಸ್ವಾಮಿ, ಪುಟ್ಟರಾಜು, ರಾಜೇಂದ್ರಪ್ರಸಾದ್, ಮಂಜುನಾಥ್ ಇದ್ದರು.