ಸಾರಾಂಶ
ಕಲಾದಗಿ: ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು, ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಿರಿಯ, ಹಿರಿಯ, ಪ್ರೌಢಶಾಲೆಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.
ಕನ್ನಡಪ್ರಭ ವಾರ್ತೆ ಕಲಾದಗಿ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದು, ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಕಿರಿಯ, ಹಿರಿಯ, ಪ್ರೌಢಶಾಲೆಗಳು ಸಕಲ ಸಿದ್ಧತೆ ಮಾಡಿಕೊಂಡಿವೆ.
ಮೇ ೩೧ರಂದು ಶಾಲಾ ಪ್ರಾರಂಭೋತ್ಸವ ಹಮ್ಮಿಕೊಂಡಿದ್ದು, ಪೂರ್ವಭಾವಿಯಾಗಿ ಮೇ ೨೯ರಿಂದಲೇ ಎಲ್ಲಾ ಶಾಲೆಗಳಲ್ಲಿ ತರಗತಿ ಕೊಠಡಿಗಳು, ಮೈದಾನ, ಶೌಚಾಲಯ, ಕುಡಿಯುವ ನೀರು, ಅಡುಗೆ ಕೋಣೆ ಸ್ವಚ್ಛತೆ ಮಾಡಿದ್ದಾರೆ, ಕಳೆದರಡು ದಿನದಿಂದ ಶಾಲೆಯಲ್ಲಿ ಮುಖ್ಯಶಿಕ್ಷಕರು, ಶಿಕ್ಷಕ ಬಳಗದವರು ಶಾಲೆಗೆ ಆಗಮಿಸಿ ವೇಳಾಪಟ್ಟಿ, ಸಂಯುಕ್ತ ಪತ್ರಿಕೆ, ಅಂದಾಜು ಯೋಜನೆ, ವಾರ್ಷಿಕ ಕಾರ್ಯಯೋಜನೆ, ಸೇತುಬಂಧ ಸಿದ್ಧತೆ ಸೇರಿ ಎಲ್ಲ ತಯಾರಿ ಸಿದ್ಧತೆ ಮಾಡಿಕೊಂಡಿರುವುದು ಕಂಡು ಬಂತು. ಕಲಾದಗಿ ವಲಯ ವ್ಯಾಪ್ತಿಯಲ್ಲಿ ೧೬ ಶಾಲೆಗಳು ಬರುತ್ತಿದ್ದು, ಇದರಲ್ಲಿ ಮೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, ಒಂದು ಅನುದಾನ ರಹಿತ ಕಿರಿಯ ಪ್ರಾಥಮಿಕ ಶಾಲೆ, 6 ಸರ್ಕಾರಿ ಹಿರಿಇಯ ಪ್ರಾಥಮಿಕ ಶಾಲೆ, ಒಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಒಂದು ಆಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ, 2 ಅನುದಾನಿ ಪ್ರೌಢಶಾಲೆ, 2 ಅನುದಾನ ರಹಿತ ಪ್ರೌಢಶಾಲೆಗಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ವಲಯ ಸಂಪನ್ಮೂಲ ವ್ಯಕ್ತಿ ಮಂಜುನಾಥ ಹೆಡಗಿ ಶಾಲೆಗಳಿಗೆ ತೆರಳಿ ಸಿದ್ಧತೆ ಪರಿಶೀಲಿಸಿ ವೀಕ್ಷಣೆ ಮಾಡಿದರು.