ಜ್ಞಾನ ವೃದ್ಧಿಗೆ ವಿಜ್ಞಾನ ಅವಶ್ಯ: ಡಾ.ದೊಡ್ಡೆ

| Published : Sep 16 2024, 01:52 AM IST

ಜ್ಞಾನ ವೃದ್ಧಿಗೆ ವಿಜ್ಞಾನ ಅವಶ್ಯ: ಡಾ.ದೊಡ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕದಿಂದ ಆಯೋಜಿಸಿದ ಜ್ಞಾನ-ವಿಜ್ಞಾನ ಮೇಳ ಹಾಗೂ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಿಇಒ ಟಿಆರ್ ದೊಡ್ಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೀದರ್‌

ವೈಜ್ಞಾನಿಕ ಮನೋಭಾವನೆ ಬೆಳೆಸುವುದಕ್ಕೆ ವಿಜ್ಞಾನ ಮೇಳ ಅತ್ಯಂತ ಮಹತ್ವದಾಗಿದೆ. ಮಾತೃ ಭಾಷೆಗೆ ಒತ್ತು ನೀಡಿದರೆ ವಿದ್ಯಾರ್ಥಿಗಳು ಉಳಿದ ವಿಷಯಗಳನ್ನು ಸುಲಭವಾಗಿ ಕಲಿಯುತ್ತಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿಗಳಾಗಿರುವ ಡಾ.ಟಿ.ಆರ್.ದೊಡ್ಡೆ ನುಡಿದರು.

ಅವರು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕದಿಂದ ಆಯೋಜಿಸಿದ ಜ್ಞಾನ-ವಿಜ್ಞಾನ ಮೇಳ ಹಾಗೂ ಸಂಸ್ಕೃತಿ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಜ್ಞಾನ ನಮ್ಮಲ್ಲಿ ಜ್ಞಾನದ ಬೆಳಕು ಹುಟ್ಟಿಸುತ್ತದೆ. ಬಡತನ ನಮ್ಮ ಸಾಧನೆಗೆ ತೊಡಕಾಗಲಾರದು ಎಂಬ ಜೀವಂತ ನಿದರ್ಶನಗಳನ್ನು ನೀಡುತ್ತಾ ಮಕ್ಕಳ ಮನ ಮುಟ್ಟುವಂತೆ ತಿಳಿಸಿದರು.

ಸರ್ಕಾರಿ ಪಾಲಿಟೆಕ್ನಿಕ್‌ನ ಕಾಲೇಜಿನ ಉಪನ್ಯಾಸಕರಾದ ಶಿವಕುಮಾರ ಕಟ್ಟೆ ಅವರು, ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಸಂಸ್ಕಾರಯುಕ್ತ ವ್ಯಕ್ತಿ ಎಂದೂ ಅಪರಾಧ ಮಾಡುವುದಿಲ್ಲ, ಹಾಗಾಗಿ ಪ್ರತಿಯೊಬ್ಬರು ಶಾಲೆಗಳಲ್ಲಿ, ಮನೆಗಳಲ್ಲಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವಂತಾಗಬೇಕು ಎಂದು ಹೇಳಿದರು. ನಮಗೆ ಒಳ್ಳೆಯ ಮಿತ್ರನೆಂದರೆ ಪುಸ್ತಕ. ಪುಸ್ತಕ ಎಂದೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದರು.

ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಪ್ರೊ.ಎಸ್.ಬಿ.ಸಜ್ಜನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಲು-ಗೆಲವು ಸಹಜ ಪ್ರವೃತ್ತಿಗಳು. ವಿದ್ಯಾರ್ಥಿಗಳು ಪಾರದರ್ಶಕ ಸ್ಪರ್ಧೆ ಮಾಡಬೇಕೆಂದು ಹೇಳಿ, ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಅ.16, 17 ರಂದು ಮಂಗಳೂರಿನಲ್ಲಿ ನಡೆಯಲಿರುವ ಪ್ರಾಂತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು. ವಿದ್ಯಾಭಾರತಿ ಜಿಲ್ಲಾ ಕಾಯರ್ದಶಿ ಭಗುಸಿಂಗ್ ಜಾಧವ್ ಸ್ವಾಗತಿಸಿದರು. ವಿದ್ಯಾರಣ್ಯ ಪ್ರೌಢ ಶಾಲೆ ಮುಖ್ಯಗುರು ಪ್ರತಿಭಾ ಚಾಮಾ ನಿರೂಪಿಸಿದರೆ ಮೇಳದ ಪ್ರಮುಖರಾದ ಉಜ್ವಲಾ ಶಿರಮಾ ವಂದಿಸಿದರು.