ಸಾರಾಂಶ
ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಕರೂರ ಎಜುಎಷ್ಶಿಯಾ ಶಾಲೆ ದ್ವಿತೀಯ, ನಿಟ್ಟೂರಿನ ಬಿಎಜೆಎಸ್ಎಸ್ ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ
ರಾಣಿಬೆನ್ನೂರು: ವಿಜ್ಞಾನ ಕೇವಲ ವಸ್ತು ಪ್ರದರ್ಶನವಲ್ಲ, ಬದಲಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ಸೃಜನಶೀಲತೆ ಬೆಳೆಸುತ್ತದೆ ಎಂದು ಬಿಇಒ ಎಂ.ಎಚ್. ಪಾಟೀಲ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣುಮಕ್ಕಳ ಸಂಯುಕ್ತ ಪದವಿ-ಪೂರ್ವ ಕಾಲೇಜ್‌ನಲ್ಲಿ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ವೈಜ್ಞಾನಿಕ ಚಿಂತನೆ ಹೊಂದುವುದರ ಮೂಲಕ ಮೂಢನಂಬಿಕೆ ಹೋಗಲಾಡಿಸಬೇಕು ಎಂದರು.ಸ್ಥಳೀಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಪಿ.ಲಿಂಗನಗೌಡ್ರ ಮಾತನಾಡಿ, ಬದಲಾವಣೆ ಜಗದ ನಿಯಮವಾಗಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ, ಚಿಂತನೆ ಬೆಳೆಸಿಕೊಳ್ಳಬೇಕು ಎಂದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಟ್ಟು 36 ಮಾದರಿಗಳು ಪ್ರದರ್ಶನಗೊಂಡು ಸುಮಾರು ಸಾವಿರಕ್ಕೂ ಹೆಚ್ಚು ವಿವಿಧ ಶಾಲೆಯ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ಕರೂರ ಎಜುಎಷ್ಶಿಯಾ ಶಾಲೆ ದ್ವಿತೀಯ, ನಿಟ್ಟೂರಿನ ಬಿಎಜೆಎಸ್ಎಸ್ ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು.ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಬಿ.ಎಸ್. ಪಟ್ಟಣಶೆಟ್ಟಿ, ವೀರೇಶ ಅಂಗಡಿ, ಪ್ರಾ. ಡಾ.ಎನ್.ಪಿ. ಮಾಗನೂರ, ಆರ್.ಜಿ. ಕುರವತ್ತಿ, ರಜನಿ ಲಿಂಗನಗೌಡ್ರ, ಎಸ್.ಆರ್. ಘಟ್ಟಿರೆಡ್ಡಿಹಾಳ ಮತ್ತು ಇತರರಿದ್ದರು.