ರಾಮನಗರ: ಜಿಲ್ಲೆಯಲ್ಲಿ ಕಪ್ಪುತಲೆ ಹುಳು, ಬಿಳಿನೊಣ, ಬೆಂಕಿ ರೋಗ ಹಾಗೂ ಇತರೆ ಕೀಟ ಬಾಧೆಗೆ ತುತ್ತಾಗಿರುವ ತೆಂಗಿನ ಬೆಳೆಯ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
ರಾಮನಗರ: ಜಿಲ್ಲೆಯಲ್ಲಿ ಕಪ್ಪುತಲೆ ಹುಳು, ಬಿಳಿನೊಣ, ಬೆಂಕಿ ರೋಗ ಹಾಗೂ ಇತರೆ ಕೀಟ ಬಾಧೆಗೆ ತುತ್ತಾಗಿರುವ ತೆಂಗಿನ ಬೆಳೆಯ ವೈಜ್ಞಾನಿಕ ಸಮೀಕ್ಷೆ ನಡೆಸಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ತೆಂಗನ್ನು 27,959 ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತಿದೆ. ಇದರಿಂದ 1,92,940 ಮೆಟ್ರಿಕ್ ಟನ್ ಉತ್ಪನ್ನ ದೊರೆಯುತ್ತಿದೆ. ಈ ಬಾರಿ ಹವಾಮಾನ ವೈಪರೀತ್ಯ ಸೇರಿದಂತೆ ಮುಂತಾದ ಕಾರಣಗಳಿಂದ ರೋಗಗಳು ಹೆಚ್ಚಾಗಿವೆ. ಇದರಿಂದ ಕೋಟ್ಯಂತರ ರುಪಾಯಿ ನಷ್ಟವಾಗಿದ್ದು, ರೈತರು ಕಂಗಾಲಾಗಿದ್ದಾರೆ.ಬಿಳಿನೊಣ ಬಾಧೆಯು ಎಲ್ಲ ಭಾಗಗಳಲ್ಲಿಯೂ ಹೆಚ್ಚಾಗಿಯೇ ಕಾಣಿಸಿಕೊಂಡಿದೆ. ಕಪ್ಪುತಲೆ ಹುಳು ಬಾಧೆ ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕಿನಲ್ಲಿ ಆವರಿಸಿದೆ. ಈ ಕಪ್ಪುತಲೆ ಹುಳುಗಳು ಕಾಣಿಸಿಕೊಂಡಾಗ ತಕ್ಷಣದಲ್ಲಿ ಹತೋಟಿ ಕ್ರಮಗಳನ್ನು ಅನುಸರಿಸದಿದ್ದರೆ ಅಕ್ಕಪಕ್ಕದ ತೋಟಗಳಿಗೆ ಹರಡುವ ಸಾಧ್ಯತೆ ಹೆಚ್ಚಾಗಿದೆ.
ಮರು ಸರ್ವೆ ಕಾರ್ಯ:ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು, ರೋಗ ಬಾಧಿತ ಪ್ರದೇಶಗಳಲ್ಲಿ ‘ಪೆಸ್ಟ್ ಸಮೀಕ್ಷೆ ನಡೆಸಿ ಒಂದು ತಿಂಗಳೊಳಗೆ (ಸೆ.5ರೊಳಗೆ) ನಿಖರ ಮಾಹಿತಿಯನ್ನು ಸಲ್ಲಿಸುವಂತೆ ಇಲಾಖೆ ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ಸೂಚನೆ ನೀಡಿತ್ತು. ಆದರೆ, ಒಂದು ತಿಂಗಳಲ್ಲಿ ಸಮೀಕ್ಷೆ ಕಾರ್ಯ ನಡೆಸುವುದು ಅಸಾಧ್ಯವಾಗಿತ್ತು. ಜೊತೆಗೆ
ತೋಟಗಾರಿಕೆ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ಮತ್ತು ಸಮೀಕ್ಷೆಗೆ ಅಗತ್ಯವಿದ್ದಷ್ಟು ಪಿ.ಎಸ್.ಗಳನ್ನು ನಿಯೋಜಿಸಿರಲಿಲ್ಲ. ಕೆಲವು ಕಡೆ ನೆಟ್‌ವರ್ಕ್ ಸಮಸ್ಯೆಯಿಂದ ‘ಕ್ರಾಪ್ ಇನ್‌ಸ್ಪೆಕ್ಷನ್ ಬಿಎಚ್‌ಸಿ ಆ್ಯಪ್’ ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದ ಸಮೀಕ್ಷೆ ಕಾರ್ಯ ಅಪೂರ್ಣಗೊಂಡಿತ್ತು. ಇದೀಗ ಮರು ಸರ್ವೆ ಕಾರ್ಯಕ್ಕೆ ಇಲಾಖೆ ಆದೇಶ ಹೊರಡಿಸಿದೆ.ಅದರಂತೆ ಜಿಲ್ಲೆಯ 362 ಗ್ರಾಮಗಳ 90,129 ತಾಕುಗಳಲ್ಲಿ ರೋಗ ಬಾಧೆಯನ್ನು ಸಮೀಕ್ಷೆ ಮಾಡಲು 95 ಪೆಸ್ಟ್ ಸರ್ವೆಯರ್ (ಸ್ಥಳೀಯ ಖಾಸಗಿ ವ್ಯಕ್ತಿ)ಗಳನ್ನು ನಿಯೋಜಿಸಲಾಗಿದೆ. ಅವರು ಪ್ರತಿ ತಾಕಿಗೆ ಹೋಗಿ ರೋಗ ಲಕ್ಷಣಗಳನ್ನು ಅಧ್ಯಯನ ಮಾಡಿ, ತಂತ್ರಾಂಶದಲ್ಲಿ ಅಂಕಿಅಂಶ ಮತ್ತು ಮಾಹಿತಿಯನ್ನು ದಾಖಲಿಸುತ್ತಾರೆ. ಅವರಿಗೆ ತರಬೇತಿಯನ್ನೂ ನೀಡಲಾಗಿದೆ.
ಈಗಾಗಲೇ 90,129 ತಾಕುಗಳ ಪೈಕಿ 6080 ತಾಕುಗಳಲ್ಲಿ ಸಮೀಕ್ಷೆ ಕಾರ್ಯ ಮುಗಿದಿದ್ದು, ಉಳಿಕೆ 84,049 ತಾಕುಗಳಲ್ಲಿ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.ಬಾಕ್ಸ್ ...............
ಸಮೀಕ್ಷೆಯ ಉದ್ದೇಶಗಳೇನು ?1.ಜಿಪಿಎಸ್ ಆಧಾರಿತ ಮೊಬೈಲ್ ಅಪ್ಲಿಕೇಷನ್ ಅನ್ನು ಬಳಸಿ ಸರ್ವೆ ನಂಬರ್ - ಉಪ ಸರ್ವೆ ನಂಬರ್ ವಾರು ತೆಂಗಿನಲ್ಲಿ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣ ಬಾಧಿತ ಪ್ರದೇಶದ ನಿಖರ ಮಾಹಿತಿ ದಾಖಲಿಸುವುದು.
2.ತೆಂಗಿನಲ್ಲಿ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣ ಬಾಧೆಯನ್ನು ಗುರುತಿಸಿ ಇ - ಗವರ್ನೆಸ್ ಅಭಿವೃದ್ಧಿ ಪಡಿಸಿದ ಕ್ರಾಪ್ ಇನ್ ಸ್ಪೆಕ್ಷನ್ ಬಿಎಚ್ ಸಿ ಆಪ್ ಮೂಲಕ ಪೆಸ್ಟ್ ಸರ್ವೆಯರ್ ಗಳು ಸಮೀಕ್ಷೆ ನಡೆಸುವುದು.3.ಸಮೀಕ್ಷೆಯ ವರದಿ ಆಧಾರದ ಮೇಲೆ ಬಾಧಿತ ತೋಟಗಳಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಕೋಟ್ ..............ತೆಂಗಿನ ಕಪ್ಪು ತಲೆ ಹುಳು ಮತ್ತು ಬಿಳಿ ನೊಣ ಬಾಧೆ ನಿಯಂತ್ರಿಸಲು ರೈತರಿಗೆ ಸಲಹೆ ನೀಡಲಾಗುತ್ತಿದೆ. ಈ ರೋಗದ ಸಮೀಕ್ಷೆ ವರದಿಯನ್ನು ಜನವರಿ ತಿಂಗಳೊಳಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಪಿ.ಆರ್.ಗಳು ತೋಟಕ್ಕೆ ಬಂದಾಗ ರೈತರು ಅಗತ್ಯ ಸಹಕಾರ ನೀಡಬೇಕು.
- ಮಂಜುನಾಥ್, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬೆಂ.ದಕ್ಷಿಣ ಜಿಲ್ಲೆಬಾಕ್ಸ್ ........
ತೆಂಗು ಬೆಳೆ ವಿಸ್ತೀರ್ಣ, ಕಪ್ಪು ತಲೆ ಹುಳು ಮತ್ತು ಬಿಳಿ ನೊಣ ಬಾಧೆಯ ತಾಲೂಕುವಾರು ಅಂದಾಜು ನಷ್ಟದ ವಿವರ (ಹೆ.ಗಳಲ್ಲಿ)ತಾಲೂಕುವಿಸ್ತೀರ್ಣಕಪ್ಪುತಲೆ ಹುಳಿವಿನಿಂದ ಬಾಧಿತ ಪ್ರದೇಶಬಿಳಿ ನೊಣದಿಂದ ಬಾಧಿತ ಪ್ರದೇಶ
ರಾಮನಗರ5,2481501,850ಚನ್ನಪಟ್ಟಣ11,9781196,730
ಮಾಗಡಿ4,5240.003,860ಕನಕಪುರ6,2097005,600
ಒಟ್ಟು27,95996918,0405ಕೆಆರ್ ಎಂಎನ್ 1.ಜೆಪಿಜಿ
ಕಪ್ಪುತಲೆ ಹುಳು ಮತ್ತು ಬಿಳಿನೊಣ ಬಾಧೆಗೆ ತುತ್ತಾಗಿರುವ ತೆಂಗಿನ ಮರಗಳು.