ಶಾಸಕ ರಮೇಶ ಬಂಡಿ ಸಿದ್ದೇಗೌಡ ವಜಾಗೊಳಿಸಲು ಎಸ್‌ಡಿಪಿಐ ಆಗ್ರಹ

| Published : Jun 25 2025, 11:47 PM IST

ಸಾರಾಂಶ

ಮುಸ್ಲಿಂರಿಗೆ ಜಮೀನು ನೀಡಿದರೆ ಅಧಿಕಾರಿಯನ್ನು ನೇಣಿಗೇರಿಸುತ್ತೆನೆಂದು ಮಾತನಾಡಿರುವ ಕಾಂಗ್ರೆಸ್ ಶಾಸಕ ರಮೇಶ ಬಂಡಿ ಸಿದ್ದೇಗೌಡರನ್ನು ರಾಜ್ಯ ಸರಕಾರ ಶಾಸಕ ಸ್ಥಾನದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಪಟ್ಟಣದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ನಂತರ ಎಸ್ ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ಮಹಮ್ಮದ್ ರಫಿ ಖಾಜಿ ಮಾತನಾಡಿ, ಮುಸ್ಲಿಂರು ಸರ್ಕಾರಿ ಜಾಗದಲ್ಲಿ ತಲೆತಲಾಂತರದಿಂದ ಉಳುಮೆ ಮಾಡಿ ಕೃಷಿ ಮಾಡುತ್ತಿರುವ ರೈತರು ತಮಗೆ ಸರ್ಕಾರಿ ಜಮೀನನ್ನು ಮಂಜೂರು ಮಾಡಲು ಕೇಳಿ ಬಗರ್ಹುಕುಂ ಯೋಜನೆಯಡಿ ಅರ್ಜಿ ಸಲ್ಲಿಸಿದ ವಿಚಾರವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಗರಂ ಆದ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿ ಸಿದ್ದೇಗೌಡ ಹೇಳಿಕೆಯು ಒಂದು ಸಮುದಾಯವನ್ನು ಗುರಿಯಾಗಿಸಿ, ಗೂಂಡಾಗಳನ್ನು ಅನುಕರಿಸುವಂತಿದೆ ಎಂದು ದೂರಿದರು.

ಕೂಡಲೇ ರಾಜ್ಯ ಸರ್ಕಾರ ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೇಸ್ ಸರಕಾರದ ವಿರುದ್ದ ರಾಜ್ಯ ವ್ಯಾಪಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪಕ್ಷದ ಮುಖಂಡರಾದ ಪಾಷಾ ಕಡ್ಡಿಪುಡಿ, ಖಾಸಿಂ ಡೊಯಿ, ಅಹ್ಮದ್ ರಜಾ ಖಾಜಿ, ಫಾರುಕ್ ಬೇಗ್, ದಾವುದ್, ಮೂಸಾ ಶೇಖ್, ಮಹಬೂಬ್ ದುಮ್ ದುಮ್, ಜಮಾಲ್ ಸಾಬ್, ಮಹಬೂಬ್ ಬೆಳ್ಳಿಕಟ್, ಜಾವಿದ್, ಸೇರಿ ಅನೇಕರು ಇದ್ದರು.