ಎಸ್ ಡಿಪಿಐ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ

| Published : Jan 31 2025, 12:46 AM IST

ಸಾರಾಂಶ

ಉಳಿದಂತೆ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಅಝ್ಹರ್ ಪಾಷ, ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮತೀನುದ್ದೀನ್, ಜಿಲ್ಲಾ ಕಾರ್ಯದರ್ಶಿಯಾಗಿ ಮಾಗಡಿ ನೂರುದ್ದೀನ್ , ಸೈಯದ್ ಅಸಾದುಲ್ಲಾ, ಜಿಲ್ಲಾ ಖಜಾಂಚಿಯಾಗಿ ವಸೀಮ್ ಪಾಷ, ಜಿಲ್ಲಾ ಸಮಿತಿ ಸದಸ್ಯರಾಗಿ ಫೈರೋಜ್ ಅಲಿ ಖಾನ್, ಮೊಹಮ್ಮದ್ ವಾಸಿಮ್, ಸೈಯದ್ ಸಲೀಂ, ಸೈಯದ್ ಶಾಬಾಝ್ ಅಲಿ ಅವರನ್ನು ಆಯ್ಕೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ರಾಮನಗರ

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಪಕ್ಷದ ಜಿಲ್ಲಾಧ್ಯಕ್ಷರಾಗಿ ಅಮ್ಜದ್ ಷರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಸೈಯದ್ ಮತೀನ್ ಆಯ್ಕೆಯಾದರು.

ನಗರದ ರೈಲ್ವೆ ನಿಲ್ದಾಣದ ಬಳಿಯ ಅಲ್ ಕರೀಮ್ ಫಂಕ್ಷನ್ ಹಾಲ್ ನಲ್ಲಿ ಪಕ್ಷದ ರಾಜ್ಯ ಖಜಾಂಚಿ ಅಮ್ಜದ್ ಖಾನ್ ಮತ್ತು ರಾಜ್ಯ ಸಮಿತಿ ಸದಸ್ಯರಾದ ಅಬ್ರಾರ್ ಅಹಮದ್ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಳಿದಂತೆ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿ ಅಝ್ಹರ್ ಪಾಷ, ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮತೀನುದ್ದೀನ್, ಜಿಲ್ಲಾ ಕಾರ್ಯದರ್ಶಿಯಾಗಿ ಮಾಗಡಿ ನೂರುದ್ದೀನ್ , ಸೈಯದ್ ಅಸಾದುಲ್ಲಾ, ಜಿಲ್ಲಾ ಖಜಾಂಚಿಯಾಗಿ ವಸೀಮ್ ಪಾಷ, ಜಿಲ್ಲಾ ಸಮಿತಿ ಸದಸ್ಯರಾಗಿ ಫೈರೋಜ್ ಅಲಿ ಖಾನ್, ಮೊಹಮ್ಮದ್ ವಾಸಿಮ್, ಸೈಯದ್ ಸಲೀಂ, ಸೈಯದ್ ಶಾಬಾಝ್ ಅಲಿ ಅವರನ್ನು ಆಯ್ಕೆ ಮಾಡಲಾಯಿತು.

ಗಣರಾಜ್ಯೋತ್ಸವ ಆಚರಣೆ:

ಜಿಲ್ಲಾ ಪ್ರತಿನಿಧಿಗಳ ಸಭೆಗೂ ಮುಂಚೆ ಸಭಾಂಗಣದ ಹೊರ ಆವರಣದಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭ ನಡೆಯಿತು. ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಮತೀನ್ , ಇದು ಸಂವಿಧಾನದ ಅಳಿವು ಉಳಿವಿನ ಕಾಲಘಟ್ಟವಾಗಿದ್ದು. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ದೇಶದ ಪ್ರಜೆಗಳು ನಿರ್ಣಾಯಕ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.

ಪ್ರಸ್ತುತ ರಾಜಕೀಯ ಪಕ್ಷಗಳ ಸಂವಿಧಾನ ಕುರಿತು ಅಸಡ್ಡೆಯ ಬಗ್ಗೆ ದೇಶದ ಜನತೆ ನಿರ್ಲಕ್ಷ್ಯ ವಹಿಸಿದರೆ ಭಾರತ ಬಂಡವಾಳ ಶಾಹಿಗಳ ಹಾಗೂ ಫ್ಯಾಸಿಸ್ಟ್ ಶಕ್ತಿಗಳ ಆಡಂಬೋಲವಾಗುವುದು ಖಚಿತ. ಹೀಗಾಗಿ ಸರ್ವಾಧಿಕಾರಿ ಫ್ಯಾಸಿಸಮ್ ಅಳಿಯಲಿ, ಸಂವಿಧಾನ ಉಳಿಯಲಿ ಎಂಬ ನಿಟ್ಟಿನಲ್ಲಿ ಪಕ್ಷ ಜನ ಚಳುವಳಿ ಮುನ್ನಡೆಸಲು ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು ಪಕ್ಷದ ಹೊಸ ನಾಯಕತ್ವದೊಂದಿಗೆ ಮತ್ತಷ್ಟು ಸ್ಥೈರ್ಯದಿಂದ ಧೈರ್ಯವಾಗಿ ದೃಢವಾಗಿ ನಿಲ್ಲಬೇಕೆಂದು ಕರೆ ನೀಡಿದರು.

ರಾಜ್ಯ ಖಜಾಂಚಿ ಅಮ್ಜದ್ ಖಾನ್ ಮಾತನಾಡಿ, ಭಾರತ ಗಣರಾಜ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡು 75 ವರ್ಷ ಕಳೆದರೂ ಸಂವಿಧಾನದ ನೈಜ ಆಶಯಗಳು ಜಾರಿಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಚುನಾವಣಾ ಅಧಿಕಾರಿ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಅಬ್ರಾರ್ ರವರು ನೂತನ ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಪದಾಧಿಕಾರಿಗಳ ಚುನಾವಣೆ ನಡೆಸಿ ಆರಿಸಿ ಬಂದ ಎಲ್ಲಾ ನಾಯಕರಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು.