ಡಿ. 5ರಂದೇ ಜಾಲಿವುಡ್ ಸ್ಟುಡಿಯೋ ಪುನರಾರಂಭಕ್ಕೆ ಅನುಮತಿ ದೊರಕಿದ್ದು, ಇಂದಿನಿಂದ ಸ್ಟುಡಿಯೋ ಕಾರ್ಯಾಚರಣೆ ಆರಂಭಿಸಿದೆ. ಕಳೆದ ಅ. 7ರಂದು ಜಾಲಿವುಡ್ ವಾಟರ್ ಅಡ್ವೆಂಚರ್ ಅಂಡ್ ಸ್ಟುಡಿಯೋಗೆ ಜಿಲ್ಲಾಡಳಿತ ಬೀಗ ಜಡಿದಿತ್ತು.
ರಾಮನಗರ: ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಹಿನ್ನೆಲೆ ಬಂದ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋ ರೀಓಪನ್ ಆಗಿದೆ. ಸದ್ದಿಲ್ಲದೇ ಜಾಲಿವುಡ್ ಸ್ಟುಡಿಯೋ ಓಪನ್‌ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ.
ಡಿ. 5ರಂದೇ ಜಾಲಿವುಡ್ ಸ್ಟುಡಿಯೋ ಪುನರಾರಂಭಕ್ಕೆ ಅನುಮತಿ ದೊರಕಿದ್ದು, ಇಂದಿನಿಂದ ಸ್ಟುಡಿಯೋ ಕಾರ್ಯಾಚರಣೆ ಆರಂಭಿಸಿದೆ. ಕಳೆದ ಅ. 7ರಂದು ಜಾಲಿವುಡ್ ವಾಟರ್ ಅಡ್ವೆಂಚರ್ ಅಂಡ್ ಸ್ಟುಡಿಯೋಗೆ ಜಿಲ್ಲಾಡಳಿತ ಬೀಗ ಜಡಿದಿತ್ತು.ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನ ಗಾಳಿಗೆ ತೂರಿ ಜಲಕ್ರೀಡೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನ ನಡೆಸುತ್ತಿದ್ದ ಸ್ಟುಡಿಯೋಗೆ ಹಲವು ಬಾರಿ ನೋಟೀಸ್ ನೀಡಿದ್ರೂ ಉತ್ತರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸ್ಟುಡಿಯೋ ಸೀಲ್ ಡೌನ್ ಮಾಡಿತ್ತು. ಎರಡು ದಿನಗಳ ಬಳಿಕ ಸ್ಟುಡಿಯೋ ಒಳಗೆ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಶೂಟಿಂಗ್ ಮಾತ್ರ ಅನುಮತಿ ನೀಡಲಾಗಿತ್ತು. ಇದೀಗ ಮತ್ತೆ ಜಾಲಿವುಡ್ ಸ್ಟುಡಿಯೋ ಸಂಪೂರ್ಣ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯೇ ಅನುಮತಿ ನೀಡಿದೆ.
ತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಕೋರಿದ್ದ ಜಾಲಿವುಡ್ ಸಂಸ್ಥೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪರಿಶೀಲನೆ ನಡೆಸಿ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ.10ಕೆಆರ್ ಎಂಎನ್ 3.ಜೆಪಿಜಿಜಾಲಿವುಡ್ ಸ್ಟುಡಿಯೋ