ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜು ಹಾಗೂ ಬಪ್ಪಳಿಗೆ ವಸತಿಯುತ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳು ೨೦೨೫-೨೬ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. ೧೦೦ ಮತ್ತು ನೆಲ್ಲಿಕಟ್ಟೆಯ ವಾಣಿಜ್ಯ ವಿಭಾಗ ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜು ಹಾಗೂ ಬಪ್ಪಳಿಗೆ ವಸತಿಯುತ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳು ೨೦೨೫-೨೬ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ. ೧೦೦ ಮತ್ತು ನೆಲ್ಲಿಕಟ್ಟೆಯ ವಾಣಿಜ್ಯ ವಿಭಾಗ ಶೇ. ೧೦೦ ಫಲಿತಾಂಶ ದಾಖಲಿಸಿದೆ.
ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಇಂದಿರಾ ನಗರ ಬೆಳ್ಳಾರೆ ನಿವಾಸಿ ರವೀಂದ್ರನಾಥ್ ಹಾಗೂ ಸುಗುಣ ಎ. ಅವರ ಪುತ್ರಿ ಶಾರ್ವರೀ ಆರ್.ಎಸ್. ೬೦೦ರಲ್ಲಿ ೫೯೭ ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. ನಂದಿಲ ಹೌಸ್ ಹಾರಾಡಿ ನಿವಾಸಿ ದಾಮೋದರ ಎನ್. ಹಾಗೂ ನವೀನಾ ಕುಮಾರಿ ಕೆ.ಎಸ್. ಅವರ ಪುತ್ರ ತ್ರಿಶೂಲ್ ಎನ್.ಡಿ. ೫೯೪ ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ.ಬಪ್ಪಳಿಗೆ, ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯ ೨೦೨೫-೨೬ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.೧೦೦ ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದಲ್ಲಿ ಕಡಬ ತಾಲೂಕಿನ ಅಲಂಕಾರು ನಿವಾಸಿ ರಾಜಶೇಖರ್ ಹಾಗೂ ಕೆ. ಗೀತಾ ಅವರ ಪುತ್ರ ಗಗನ್ ಕೆ.ಆರ್. ೬೦೦ರಲ್ಲಿ ೫೯೪ ಅಂಕವನ್ನು ಪಡೆಯುವ ಮೂಲಕ ರಾಜ್ಯಕ್ಕೆ ಐದನೇ ಸ್ಥಾನ ಗಳಿಸಿದ್ದಾರೆ.ನೆಲ್ಲಿಕಟ್ಟೆ ಪಿಯು ಕಾಲೇಜು: ನೆಲ್ಲಿಕಟ್ಟೆ ಪದವಿಪೂರ್ವ ಕಾಲೇಜಿನಿಂದ ೨೦೨೫-೨೬ರ ಪರೀಕ್ಷೆಗೆ ಹಾಜರಾದ ಒಟ್ಟು ೨೩೧ ವಿದ್ಯಾರ್ಥಿಗಳಲ್ಲಿ ೧೭೩ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ೫೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಕಾಲೇಜು ಶೇ. 100 ಫಲಿತಾಂಶ ದಾಖಲಿಸಿದೆ.ವಾಣಿಜ್ಯ ವಿಭಾಗದಲ್ಲಿ ಶೆಣೈ ಕಂಪೌಂಡ್ ಮುಖ್ಯ ರಸ್ತೆ ಪುತ್ತೂರು ನಿವಾಸಿ ಎಂ. ನರಸಿಂಹ ಶೆಣೈ ಹಾಗೂ ಶ್ರೀಲಕ್ಷ್ಮೀ ಎನ್. ಶೆಣೈ ಅವರ ಪುತ್ರಿ ಪ್ರತೀಕ್ಷಾ ಶೆಣೈ ೬೦೦ರಲ್ಲಿ ೫೯೪ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದು ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ.ಪರೀಕ್ಷೆಗೆ ಹಾಜರಾದ ಒಟ್ಟು ೩೭ ವಿದ್ಯಾರ್ಥಿಗಳಲ್ಲಿ ೩೧ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ೬ ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ. ೧೦೦ ಫಲಿತಾಂಶವನ್ನು ದಾಖಲಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಬಪ್ಪಳಿಗೆ ವಸತಿಯುತ ಪಿಯು ಕಾಲೇಜು: ಬಪ್ಪಳಿಗೆ ಅಂಬಿಕಾ ವಸತಿಯುತ ಪಿಯು ಕಾಲೇಜಿಂದ ೨೦೨೫-೨೬ರ ಪರೀಕ್ಷೆಗೆ ಹಾಜರಾದ ಒಟ್ಟು ೨೧೬ ವಿದ್ಯಾರ್ಥಿಗಳಲ್ಲಿ ೧೫೯ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ೫೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶೇ. ೧೦೦ ಫಲಿತಾಂಶ ದಾಖಲಿಸಿದೆ. ಬೆಂಗಳೂರಿನ ಅನಂತ ಪದ್ಮನಾಭ ಶರ್ಮ ಹಾಗು ರೇಷ್ಮ ಅನಂತ ಶರ್ಮ ಅವರ ಪುತ್ರ ಅಖಿಲೇಶ್ ಅನಂತ ಶರ್ಮ ೫೯೧ ಮತ್ತು ಪುತ್ತೂರಿನ ಕುಂಬ್ರ ನಿವಾಸಿ ನಾರಾಯಣ ಪೂಜಾರಿ ಮತ್ತು ದಿವ್ಯ ಎನ್. ಅವರ ಪುತ್ರಿ ಸನ್ನಿಧಿ ೫೯೧ ಅಂಕ ಪಡೆದಿದ್ದಾರೆ.