ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪ್ರಾರಂಭ

| Published : May 01 2024, 01:15 AM IST

ಸಾರಾಂಶ

ಪಿಯುಸಿ ಪೂರಕ ಪರೀಕ್ಷೆಯು ಮೊದಲ ದಿನ ಜಿಲ್ಲೆಯಲ್ಲಿ ಸುಸೂತ್ರವಾಗಿ ಜರುಗಿದೆ. ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಯಾವೊಬ್ಬ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ.ಇನ್ನು ಪರೀಕ್ಷೆಯನ್ನು ಸುಸೂತ್ರವಾಗಿ ಜರುಗಿಸುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು.

ಕನ್ನಡಪ್ರಭ ವಾರ್ತೆ ರಾಮನಗರ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಸೋಮವಾರಿಂದ ಜಿಲ್ಲೆಯಲ್ಲಿ ಆರಂಭವಾಗಿದ್ದು, ಮೇ.16ರವರೆಗೆ ನಡೆಯಲಿದೆ. ಮೊದಲ ದಿನವಾದ ಕನ್ನಡ ಭಾಷೆಗೆ ಪರೀಕ್ಷೆ ಜರುಗಿದೆ. ಮೊದಲ ಬಾರಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿಸಿ ಟಿವಿ ಕಣ್ಗಾವಲಿನಲ್ಲಿ ಪರೀಕ್ಷೆ ಬರೆದಿದ್ದಾರೆ.

ದ್ವಿತೀಯ ವಾರ್ಷಿಕ ಪರೀಕ್ಷೆ ಬದಲಿಗೆ, ಪೂರಕ ಪರೀಕ್ಷೆಯಲ್ಲಿ ವೆಬ್ ಕ್ಯಾಸ್ಟಿಂಗ್ ಪದ್ಧತಿ ಅಳಡಿಸಲಾಗಿದೆ. ಪೂರಕ ಪರೀಕ್ಷೆ ನಡೆದ ಅಷ್ಟು ಕೇಂದ್ರದ ಎಲ್ಲಾ ಕೊಠಡಿಯಲ್ಲಿಯು ಸಿಸಿ ಟಿವಿ ಅಳವಡಿಸಲಾಗಿತ್ತು. ಈ ಎಲ್ಲಾ ಕೇಂದ್ರದ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ನೀಡಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿನ ಪ್ರತಿ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

ಪಿಯುಸಿ ಪೂರಕ ಪರೀಕ್ಷೆಯು ಮೊದಲ ದಿನ ಜಿಲ್ಲೆಯಲ್ಲಿ ಸುಸೂತ್ರವಾಗಿ ಜರುಗಿದೆ. ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಯಾವೊಬ್ಬ ವಿದ್ಯಾರ್ಥಿಯು ಡಿಬಾರ್ ಆಗಿಲ್ಲ.ಇನ್ನು ಪರೀಕ್ಷೆಯನ್ನು ಸುಸೂತ್ರವಾಗಿ ಜರುಗಿಸುವ ಸಂಬಂಧ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದರು.

ಪರೀಕ್ಷಾ ದೃಷ್ಟಿಯಿಂದಾಗಿ ವಿವಿಧ ಇಲಾಖೆಗಳನ್ನು ಬಳಸಿಕೊಳ್ಳಲಾಗಿತ್ತು. ಪೊಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆ ಕ್ಷೇತ್ರದಲ್ಲಿ ನಿಯೋಜಿಸಲಾಗಿತ್ತು.

-----------------------------

ಬಾಕ್ಸ್ ....

ಪರೀಕ್ಷಾ ಕೇಂದ್ರ ನೊಂದಣಿ ಗೈರು ಹಾಜರಿ

ರಾಮನಗರ 77 18 59

ಚನ್ನಪಟ್ಟಣ 101 18 83

ಮಾಗಡಿ 25 07 18

ಕನಕಪುರ 154 25 129

-------------------------

ಒಟ್ಟು 357 68 289

-------------------------

‘ಏ.29ರಿಂದ ಮೇ.16ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ 2 ನಡೆಯಲಿದೆ. ಈ ಸಂಬಂಧ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆಸಿ ಪೋಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ. ಜಿಲ್ಲಾಪಂಚಾಯಿತಿಯಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ವೆಬ್ ಕ್ಯಾಸ್ಟಿಂಗ್ ವೀಕ್ಷಣೆ ಸಹ ನಡೆಯಲಿದೆ.ಮೊದಲ ದಿನ ಪರೀಕ್ಷೆಯು ಸುಸೂತ್ರವಾಗಿ ಜರುಗಿದೆ.’

ನಾಗಮ್ಮ, ಉಪನಿರ್ದೇಶಕಿ , ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಮನಗರ.