ಬೇಂಗ್ರೆಯಲ್ಲಿ ಭಟ್ಕಳ ಹವ್ಯಕ ವಲಯದ ದ್ವಿತೀಯ ವಲಯೋತ್ಸವ

| Published : Jan 26 2025, 01:31 AM IST

ಸಾರಾಂಶ

ಪ್ರತಿಯೊಬ್ಬರೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ದೇವರ ನಾಮಗಳು, ಸ್ತೋತ್ರಗಳನ್ನು ಪಠಿಸುವಂತಾಗಬೇಕು.

ಭಟ್ಕಳ: ರಾಮಚಂದ್ರಾಪುರದ ಮಠದ ಹೊನ್ನಾವರ ಮಂಡಲಾಂತರ್ಗತ ಭಟ್ಕಳ ಹವ್ಯಕ ವಲಯದ ದ್ವಿತೀಯ ವಲಯೋತ್ಸವ ಕಾರ್ಯಕ್ರಮ ಬೇಂಗ್ರೆಯ ನಾಗರಾಜ ಎಂ. ಭಟ್ಟ ಅವರ ಮನೆಯಲ್ಲಿ ನಡೆಯಿತು. ಮಹಿಳೆಯರಿಂದ ಕುಂಕುಮಾರ್ಚನೆ ನಂತರ ರುದ್ರಪಠಣ ನೆರವೇರಿತು. ನಂತರ ಆರಂಭವಾದ ಧಾರ್ಮಿಕ ಸಭಾ ಕಾರ್ಯಕ್ರಮವು ಗುರುವಂದನೆ, ಶಂಖನಾದದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಪೆರ್ನೆಯ ಸೈಬರ್ ಸೆಕ್ಯುರಿಟಿ ಕನ್ಸಲ್ಟೆಂಟ್ ಆಗಿರುವ ಪೃಥ್ವೀಶ ಕೆ. ಅವರು ಸೈಬರ್ ಸೆಕ್ಯುರಿಟಿಯ ಕುರಿತು ಉಪನ್ಯಾಸ ನೀಡಿ, ನಾವು ಮೊಬೈಲ್ ಯುಗದಲ್ಲಿದ್ದೇವೆ. ಇಂತಹ ಸಂದರ್ಭದಲ್ಲಿ ಯಾವ್ಯಾವ ಜಾಗೃತಿಯನ್ನು ವಹಿಸಬೇಕು ಎನ್ನುವ ಕುರಿತು ಸವಿಸ್ತಾರವಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಭಟ್ಕಳ ವಲಯದ ಅಧ್ಯಕ್ಷೆ ರೇಷ್ಮಾ ಯೋಗೀಶ ಭಟ್ಟ ಮಾತನಾಡಿ, ನಿತ್ಯದ ಜೀವನದಲ್ಲಿ ಸೈಬರ್ ಸೆಕ್ಯುರಿಟಿಯನ್ನು ಅಳವಡಿಸಿಕೊಳ್ಳವುದು ಕಷ್ಟಸಾಧ್ಯವಾದರೂ ಕೂಡಾ ಅದು ಇಂದಿನ ಅಗತ್ಯವಾಗಿದೆ. ಇಂದಿನ ದಿನಗಳಲ್ಲಿ ಸ್ಮಾರ್ಟ ಫೋನ್ ಬಳಸುವುದು, ಇಂಟರ್‌ನೆಟ್ ಬಳಸುವುದು ಅನಿವಾರ್ಯವಾದರೂ ನಾವು ಹೇಗೆ ಅದನ್ನು ಬಳಸುತ್ತಿದ್ದೇವೆ, ನಮ್ಮ ಮಕ್ಕಳು ಹೇಗೆ ಬಳಸುತ್ತಿದ್ದಾರೆ ಎನ್ನುವುದನ್ನು ಪದೇ ಪದೇ ಓರೆಗೆ ಹಚ್ಚಬೇಕಾಗಿರುವ ಪ್ರಸಂಗ ಇಂದಿನ ದಿನಗಳಲ್ಲಿ ಇದೆ. ಪ್ರತಿಯೊಬ್ಬರೂ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ದೇವರ ನಾಮಗಳು, ಸ್ತೋತ್ರಗಳನ್ನು ಪಠಿಸುವಂತಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಪೃಥ್ವೀಶ ಅವರನ್ನು ಭಟ್ಕಳ ವಲಯದ ವತಿಯಿಂದ ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ ಅವರು ಗೌರವಿಸಿ ಸನ್ಮಾನಿಸಿದರು. ನಾಗರಾಜ ಭಟ್ಟ ಹಾಗೂ ಛಾಯಾ ದಂಪತಿಗಳು ಆತಿಥ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಡಳದ ಉಸ್ತುವಾರಿ ಶಂಭು ಹೆಗಡೆ, ನಾಗರಾಜ ಭಟ್ಟ ಬೇಂಗ್ರೆ ಉಪಸ್ಥಿತರಿದ್ದರು. ವಲಯದ ಪ್ರಧಾನ ಕಾರ್ಯದರ್ಶಿ ಎಂ.ವಿ. ಹೆಗಡೆ ನಿರ್ವಹಿಸಿ ಶ್ರೀ ಮಠದ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.

ಮುಂದಿನ ವಲಯೋತ್ಸವ ಫೆ. ೨ರಂದು ದುರ್ಗಾಪರಮೇಶ್ವರಿ ದೇವಸ್ಥಾನ ಕಡವಿನಕಟ್ಟೆಯಲ್ಲಿ ಪ್ರಕಾಶ ಭಟ್ಟ, ಶಿವಾನಂದ ಭಟ್ಟ ಎಂ.ಎಚ್. ಗುರುಮೂರ್ತಿ ಅವರ ಆತಿಥ್ಯದಲ್ಲಿ ನಡೆಯಲಿದೆ ಎಂದು ಘೋಷಿಸಲಾಯಿತು. ಅಪ್ರಾಪ್ತರಿಗೆ ವಾಹನ ನೀಡದಿರಿ: ಮಂಜುನಾಥ ಕಂಬಾರ

ದಾಂಡೇಲಿ: ಇಲ್ಲಿನ ಎಆರ್‌ಟಿಒ ಕಚೇರಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆಗೆ ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯ ಸಾರಿಗೆ ವಿಭಾಗದ ಆವರಣದಲ್ಲಿ ನಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದಾಂಡೇಲಿ ಎಆರ್‌ಟಿಒ ಮೋಟರ ವಾಹನ ನಿರೀಕ್ಷಕ ಮಂಜುನಾಥ ಕಂಬಾರ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಸ್ತೆ ಸುರಕ್ಷತೆಗಾಗಿ ಅನೇಕ ಕಾನೂನುಗಳನ್ನು ಜಾರಿ ತಂದಿದ್ದರೂ ಪಾಲನೆಯಾಗುತ್ತಿಲ್ಲ. ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ಸಿಗ್ನಲ್‌ಗಳನ್ನು ನಿರ್ಲಕ್ಷಿಸಬಾರದು. ಎಡಭಾಗದಿಂದ ಒವರ್‌ಟೇಕ್‌ ಮಾಡಬಾರದು. ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡಬೇಡಿ. ದ್ವಿಚಕ್ರ ವಾಹನದಲ್ಲಿ ಇಬ್ಬರು ಮಾತ್ರ ಪ್ರಯಾಣಿಸಬೇಕು ಎಂದರು.ಈ ಸಂದರ್ಭದಲ್ಲಿ ವೆಸ್ಟ್‌ ಕೋಸ್ಟ್‌ ಕಾಗದ ಕಾರ್ಖಾನೆಯ ಸಾರಿಗೆ ವಿಭಾಗದ ಅಧಿಕಾರಿ ನಂಜುಂಡಪ್ಪ ಕೆ.ಬಿ., ಕಾರ್ಖಾನೆಯ ಉದ್ಯೋಗಿ ಬಸವರಾಜ ಕಲಶೆಟ್ಟಿ, ಸುರಕ್ಷತಾ ವಿಭಾಗದ ಮುಖ್ಯಸ್ತ ನಾರಾಯಣ, ಭದ್ರತಾ ವಿಭಾಗದ ಕುಶಾಲಪ್ಪ, ಅಗ್ನಿಶಾಮಕ ದಳ ಅಧಿಕಾರಿ ಪಾಟೀಲ, ರಾಮದಾಸ ಕಾಮತ ಮುಂತಾದವರು ಮಾತನಾಡಿದರು.