ಜಾತ್ಯತೀತ ಜನತಾದಳ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

| Published : Sep 01 2024, 01:58 AM IST

ಸಾರಾಂಶ

ಹಾವೇರಿ ಜಿಲ್ಲಾ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಹಾನಗಲ್ಲನಿಂದಲೇ ಚಾಲನೆ ನೀಡಲಾಗುತ್ತಿದ್ದು, ಹಾನಗಲ್ಲ ಕ್ಷೇತ್ರಕ್ಕೆ ಸ್ಥಳೀಯರನ್ನೇ ಶಾಸಕರನ್ನಾಗಿ ಆಯ್ಕೆ ಮಾಡುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ತಿಳಿಸಿದರು.

ಹಾನಗಲ್ಲ: ಹಾವೇರಿ ಜಿಲ್ಲಾ ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಹಾನಗಲ್ಲನಿಂದಲೇ ಚಾಲನೆ ನೀಡಲಾಗುತ್ತಿದ್ದು, ಹಾನಗಲ್ಲ ಕ್ಷೇತ್ರಕ್ಕೆ ಸ್ಥಳೀಯರನ್ನೇ ಶಾಸಕರನ್ನಾಗಿ ಆಯ್ಕೆ ಮಾಡುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ತಿಳಿಸಿದರು.ಶನಿವಾರ ಹಾನಗಲ್ಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ಅತಿ ದೊಡ್ಡ ಸಂಖ್ಯೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇಡೀ ಜಿಲ್ಲೆಯಲ್ಲಿ ಬೂತ್‌ ಮಟ್ಟದ ಸದಸ್ಯತ್ವ ಅಭಿಯಾನವನ್ನು ನಡೆಸಲಾಗುತ್ತದೆ. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯರೆ ವಿಧಾನಸಭೆ ಸದಸ್ಯರಾಗಬೇಕು ಎಂಬುದು ನಮ್ಮ ಹಕ್ಕೊತ್ತಾಯ. ಅದಕ್ಕಾಗಿ ಶಿಗ್ಗಾಂವಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೂ ನಮ್ಮ ಪಕ್ಷದ ಸ್ಥಳೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನ ನಡೆದಿದೆ. ಹಾನಗಲ್ಲ ತಾಲೂಕಿನಲ್ಲೂ ಮುಂದಿನ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಿ ಆಯ್ಕೆ ಮಾಡುವಂತೆ ಜಾಗೃತಿ ಮೂಡಿಸಲಾಗುವುದು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರಿಗೆ ಹಾವೇರಿ ಜಿಲ್ಲೆಯಲ್ಲಿ ಕಾರ್ಖಾನೆ ಆರಂಭಿಸಿ ಇಲ್ಲಿನ ಯುವಕರಿಗೆ ಉದ್ಯೋಗ ನೀಡಲು ಒತ್ತಾಯಿಸಲಾಗಿದೆ. ಅವರಿಂದ ಸಕಾರಾತ್ಮಕ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್. ಸಿದ್ದಬಸಪ್ಪಯಾದವ ಮಾತನಾಡಿ, ನಮ್ಮದು ಎನ್‌ಡಿಎಯೊಂದಿಗೆ ಮೈತ್ರಿ ಇರುವ ಪಕ್ಷವಾಗಿದೆ. ಪಕ್ಷ ಸಂಘಟನೆ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಮೊದಲ ಹಂತದಲ್ಲಿ ಪ್ರತಿ ತಾಲೂಕಿನಿಂದ ಸಾವಿರ ಸದಸ್ಯತ್ವ ನಮ್ಮ ಗುರಿಯಾಗಿದ್ದು ಎರಡನೇ ಹಂತದಲ್ಲಿ ಬೂತ ಮಟ್ಟದ ಮೂಲಕ ದೊಡ್ಡ ಸಂಖ್ಯೆಯಲ್ಲಿ ಸದಸ್ಯತ್ವಕ್ಕೆ ಮುಂದಾಗುತ್ತೇವೆ. ಶಿಗ್ಗಾಂವಿ ಟಿಕೆಟ್ ವಿಷಯದಲ್ಲಿ ಪಕ್ಷದ ಹೈಕಮಾಂಡ್‌ ಜೊತೆಗೆ ಮಾತನಾಡಲಾಗಿದ್ದು ಜೆಡಿಎಸ್ ಕಾರ್ಯಕರ್ತರಿಗೆ ಎನ್‌ಡಿಎ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿದೆ ಎಂದರು.ಹಾನಗಲ್ಲ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ, ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಜಿಲ್ಲಾ ತಾಲೂಕು ಪದಾಧಿಕಾರಿಗಳಾದ ರಾಜ್ ಪಠಾಣ, ಕತ್ತಲಸಾಬ ಬಣಕಾರ, ಜ್ಯೋತಿ ಚಿಗಳ್ಳಿ, ಪವಿತ್ರಾ, ಅಮಿರಖಾನ ಬೇಪಾರಿ, ಮೂಕಪ್ಪ ಪಡೆಪ್ಪನವರ, ಯಮುನಪ್ಪ ಲಮಾಣಿ, ಚಂದ್ರಪ್ಪ ಕ್ಯಾಸನೂರ, ಈರಣ್ಣ ನವಲಗುಂದ, ಸಲೀಮ ಸಮನವಳ್ಳಿ, ನಂದೀಶ ಕ್ಷೌರದು, ಗೌಸಮೊದಿನ್ ಆಲದಕಟ್ಟಿ, ಮುತ್ತಪ್ಪ ಪವಾಡಿ, ಸೋಮಣ್ಣ ನೀರಲಗಿ, ಎಸ್.ಎಸ್.ಹಿರೇಮಠ, ಮಂಜಪ್ಪ ಪಡೆಪ್ಪನವರ ಮೊದಲಾದವರು ಇದ್ದರು.