ಕಿಕ್ಕೇರಿ ಪೊಲೀಸ್‌ ಠಾಣೆಯಲ್ಲಿ ಪೇದೆಗಳಿಗೆ ಸೀಮಂತ ಶಾಸ್ತ್ರ

| Published : Aug 06 2024, 12:41 AM IST

ಸಾರಾಂಶ

ತವರು ಮನೆ ಪ್ರೀತಿಯಂತೆ ಶಾಸ್ತ್ರೋಕ್ತವಾಗಿ ಸಿಬ್ಬಂದಿಗೆ ಸೀಮಂತ ಶಾಸ್ತ್ರ ಮಾಡಲಾಗುತ್ತಿದೆ. ನಮ್ಮ ಸಿಬ್ಬಂದಿಗೆ ಮನೆ ವಾತಾವರಣ ಕಲ್ಪಿಸಿ ಎಲ್ಲರೂ ಪ್ರೀತಿಯಿಂದ ಮಡಿಲು ತುಂಬುವ ಶಾಸ್ತ್ರ ಮಾಡಿದ್ದಾರೆ. ನಮ್ಮ ಸಿಬ್ಬಂದಿಯಂತೆ ಉತ್ತಮ ಸಾಮಾಜಿಕ ಸೇವೆ ಸಲ್ಲಿಸುವ ಆರೋಗ್ಯಕರ ಮಕ್ಕಳು ಹುಟ್ಟಲಿ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಆರಕ್ಷಕ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಸಜಿನಿ, ಶಿಲ್ಪಶ್ರಿ ಅವರಿಗೆ ಸೀಮಂತ ಶಾಸ್ತ್ರ ಮಾಡಲಾಯಿತು.

ಇನ್‌ಸ್ಪೆಕ್ಟರ್‌ ರೇವತಿ ಮಾತನಾಡಿ, ತವರು ಮನೆ ಪ್ರೀತಿಯಂತೆ ಶಾಸ್ತ್ರೋಕ್ತವಾಗಿ ಸಿಬ್ಬಂದಿಗೆ ಸೀಮಂತ ಶಾಸ್ತ್ರ ಮಾಡಲಾಗುತ್ತಿದೆ. ನಮ್ಮ ಸಿಬ್ಬಂದಿಗೆ ಮನೆ ವಾತಾವರಣ ಕಲ್ಪಿಸಿ ಎಲ್ಲರೂ ಪ್ರೀತಿಯಿಂದ ಮಡಿಲು ತುಂಬುವ ಶಾಸ್ತ್ರ ಮಾಡಿದ್ದಾರೆ. ನಮ್ಮ ಸಿಬ್ಬಂದಿಯಂತೆ ಉತ್ತಮ ಸಾಮಾಜಿಕ ಸೇವೆ ಸಲ್ಲಿಸುವ ಆರೋಗ್ಯಕರ ಮಕ್ಕಳು ಹುಟ್ಟಲಿ ಎಂದು ಆಶಿಸುತ್ತೇವೆ ಎಂದರು.

ತಾಯಿ ಮಗುವಿನ ಆರೈಕೆ ಮುಖ್ಯವಾಗಿದೆ. ಮಹಿಳಾ ಸಿಬ್ಬಂದಿ ಸರ್ಕಾರಿ ಸೇವೆಯಷ್ಟೆ ವೈಯಕ್ತಿಕ ಕೌಟುಂಬಿಕ ನಿರ್ವಹಣೆ ಕೂಡ ಮುಖ್ಯವಾಗಿದೆ. ಇವರ ಸೇವೆ ಮತ್ತಷ್ಟು ಉತ್ತಮಕರವಾಗಿ ಸಮಾಜಕ್ಕೆ ಸಿಗಲಿ ಎಂದು ಆಶಿಸಿದರು.

ಹೊಸ ಸೀರೆ, ರವಿಕೆ, ಕೊಬ್ಬರಿ, ಹೂವು, ಫಲತಾಂಬೂಲ, ಅರಿಷಿಣ, ಕುಂಕುಮ, ಬಳೆ ಮತ್ತಿತರ ಅಷ್ಟದ್ರವ್ಯ, ಮಡಿಲಕ್ಕಿಯೊಂದಿಗೆ ಮಡಿಲು ತುಂಬುವ ಶಾಸ್ತ್ರವನ್ನುಇಲಾಖೆಯಿಂದ ಮಾಡಲಾಯಿತು.

ಈ ವೇಳೆ ಎಎಸ್‌ಐ ರಮೇಶ್, ಶಿವಲಿಂಗಯ್ಯ, ದೇವರಾಜೇಗೌಡ, ಸಿಬ್ಬಂದಿ ಪ್ರಸನ್ನ, ಕುಮಾರ್, ವಿನೋದ್, ಲಕ್ಷ್ಮಣ್, ಜಾಫರ್ ಮತ್ತಿತರರಿದ್ದರು.