ಸೀತಂಪಲ್ಲಿ-ಮಲ್ಲಂಪಲ್ಲಿ ಸೇತುವೆ ಲೋಕಾರ್ಪಣೆಗೆ ಸಿದ್ಧ

| Published : Oct 03 2025, 01:07 AM IST

ಸೀತಂಪಲ್ಲಿ-ಮಲ್ಲಂಪಲ್ಲಿ ಸೇತುವೆ ಲೋಕಾರ್ಪಣೆಗೆ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಸೇತುವೆಯ ಮೇಲೆ ಪಾಲಾರ್ ನದಿಯ ನೀರು ಹರಿಯುತ್ತಿದ್ದು, ಸ್ಥಳೀಯ ರೈತರು ವಿದ್ಯಾರ್ಥಿಗಳು ವೃದ್ಧರು ವಾಹನ ಸವಾರರು ಓಡಾಡಲು ಸಮಸ್ಯೆಯಾಗಿತ್ತು, ರೈತರಂತೂ ತಮ್ಮ ಬೆಳೆಗಳನ್ನು ಆಂಧ್ರದ ವಿ.ಕೋಟೆ, ಕೋಲಾರ ಇತರೆ ಮಾರುಕಟ್ಟೆಗಳಿಗೆ ಸರಕು ಸಾಗಟಕ್ಕೂ ತೀವ್ರ ಸಮಸ್ಯೆ ಆಗಿತ್ತು. ಇದರಿಂದ ೫ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಸೇತುವೆ ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೇತಮಂಗಲಅನೇಕ ದಶಕದಿಂದ ಸೂಕ್ತ ಸೇತುವೆ ಇಲ್ಲದೆ ಪರಿತಪಿಸುತ್ತಿದ್ದ ಈ ಭಾಗದ ರೈತರು, ವಿದ್ಯಾರ್ಥಿಗಳು, ವಾಹನ ಸವಾರರಿಗೆ ಸುಸಜ್ಜಿತ ಸೇತುವೆ ನಿರ್ಮಾಣ ಮಾಡುವ ಕನಸು ಇದೀಗ ನನಸಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.ವೇಗಸಂದ್ರ ಗ್ರಾಪಂ ವ್ಯಾಪ್ತಿಯ ಸೀತಂಪಲ್ಲಿ-ಮಲ್ಲಂಪಲ್ಲಿ ಮಾರ್ಗ ಮಧ್ಯದಲ್ಲಿ ಸುಮಾರು ೫ ಕೋಟಿ ರು.ಗಳ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಿಸಿದ್ದು ಬಹುತೇಕ ಪೂರ್ಣಗೊಂಡಿದ್ದು, ಅತಿ ಶೀಘ್ರದಲ್ಲೇ ಸಚಿವದಿಂದ ಲೋಕಾರ್ಪಣೆಗೊಳಿಸುವುದಾಗಿ ಹೇಳಿದರು.ಸೇತುವೆಗೆ ₹5 ಕೋಟಿ ವೆಚ್ಚ

ಸೇತುವೆಯ ಮೇಲೆ ಪಾಲಾರ್ ನದಿಯ ನೀರು ಹರಿಯುತ್ತಿದ್ದು, ಸ್ಥಳೀಯ ರೈತರು ವಿದ್ಯಾರ್ಥಿಗಳು ವೃದ್ಧರು ವಾಹನ ಸವಾರರು ಓಡಾಡಲು ಸಮಸ್ಯೆಯಾಗಿತ್ತು, ರೈತರಂತೂ ತಮ್ಮ ಬೆಳೆಗಳನ್ನು ಆಂಧ್ರದ ವಿ.ಕೋಟೆ, ಕೋಲಾರ ಇತರೆ ಮಾರುಕಟ್ಟೆಗಳಿಗೆ ಸರಕು ಸಾಗಟಕ್ಕೂ ತೀವ್ರ ಸಮಸ್ಯೆ ಆಗಿತ್ತು. ಇದರಿಂದ ರೈತರಿಗೂ ಯಾವುದೇ ಸಮಸ್ಯೆ ಆಗದಂತೆ ಸರ್ಕಾರದಿಂದ ಸಣ್ಣ ನೀರಾವರಿ ಇಲಾಖೆ ಮೂಲಕ ೫ ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಗುಣಮಟ್ಟದಿಂದ ನಿರ್ಮಿಸಿದೆ ಎಂದರು.ಅದೇ ರೀತಿಯಲ್ಲಿ ರೈತರ ಏಳ್ಗೆಗಾಗಿ ಸಣ್ಣ ನೀರಾವರಿ ಇಲಾಖೆ ಮೂಲಕ ಸುಮಾರು ೫೫ ಮಂದಿ ಫಲಾನುಭವಿಗಳಿಗೆ ತಲಾ ೭ ಲಕ್ಷದಲ್ಲಿ ಉಚಿತ ಕೊಳವೆಬಾವಿಗಳನ್ನು ಕೊರೆಯಲು ೫ ಕೋಟಿ ರು.ಗಳ. ಅನುದಾನ ಬಿಡುಗಡೆಗೊಳಿಸಲಾಗಿದೆ ಫಲಾನುಭವಿಗಳಿಗೆ ಸಚಿವರಿಂದ ಆದೇಶ ಪ್ರತಿಗಳನ್ನು ವಿತರಿಸಲಾಗುತ್ತದೆ. ಆಯ್ಕೆಯಾದ ಫಲಾನುಭವಿಗಳಿಗೆ ತಕ್ಷಣ ಮೋಟಾರ್ ಪಂಪ್ ಕೇಬಲ್ ಸಲಕರಣೆಗಳನ್ನು ಒದಗಿಸಲು ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ರೈತರಿಗೆ ತೊಂದರೆ ಆಗದಂತೆ ಕ್ರಮ

ರೈತರಿಗೆ ಸ್ಪಂದಿಸುವ ಹಾಗೂ ಉತ್ತಮ ದೂರ ದೃಷ್ಟಿ ಹೊಂದಿರುವ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿದೆ. ನಾವು ಈ ಭಾಗದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಮೊದಲು ೩ ಕೋಟಿ ಬಿಡುಗಡೆಗೊಳಿಸಿದ್ದೇವು ಪುನಃ ಎರಡು ಕೋಟಿ ಬಿಡುಗಡೆಗೊಳಿಸಿ ಉತ್ತಮವಾಗಿ ಗುಣಮಟ್ಟದಿಂದ ಸೇತುವೆ ಜೊತೆಗೆ ಸುತ್ತಲೂ ಪಾಲಾರ್ ನದಿಗೆ ರಿವಿಟ್ಮೆಂಟ್ ನಿರ್ಮಿಸಿ ಅಕ್ಕಪಕ್ಕದ ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸಲಾಗಿದೆ. ಕೆಜಿಎಫ್ ತಾಲೂಕಿಗೆ ಸಣ್ಣ ಇಲಾಖೆಯಿಂದ ಸಚಿವ ಬೋಸ್‌ರಾಜ್ ೧೦ ಕೋಟಿ ಅನುದಾನ ನೀಡಿದ್ದಾರೆ.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಸುನಿತಾ ಚಂದ್ರಶೇಖರ್, ಜಿಪಂ ಮಾಜಿ ಸದಸ್ಯ ನಾರಾಯಣ್, ನಾರಾಯಣಸ್ವಾಮಿ, ಇನಾಯತ್ ಉಲ್ಲಾ, ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಕೃಷ್ಣಾರೆಡ್ಡಿ, ಕದರಿಪುರ ಸೊಸೈಟಿ ಅಧ್ಯಕ್ಷ ವಕೀಲ ಪದ್ಮನಾಭ ರೆಡ್ಡಿ, ಎಪಿಎಂಸಿ ಅಧ್ಯಕ್ಷ ವಿಜಯ್ ರಾಘವ ರೆಡ್ಡಿ, ಮಾಜಿ ಉಪಾಧ್ಯಕ್ಷ ದಶರಥ ರೆಡ್ಡಿ, ಮುಖಂಡರಾದ ಗೆನ್ನೇರಳ್ಳಿ ವೆಂಕಟರಾಮಪ್ಪ ಮತ್ತಿತರರು ಇದ್ದರು.