ಅಕ್ರಮ ದಾಸ್ತಾನು ಕೀಟನಾಶಕ ಜಪ್ತಿ

| Published : Aug 15 2024, 01:51 AM IST

ಸಾರಾಂಶ

ಅಕ್ರಮ ದಾಸ್ತಾನು ಕೀಟನಾಶಕ ಜಪ್ತಿ

ತುಮಕೂರುಪರವಾನಗಿ ಇಲ್ಲದೆ ಅನಧಿಕೃತವಾಗಿ ಕೀಟನಾಶಕವನ್ನು ದಾಸ್ತಾನು ಮಾಡಿದ್ದ ಅಂಗಡಿಯೊಂದಕ್ಕೆ ಸೇರಿದ ಮನೆಯ ಮೇಲೆ ಕೃಷಿ ಇಲಾಖೆ ಜಾರಿ ದಳದ ಅಧಿಕಾರಿಗಳು ದಾಳಿ ನಡೆಸಿ 4.32 ಲಕ್ಷ ರೂ. ಬೆಲೆಯ ಕೀಟನಾಶಕವನ್ನು ವಶಪಡಿಸಿಕೊಂಡಿದ್ದಾರೆ.ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಚಿಕ್ಕಪುರ ಗ್ರಾಮದ ಟಿ.ಬಿ. ಕ್ರಾಸ್‌ ಮುತ್ತುಗದಹಳ್ಳಿ ರಸ್ತೆಯಲ್ಲಿ ಇರುವ ಕಲ್ಲೇಶ್ವರ ಎಂಟರ್ ಪ್ರೈಸಸ್‌ರವರು ಕೀಟನಾಶಕವನ್ನು ಪರವಾನಗಿ ಇಲ್ಲದೆ ದಾಖಲಾತಿ ನಿರ್ವಹಣೆ ಇಲ್ಲದೆ ಅಕ್ರಮವಾಗಿ ದಾಸ್ತಾನು ಮಾಡಿದ್ದಾರೆ ಎಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ವಿಭಾಗದ ಜಂಟಿ ಕೃಷಿ ನರ್ದೇಗಶಕರ ಕಚೇರಿಯ ಜಾಗೃತ ಕೋಶದ ರೇಣುಕ ಪ್ರಸನ್ನ ನೇತೃತ್ವದಲ್ಲಿ ತುಮಕೂರು ಕೃಷಿ ಇಲಾಖೆ ಜಾರಿ ದಳದ ಸಹಾಯಕ ನಿರ್ದೇಶಕರಾದ ಪುಟ್ಟರಂಗಪ್ಪ, ಅಶ್ವತ್ಥ್‌ ನಾರಾಯಣ, ಸಹಾಯಕ ಕೃಷಿ ನಿರ್ದೇಶಕಿ ಪೂಜಾ, ಸೌಭಾಗ್ಯ ಅವರನ್ನೊಳಗೊಂಡ ತಂಡ ದಾಳಿ ಮಾಡಿ ಈ ಅಕ್ರಮ ಕೀಟನಾಶಕ ದಾಸ್ತಾನನ್ನು ಪತ್ತೆಹಚ್ಚಿ ಜಪ್ತಿ ಮಾಡಿದೆ.