ಸಾರಾಂಶ
ಅ.೧೦ರಂದು ಶಿವಮೊಗ್ಗದಲ್ಲಿ ವರ್ಷಿಣಿ ಯೋಗ ಶಿಕ್ಷಣ-ಸಾಂಸ್ಕೃತಿಕ ಹಾಗೂ ಕ್ರೀಡಾ ಟ್ರಸ್ಟ್ ನಡೆಸಿದ ೭ನೇ ವರ್ಷದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗಿಯಾಗಿ ವಿವಿಧ ಬಹುಮಾನಗಳಲ್ಲಿ ಪಡೆದು ಥೈಲಾಂಡ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸಾಂಥೋಮ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲ ಫಾದರ್ ಜಯಪ್ರಸಾದ್ ತಿಳಿಸಿದರು.ನಗರದ ಕ್ಯಾತುಂಗೆರೆಯಲ್ಲಿರುವ ಸಾಂಥೋಮ್ ಪಬ್ಲಿಕ್ ಶಾಲೆಯಲ್ಲಿ ನಡೆದ ಯೋಗಪಟುಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳು ಅ.೧೦ರಂದು ಶಿವಮೊಗ್ಗದಲ್ಲಿ ವರ್ಷಿಣಿ ಯೋಗ ಶಿಕ್ಷಣ-ಸಾಂಸ್ಕೃತಿಕ ಹಾಗೂ ಕ್ರೀಡಾ ಟ್ರಸ್ಟ್ ನಡೆಸಿದ ೭ನೇ ವರ್ಷದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಭಾಗಿಯಾಗಿ ವಿವಿಧ ಬಹುಮಾನಗಳಲ್ಲಿ ಪಡೆದು ಥೈಲಾಂಡ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದರು.ಯೋಗ ತರಬೇತಿದಾರರಾದ ಭಾನುಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಾದ ವಿಸ್ಮಯ ಕೆ.ಬಿ.ಚೌತಿ (ಪ್ರಥಮ),ರಾಶಿ, ಜನ್ಯ, ಯಶಶ್, ಸಿದ್ದಾರ್ಥ, ವಿಮುದಾ (ದ್ವಿತೀಯ), ಕುಲ್‌ದೀಪ್, ಕುಸುಮಾ, ಮಾನ್ವಿ (ತೃತೀಯ), ವಂಶಿಕಾ, ವೃಷ್ಠಿ, ಕಿಶನ್ (ಚತುರ್ಥಸ್ಥಾನ) ಇವರು ಬಹುಮಾನ ಪಡೆದು ಶಾಲೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಂಥೋಮ್ ಶಾಲೆ ಸಿಸ್ಟರ್ ಜೆನ್ಸಿ, ಶಿಂಟೋ ಥಾಮಸ್, ದೈಹಿಕ ಶಿಕ್ಷಣ ಶಿಕ್ಷಕ ಶಂಕರ್ ಮತ್ತಿತರರಿದ್ದರು.