ಕನ್ನಡಪ್ರಭವಾರ್ತೆ ಸೋಮವಾರಪೇಟೆ
ನೇಪಾಳದ ಕಾಠ್ಮಂಡುವಿನಲ್ಲಿ ನಡೆಯಲಿರುವ ಪ್ರಥಮ ಏಷಿಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಮನ್ವಿತ್ ಮೋಹನ್ ಅವರಿಗೆ ಐಗೂರು ಗ್ರಾಮ ಪಂಚಾಯಿತಿ ಸಹಾಯಧನ ಚೆಕ್ ವಿತರಿಸಿದರು.ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿದ್ಯಾರ್ಥಿಗೆ ಪಂಚಾಯಿತಿ ಅಧ್ಯಕ್ಷ ಬಿ.ಕೆ. ವಿನೋದ್ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಬಾರನ ಪ್ರಮೋದ್, ರಾಜೇಶ್, ಜೋಯಪ್ಪ, ಜುನೈದ್, ಜಾನಕಿ, ಕಾವೇರಿ ಹಾಗೂ ಪಿಡಿಒ ಪೂರ್ಣಕುಮಾರ್ ಉಪಸ್ಥಿತರಿದ್ದರು.ಏಷಿಯನ್ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆ: ವಿದ್ಯಾರ್ಥಿಗೆ ಸಹಾಯಧನ ವಿತರಣೆ
ಜ್ಞಾನಗಂಗಾ ವಸತಿ ಶಾಲೆಯ ವಿದ್ಯಾರ್ಥಿ ಮನ್ವಿತ್ ಮೋಹನ್ ಅವರಿಗೆ ಐಗೂರು ಗ್ರಾಮ ಪಂಚಾಯಿತಿ ಸಹಾಯಧನದ ಚೆಕ್ ವಿತರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.