ಮಂಡಿಬೆಲೆ ಡೇರಿಗೆ ನಿರ್ದೇಶಕರ ಆಯ್ಕೆ

| Published : Feb 10 2024, 01:49 AM IST

ಸಾರಾಂಶ

ವಿಜಯಪುರ: ಹೋಬಳಿಯ ಮಂಡಿಬೆಲೆ ಡೇರಿ ಆಡಳಿತ ಮಂಡಳಿ ನಿರ್ದೇಶಕರ ೧೨ ಸ್ಥಾನಗಳಿಗೆ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎನ್.ಎಸ್.ಮುರಳೀಕೃಷ್ಣ ಘೋಷಿಸಿದರು.

ವಿಜಯಪುರ: ಹೋಬಳಿಯ ಮಂಡಿಬೆಲೆ ಡೇರಿ ಆಡಳಿತ ಮಂಡಳಿ ನಿರ್ದೇಶಕರ ೧೨ ಸ್ಥಾನಗಳಿಗೆ ನೂತನ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎನ್.ಎಸ್.ಮುರಳೀಕೃಷ್ಣ ಘೋಷಿಸಿದರು.

ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಎಂ.ದೇವರಾಜಪ್ಪ ಮಾತನಾಡಿ, ಸಹಕಾರ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದರ ಜೊತೆಗೆ, ಹಾಲು ಉತ್ಪಾದಕರ ಹಿತ ಕಾಯುವುದು ಬಹಳ ಮುಖ್ಯ. ಗ್ರಾಪಂ ಮಾಜಿ ಅಧ್ಯಕ್ಷ ಆರ್.ಕೇಶವ ಅವರ ನೇತೃತ್ವದಲ್ಲಿ ೮ ಸ್ಥಾನಗಳನ್ನು ಪಡೆದಿರುವ ನಾವು ಡೇರಿಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ. ಪಕ್ಷಾತೀತವಾಗಿ ತಾರತಮ್ಯವಿಲ್ಲದೆ ಸಂಘವನ್ನು ಲಾಭದಾಯಕವಾಗಿ ಮುನ್ನಡೆಸಲು ಶ್ರಮಿಸುತ್ತೇವೆ ಎಂದರು.

ಚುನಾಯಿತರು:

ಸಾಮಾನ್ಯ ಕ್ಷೇತ್ರದಿಂದ ಕೇಶವಮೂರ್ತಿ, ವಸಂತಕುಮಾರ್.ವಿ, ಗೋಪಾಲ.ಕೆ, ನಾರಾಯಣರೆಡ್ಡಿ.ಆರ್, ಮುನೇಗೌಡ.ಎಂ, ನಾಗೇಶ್, ಸರಿತಾ.ಎಂ.ವಿ, ಗೌರಮ್ಮ, ನವೀನ್ ಕುಮಾರ್.ಎನ್, ಮುನಿರಾಜು.ಸಿ, ಸರಸ್ವತಮ್ಮ, ಶಿವಕುಮಾರ್.ಕೆ ಚುನಾಯಿತರಾಗಿದ್ದಾರೆ. ನೂತನ ನಿರ್ದೇಶಕರನ್ನು, ಗ್ರಾಮದ ಮುಖಂಡರು, ಯುವಕರು, ಹೂ ಮಾಲೆ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿನಂದಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಆರ್.ಕೇಶವ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಎಂ.ದೇವರಾಜಪ್ಪ, ಗಡ್ಡದನಾಯಕನಹಳ್ಳಿ ರಾಮಚಂದ್ರಪ್ಪ, ವೆಂಕಟೇಶ್, ಬಿ.ನಾರಾಯಣಸ್ವಾಮಿ, ಕೆಂಚಣ್ಣ, ಎಂ.ಮಂಜುನಾಥ್, ಸುಭ್ರಮಣಿ, ರಘು, ಮಹೇಶ್, ಗಿರಿರಾಜ್, ನಾರಾಯಣಪ್ಪ, ತತ್ತಮಮಂಗಲ ನಾಗರಾಜ್, ಕೆ.ಎಂ.ಮುನಿರಾಜು, ಅಂಬರೀಶ್, ಪ್ರಕಾಶ್, ಮುನೇಗೌಡ, ಬಿ.ಮಂಜುನಾಥ್, ಎಂ.ವಿಜಯಕುಮಾರ್, ಡೇರಿ ಹಾಲು ಪರೀಕ್ಷಕ ಡಿ ರಾಮಕೃಷ್ಣಪ್ಪ, ಸಹಾಯಕರಾದ ಎನ್ ರಾಜಣ್ಣ, ಕೆ,ಕೇಶವ ಉಪಸ್ಥಿತರಿದ್ದರು.